ಪುತ್ತೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಪುತ್ತೂರು ಜಿಲ್ಲಾ ಸಂಘಚಾಲಕರಾಗಿ ಜವಬ್ದಾರಿ ನಿರ್ವಹಿಸುತ್ತಿದ್ದ ಬಂಟ್ವಾಳ ತಾಲೂಕಿನ ಕೊಡ್ಮಣ್ ನಿವಾಸಿ ಕಾಂತಪ್ಪ ಶೆಟ್ಟಿ ಕೊಡ್ಮಣ್ ಇಂದು(ಮೇ 22) ಮಧ್ಯಾಹ್ನ ಅನಾರೋಗ್ಯದ ಕಾರಣ ನಿಧನರಾಗಿದ್ದಾರೆ.

ಭಾರತೀಯ ಮಜ್ದೂರ್ ಸಂಘದಲ್ಲಿ ಮೂರು ವರ್ಷಗಳ ಕಾಲ ಪೂರ್ಣಾವಧಿಯಾಗಿ, ವಿಟ್ಲ ವಿಧಾನಸಭಾ ಕ್ಷೇತ್ರವಾಗಿದ್ದಾಗ ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ 3 ವರ್ಷ ಮತ್ತು ಅಧ್ಯಕ್ಷರಾಗಿ ಒಂದು ವರ್ಷ ಕಾರ್ಯನಿರ್ವಹಿಸಿದ್ದರು. ಸುಮಾರು 15 ವರ್ಷಗಳ ಕಾಲ ಮೇರಮಜಲು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು. ನಂತರದ ದಿನಗಳಲ್ಲಿ 3 ವರ್ಷಗಳ ಕಾಲ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪುತ್ತೂರು ತಾಲೂಕು ಸಂಘಚಾಲಕರಾಗಿ, ಕಳೆದ ಆರು ವರ್ಷಗಳಿಂದ ಪುತ್ತೂರು ಜಿಲ್ಲಾ ಸಂಘಚಾಲಕರಾಗಿ ಕರ್ತವ್ಯ ನಿಭಾಯಿಸುತ್ತಿದ್ದರು.
