ನಾಗ್ಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭೆಯು ರೇಶಮ್ ಬಾಗ್ ನ ಸ್ಮೃತಿಭವನದಲ್ಲಿ ನಡೆಯುತ್ತಿದೆ. ಅಗಲಿದ ಗಣ್ಯರಿಗೆ, ಸಮಾಜ ಸೇವಕರಿಗೆ, ಹಿರಿಯ ಸ್ವಯಂಸೇವಕರಿಗೆ ಈ ಸಭೆಯಲ್ಲಿ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.
ಕರ್ನಾಟಕದಿಂದ ಅಸ್ಸಾಂ, ತ್ರಿಪುರ ಮತ್ತು ನಾಗಾಲ್ಯಾಂಡ್ ರಾಜ್ಯಗಳ ಮಾಜಿ ರಾಜ್ಯಪಾಲರಾಗಿದ್ದ ಉಡುಪಿಯ ಶ್ರೀ ಪದ್ಮನಾಭ ಆಚಾರ್ಯ, ಹಿರಿಯ ನಟಿ ಶ್ರೀಮತಿ ಲೀಲಾವತಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರ ಸೇವಾ ಪ್ರಮುಖರಾಗಿದ್ದ ಶ್ರೀ ಗೋಪಾಲ್ ಚೆಟ್ಟಿಯಾರ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಮಾಜಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಲೇಖಕ ಶ್ರೀ ಎನ್ ವೆಂಕೋಬ ರಾವ್, ಸಂಶೋಧಕ ಮತ್ತು ಕವಿ ಪ್ರೊ.ಅಮೃತ ಸೋಮೇಶ್ವರ, ಖ್ಯಾತ ಕಾದಂಬರಿಕಾರ ಶ್ರೀ ಕೆ.ಟಿ ಗಟ್ಟಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜೈನಮುನಿ ಪೂಜನೀಯ ವಿದ್ಯಾಸಾಗರ ಮಹಾರಾಜ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮನೋಹರ್ ಜೋಶಿ, ಯುಎಸ್ ಎಯ ಸಂಘಚಾಲಕರಾಗಿದ್ದ ವೇದ ಪ್ರಕಾಶ್ ನಂದ, ಪದ್ಮವಿಭೂಷಣ ಎಫ್ ಎಸ್ ನಾರಿಮನ್, ಖ್ಯಾತ ಸಿನೆಮಾ ನಿರ್ದೇಶಕ ಪದ್ಮಶ್ರೀ ಸಾಧು ಮೆಹರ್, ರೇಡಿಯೋ ಉದ್ಘೋಷಕ ಅಮಿನ್ ಸಯಾನಿ, ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕ ಉಸ್ತಾದ್ ರಶೀದ್ ಖಾನ್, ಖ್ಯಾತ ಗಜಲ್ ಗಾಯಕ ಪಂಕಜ್ ಉದಾಸ್, ಶಂಕರ ನೇತ್ರಾಲಯದ ಸಂಸ್ಥಾಪಕ ಪದ್ಮವಿಭೂಷಣ ಡಾ. ಎಸ್ ಎಸ್ ಬದ್ರಿನಾಥ್, ನಟ ಮತ್ತು ಡಿಎಂಡಿಕೆ ಪಕ್ಷದ ಸಂಸ್ಥಾಪಕ ಕ್ಯಾಪ್ಟನ್ ವಿಜಯಕಾಂತ್, ಉದ್ಯಮಿ ಶ್ರೀಚಂದ್ ಹಿಂದುಜಾ, ಕಲಾವಿದ ಪದ್ಮಭೂಷಣ ರಾಮಚಂದ್ರನ್ ನಾಯರ್, ಜಾನಪದ ಸಂಶೋಧಕ ಪದ್ಮಶ್ರೀ ಡಾ. ಪ್ರಭಾಕರ ಮಾಂಡೆ, ಸಿಖ್ ಸಂಗತ್ ನ ಪೋಷಕ ಸರ್ದಾರ್ ಚಿರನ್ ಜೀತ್ ಸಿಂಗ್, ಆರ್ ಎಸ್ ಎಸ್ ನ ಹಿರಿಯ ಪ್ರಚಾರಕರುಗಳಾದ ಕೇರಳದ ಕೆ. ಪುರುಷೋತ್ತಮನ್, ವಿದರ್ಭದ ರಾಮ್ ಭಾವು ವಿಶ್ವನಾಥ್ ಭೋಂಡಾಲೆ, ಛತ್ತೀಸಗಢದ ಬಾಳಾಸಾಹೇಬ್ ಸಿರ್ಪುರ್ಕರ್, ಮಹಾರಾಷ್ಟ್ರದ ವಿಶ್ವಾಸ ರಾವ್ ತಂಹನ್ಕರ್, ತಮಿಳುನಾಡಿನ ಸುಂದರ ಜ್ಯೋತಿ, ಝಾರ್ಖಂಡ್ ನ ಪ್ರಾಂತ ಕಾರ್ಯವಾಹ ರಾಮವಿಲಾಸ್ ಕೇವಟ್, ಕಾನಪುರದ ಪ್ರಾಂತ ಸಂಘಚಾಲಕ ರಾಜೇಂದ್ರ ಸಚನ್, ಜೈಪುರದ ಹಿರಿಯ ಪ್ರಚಾರಕ ಸತ್ಯನಾರಾಯಣ, ಅಸ್ಸಾಂನ ಕ್ಷೇತ್ರ ಗ್ರಾಮ ವಿಕಾಸ ಪ್ರಮುಖ್ ಖೇಮ್ ಖೌಂಡ್, ಅಸ್ಸಾಂ, ಬೆಂಗಾಲ್, ಝಾರ್ಖಂಡ್ ನಲ್ಲಿ ಪ್ರಚಾರಕರಾಗಿದ್ದ ವಿದರ್ಭದ ಸುಭಾಷ್ ಮನೋಹರ್ ಸರ್ವಾಟೆ, ಛತ್ತೀಸಗಢದ ವಿಭಾಗ ಸಾಮಾಜಿಕ ಸದ್ಭಾವ ಪ್ರಮುಖರಾಗಿದ್ದ ಬದ್ರಿ ಪ್ರತಾಪ್ ಪರಾಶರ, ಛತ್ತೀಸಗಢದ ಕುಟುಂಬ ಪ್ರಬೋಧನ್ ನ ಪ್ರಾಂತ ಸಂಯೋಜಕರಾಗಿದ್ದ ಪ್ರದೀಪ್ ಸೋನಿ, ಪರ್ಲೆಯ ವಿಭಾಗ ಸಂಘಚಾಲಕರಾಗಿದ್ದ ಸಂಜೀವ್ ಜವೇರಿ, ದೆಹಲಿ ಪ್ರಾಂತ ಘೋಷ್ ಪ್ರಮುಖರಾಗಿದ್ದ ವೇದಪ್ರಕಾಶ್ ಟುಳಿ, ದೆಹಲಿಯ ಹಿರಿಯ ವಾನಪ್ರಸ್ಥಿ ಭೋಲಾನಾಥ, ಕಾಶಿಯ ಪ್ರಮೋದ್ ಕುಮಾರ್, ಛತ್ತೀಸಗಢದ ಹಿರಿಯ ಪ್ರಚಾರಕ ನರೇಂದ್ರ ಸಿನ್ಹಾ, ಉತ್ತರ ಬಂಗ ಪ್ರಾಂತದ ಸೇವಾಭಾರತಿ ಅಧ್ಯಕ್ಷರಾದ ಖುಲಛತ್ರ ಪ್ರಸಾದ್ ಅಗರ್ವಾಲ್, ಅಸ್ಸಾಂ ನ ಗ್ರಾಹಕ ಪಂಚಾಯತ್ ರಾಜ್ಯಾಧ್ಯಕ್ಷ ಮುನ್ನಿಂದ್ರನಾಥ ಶರ್ಮಾ, ಅಸ್ಸಾಂನ ವಿಶ್ವ ಹಿಂದೂ ಪರಿಷತ್ ರಾಜ್ಯ ಕಾರ್ಯಾಧ್ಯಕ್ಷ ಲಕ್ಷಿ ದತ್, ಆರೋಗ್ಯ ಭಾರತಿಯ ಉತ್ತರ ಪ್ರದೇಶ ಕ್ಷೇತ್ರ ಸಂಯೋಜಕ ಗೋವಿಂದ್, ಭಾರತೀಯ ಮಜ್ದೂರ್ ಸಂಘದ ಅಧ್ಯಕ್ಷರಾಗಿದ್ದ ಗೋವಿಂದ ರಾವ್ ಅಥವಾಲೆ, ಅವಧ್ ನ ಪ್ರಚಾರಕರಾಗಿದ್ದ ಹೃದಯನಾಥ ಸಿಂಗ್, ಪಂಜಾಬ್ ನ ರಾಷ್ಟ್ರೀಯ ಭದ್ರತಾ ಸಮಿತಿಯ ಬಲದೇವ್ ಪ್ರಕಾಶ್ ಚಾವ್ಲಾ, ಐಸಿಸಿಎಸ್ ಕೀನ್ಯದ ಕಿರಣ್ ಶಾ, ವಿಶ್ವ ಹಿಂದೂ ಪರಿಷತ್ ಗುಯಾನದ ಅಧ್ಯಕ್ಷ ಜಸ್ಟಿಸ್ ನಂದ್ರಮ್ ಕಿಸ್ಸೂನ್, ಭಾರತೀಯ ಕಿಸಾನ್ ಸಂಘದ ಮಾಜಿ ಪ್ರಾಂತ ಕಾರ್ಯಕಾರಿಣಿ ಸದಸ್ಯ ಭೂಮರೆಡ್ಡಿ, ಭಾರತೀಯ ಕಿಸಾನ್ ಸಂಘದ ಮಾಜಿ ರಾಜ್ಯ ಉಪಾಧ್ಯಕ್ಷ ಭಂಡಾರಿ ಕೇಶವರಾವ್, ಭಾರತೀಯ ಕಿಸಾನ್ ಸಂಘದ ಮಾಜಿ ಉಪಾಧ್ಯಕ್ಷ ವಿಮ್ಲಾ ತಿವಾರಿ, ಝಾರ್ಖಂಡ್ ನ ಭಾರತೀಯ ಕಿಸಾನ್ ಸಂಘದ ಮಾಜಿ ರಾಜ್ಯಾಧ್ಯಕ್ಷ ಗೋಪಾಲ್ ನಾಗೇಸಿಯಾ, ಸಹಾಕಾರ ಭಾರತಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುಭಾಷ್ ಮಾಂಡ್ಗೆ, ರಾಷ್ಟ್ರಪ್ರಶಸ್ತಿ ವಿಜೇತ ಗಾಯಕಿ ಭವತಾರಿಣಿ, ಗಾಯಕಿ ಪ್ರಭಾ ಆತ್ರೆ, ಮಲಯಾಳಂ ಕವಿ ಎನ್ ಕೆ ದೇಸಂ, ಕೇರಳದ ಪಿ ಜಿ ಸಸಿಕುಮಾರ ವರ್ಮಾ, ಕೇರಳದ ಕಲಾವಿದ ತ್ರಿಶ್ರೂರ್ ಮೋಹನನ್, ಮಲಯಾಳಂ ಲೇಖಕಿ ಕೆ ಬಿ ಶ್ರೀದೇವಿ, ಉತ್ತರ ಬಂಗದ ಶಿಕ್ಷಕ, ಪತ್ರಕರ್ತ, ಅಂಕಣಕಾರ ತರುಣ್ ಕುಮಾರ್ ಪಂಡಿತ್, ಸೌರಾಷ್ಟ್ರದ ಮಾಂಜಿಭಾಯಿ ಕಛ್ಛಾಡಿಯಾ, ಗುಜರಾತ್ ನ ಸಾಮಾಜಿಕ ಕಾರ್ಯಕರ್ತ ಶಾರ್ದ ಬೆನ್ ಮೆಹ್ತಾ, ಆರೋಗ್ಯ ಭಾರತಿಯ ಪಂಜಾಬಿನ ಪ್ರಾಂತ ಅಧ್ಯಕ್ಷ ಈಶ್ವರ ಚಂದ್ರ ಸರ್ದಾನ, ಪಂಜಾಬ್ ನ ಪ್ರಾಂತ ಕಾರ್ಯವಾಹ ದೇವೇಂದ್ರ ಗುಪ್ತ, ಕ್ಯಾಲಿಫೋರ್ನಿಯಾದ ಮಿಲಿಂದ್ ಮಕ್ವಾನ, ಚಿತ್ತೋಡದ ಸಹ ಪ್ರಾಂತ ವ್ಯವಸ್ಥಾ ಪ್ರಮುಖ್ ಓಂ ಪ್ರಕಾಶ್ ಗೋಯಲ್, ತಮಿಳುನಾಡಿನ ಸಿಪಿಐ(ಎಂ) ನ ಸಂಸ್ಥಾಪಕ ಸದಸ್ಯ ಎನ್ ಶಂಕರಯ್ಯ, ಸಾಹಿತಿ ಡಾ. ಕನ್ಹಯ್ಯ ಸಿಂಗ್, ಸಾಹಿತ್ಯ ಪರಿಷದ್ ನ ರಾಮನಾಥ ತ್ರಿಪಾಠಿ ಸೇರಿದಂತೆ ಕಳೆದ ನವೆಂಬರ್ 5, 2023ರಿಂದ ಮಾರ್ಚ್ 2024ರವರೆಗಿನ ಕಾಲಾವಧಿಯಲ್ಲಿ ಅಗಲಿದ ರಾಷ್ಟ್ರದ 67 ಮಂದಿ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.