ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಶ್ರಿಮತಿ ಉಮಾಶ್ರೀ ಅವರು ಬೆಂಗಳೂರು ವಿಶ್ವವಿದ್ಯಾಲಯದ ಆವರಣ ಜ್ಞಾನಭಾರತಿಯ ಕಲಾಗ್ರಾಮದಲ್ಲಿ ಜೂನ್ 19ರಂದು ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದರು.
Bangalore June 19: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ ಹಾಗೂ ಲೇಖಕ ಚಂದ್ರಶೇಖರ ಭಂಡಾರಿ ಅವರಿಗೆ ಕರ್ನಾಟಕ ಸರಕಾರದ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ೨೦೧೧ನೇ ಸಾಲಿನ ಪುಸ್ತಕ ಬಹುಮಾನ (ಅನುವಾದ) ಪ್ರಶಸ್ತಿ ದೊರೆತಿದೆ.
ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಶ್ರಿಮತಿ ಉಮಾಶ್ರೀ ಅವರು ಬೆಂಗಳೂರು ವಿಶ್ವವಿದ್ಯಾಲಯದ ಆವರಣ ಜ್ಞಾನಭಾರತಿಯ ಕಲಾಗ್ರಾಮದಲ್ಲಿ ಜೂನ್ ೧೯ರಂದು ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಚಂದ್ರಶೇಖರ ಭಂಡಾರಿ ಅವರ ಸಮರ್ಥ ಅನುವಾದ ಕೃತಿಯಾದ ’ಸಾಮಾಜಿಕ ಕ್ರಾಂತಿಸೂರ್ಯ ಡಾ|| ಬಾಬಾಸಾಹೇಬ್ ಅಂಬೇಡ್ಕರ್’ಗೆ ಈ ಪ್ರಶಸ್ತಿ ದೊರೆತಿದೆ. ಕರ್ನಾಟಕ ಸರಕಾರದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ನೀಡುವ ಈ ಪ್ರಶಸ್ತಿಯು ೧೦,೦೦೦ ರೂಪಾಯಿ ಬಹುಮಾನ ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ.
ಡಾ|| ಬಾಬಾಸಾಹೇಬ್ ಅಂಬೇಡ್ಕರ್ರ ಅಂತಿಮ ವರ್ಷಗಳಲ್ಲಿ ಅವರ ಸತತ ಒಡನಾಟದ ಭಾಗ್ಯ ಪಡೆದವರೂ ಮತ್ತು ಚಿಂತಕರೂ-ಸಾಮಾಜಿಕ ಕಾರ್ಯಕರ್ತರೂ ಆದ ದತ್ತೋಪಂತ ಠೇಂಗಡಿ ಅವರು ಮರಾಠಿಯಲ್ಲಿ ಬರೆದ ‘ಸಾಮಾಜಿಕ ಕ್ರಾಂತೀಚೀ ವಾಟಚಾಲ ಆಣಿ ಡಾ|| ಅಂಬೇಡ್ಕರ್’ ಕೃತಿಯನ್ನು ಚಂದ್ರಶೇಖರ ಭಂಡಾರಿ ಅವರು ಕನ್ನಡಕ್ಕೆ ಅನುವಾದಿಸಿ ಕನ್ನಡ ಸಹೃದಯ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದರು. ಡಾ|| ಬಾಬಾಸಾಹೇಬ ಅಂಬೇಡ್ಕರ್ರ ವ್ಯಕ್ತಿತ್ತ್ವ ಮತ್ತು ಜೀವನಕಾರ್ಯ (mission) – ಇವುಗಳ ಕುರಿತ ಅಧ್ಯಯನ ಪೂರ್ಣ ಗ್ರಂಥವಾಗಿದೆ. ಇದರ ಸಮರ್ಥ ಅನುವಾದಕ್ಕಾಗಿ ಚಂದ್ರಶೇಖರ ಭಂಡಾರಿ ಅವರಿಗೆ ಈ ಪ್ರಶಸ್ತಿ ಲಬಿಸಿದೆ.
ರಾಷ್ಟ್ರೋತ್ಥಾನ ಸಾಹಿತ್ಯ ಈ ಕೃತಿಯನ್ನು ೨೦೧೧ರಲ್ಲಿ ಪ್ರಕಟಿಸಿತ್ತು.
ಕಾರ್ಯಕ್ರಮದಲ್ಲಿ ಸೆಂಟರ್ ಫಾರ್ ಇಂಡಿಯಾ ಸ್ಟಡೀಸ್ ಸ್ಟೇಟ್ ಯೂನಿವರ್ಸಿಟಿ ಆಫ್ ನ್ಯೂ ಯಾರ್ಕ್ನ ಡಾ. ಎಸ್.ಎನ್. ಶ್ರೀಧರ್, ಕುವೆಂಪು ಭಾಷಾ ಪ್ರಾಧಿಕಾರ ಸಮಿತಿಯ ಅಧ್ಯಕ್ಷ ಕೆ ವಿ ನಾರಾಯಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಎ. ದಯಾನಂದ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆರೆಸ್ಸೆಸ್ನ ಹಿರಿಯ ಪ್ರಚಾರಕರಾದ ಮೈ.ಚ. ಜಯದೇವ್, ನ. ಕೃಷ್ಣಪ್ಪ, ರಾಷ್ಟ್ರೋತ್ಥಾನ ಪರಿಷತ್ನ ಅಧ್ಯಕ್ಷರಾದ ಡಾ. ಎಸ್.ಆರ್. ರಾಮಸ್ವಾಮಿ, ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ವಿ. ನಾಗರಾಜ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಶಸ್ತಿ ಪುರಸ್ಕೃತ ಕೃತಿ : ಸಾಮಾಜಿಕ ಕ್ರಾಂತಿಸೂರ್ಯ ಡಾ|| ಬಾಬಾಸಾಹೇಬ್ ಅಂಬೇಡ್ಕರ್
ಲೇಖಕರು (ಮರಾಠಿ ಮೂಲ) : ದತ್ತೋಪಂತ ಠೇಂಗಡಿ
ಅನುವಾದಕರು : ಚಂದ್ರಶೇಖರ ಭಂಡಾರಿ
ಪ್ರಕಾಶಕರು : ರಾಷ್ಟ್ರೋತ್ಥಾನ ಸಾಹಿತ್ಯ
ಪುಸ್ತಕದ ಬೆಲೆ : ೪೦೦ ರೂಪಾಯಿ