ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಗಳೂರು ಸಾಮರಸ್ಯ ವಿಭಾಗದ “ತುಡರ್ ” ಕಾರ್ಯಕ್ರಮ

ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಶ್ರಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಗಳೂರು ಸಾಮರಸ್ಯ ವಿಭಾಗದ “ತುಡರ್ ” ಕಾರ್ಯಕ್ರಮ ನ.5 ರಂದು ಶುಕ್ರವಾರ ನಡೆಯಿತು.

ಪೊಳಲಿ ದೇವಸ್ಥಾನದ ಅರ್ಚಕರಾದ ಶ್ರೀ ನಾರಾಯಣ ಭಟ್ ಹಾಗೂ ಶ್ರೀ ಪರಮೇಶ್ವರ ಭಟ್ ಅವರು ಗರ್ಭಗುಡಿಯಿಂದ ದೀಪವನ್ನು ಉಪೇಕ್ಷಿತರ ಕುಟುಂಬದ ಸದಸ್ಯರಾದ ಶ್ರೀಮತಿ ಗೀತಾ ಮತ್ತು ಶ್ರೀ ಗಣೇಶ್ ಅವರಿಗೆ ನೀಡಿದರು.

ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆಯೊಂದಿಗೆ ದೇವಸ್ಥಾನದ ಅರ್ಚಕರು ಕೊಟ್ಟ ದೀಪವನ್ನು ಉಪೇಕ್ಷಿತ ಬಂಧು ಶ್ರೀ ಗಣೇಶ್ ಸಾಣೂರೊಪದವು ಅವರ ಮನೆಯಲ್ಲಿ ದೇವರ ಮುಂದೆ ಇಟ್ಟು ಅಲ್ಲಿಯೂ ದೀಪಗಳನ್ನು ಬೆಳಗಿಸಿ ಅವರೊಂದಿಗೆ ಊರಿನವರೆಲ್ಲ ಒಟ್ಟಾಗಿ ಉಪಹಾರವನ್ನು ಸ್ವೀಕರಿಸಿ, ದೀಪಾವಳಿಯನ್ನು ಅವರೊಂದಿಗೆ ಆಚರಿಸಲಾಯಿತು.

Leave a Reply

Your email address will not be published.

This site uses Akismet to reduce spam. Learn how your comment data is processed.