ಸಾಮರಸ್ಯ ವೇದಿಕೆ ಆಯೋಜನೆಯ ದೀಪಾವಳಿ: ಪೇಜಾವರ ಸ್ವಾಮೀಜಿ ಪೌರ ಕಾರ್ಮಿಕರ ಮನೆಗಳಿಗೆ ಭೇಟಿ

ಉಡುಪಿ: ಉಡುಪಿ ನಗರದ ಸಮೀಪ ಬೀಡಿನಗುಡ್ಡೆಯಲ್ಲಿರುವ ಪೌರ ಕಾರ್ಮಿಕರ ಕಾಲೊನಿಯಲ್ಲಿ ಸಾಮರಸ್ಯ ಗತಿವಿದಧಿಯ ಆಶ್ರಯದಲ್ಲಿ ವಿಶೇಷ ರೀತಿಯಲ್ಲಿ ದೀಪಾವಳಿ  ಕಾರ್ಯಕ್ರಮ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕಾಲೊನಿಯ   ಪ್ರಾರ್ಥನಾ ಮಂದಿರಕ್ಕೆ ಭೇಟಿ ನೀಡಿ ದೇವರ ಸಾಲಂಕೃತ ಭಾವಚಿತ್ರಗಳಿಗೆ ಮಂಗಳಾರತಿ ಬೆಳಗಿ, ಕಾಲೊನಿ ನಿವಾಸಿಗಳು ಅರ್ಪಿಸಿದ ಭಕ್ತಿ ಗೌರವವನ್ನು ಸ್ವೀಕರಿಸಿ ಅನುಗ್ರಹ ಸಂದೇಶ ನೀಡಿದರು.


ನಮ್ಮ ಪೂರ್ವಜರು ಹಾಕಿಕೊಟ್ಟ ಸನಾತನ ಸಂಪ್ರದಾಯ ಮತ್ತು ಆಚರಣೆಗಳನ್ನು ಮುಂದುವರೆಸಿಕೊಂಡು ಬರಬೇಕು. ಎಷ್ಟೇ ಕಷ್ಟ ಬಂದರೂ ದೇವರ ಸ್ಮರಣೆ ತಪ್ಪಬಾರದು. ನಮ್ಮ ನಮ್ಮ ವಿಹಿತ ಕರ್ತವ್ಯಗಳ ಜೊತೆಗೆ ಭಗವಂತನ ಕೃಪೆಗಾಗಿ ಅನುನಿತ್ಯ ಪ್ರಾರ್ಥಿಸಬೇಕು ಎಂದರು.


ನಂತರ ಕಾಲೋನಿಯ ಮನೆಗಳಿಗೆ ಸ್ವಯಂ ತೆರಳಿ ಹಣತೆ ದೀಪ ಬೆಳಗುವ ಮೂಲಕ ಮನೆಯ ಸದಸ್ಯರ ಜೊತೆ ಉಭಯ ಕುಶಲೋಪರಿ ನಡೆಸಿ ಬೆಳಕಿನ ಹಬ್ಬದ ಆಶೀರ್ವಚನಗೈದರು.

ಕಾಲೊನಿಯ ಮನೆಗಳ ದೇವರ ಕೋಣೆಯ ಗೋಡೆಗಳಲ್ಲಿ ಅಳವಡಿಸಲು ರಾಮ – ಕೃಷ್ಣ ಮಂತ್ರಗಳ ಫಲಕಗಳನ್ನು ಶ್ರೀಗಳು ವಿತರಿಸಿದರು.

ಕಾಲೊನಿಯ ಪ್ರಮುಖರಾದ ಜಯರಾಮ್, ಸೂರ್, ,ರಾಷ್ಟ್ರೀಯ ಸ್ವಯಂಸೇವಕ ಸಂಘದ ಉಡುಪಿ ಜಿಲ್ಲಾ ಸಂಘಚಾಲಕರಾದ ಡಾ. ನಾರಾಯಣ ಶೆಣೈ, ಜಿಲ್ಲಾ ಸಾಮರಸ್ಯ ಗತಿವಿಧಿ ಪ್ರಮುಖ ರವಿ ಅಲೆವೂರು, ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ, ನಗರ ಸಾಮರಸ್ಯ ಪ್ರಮುಖ ನವೀನ್, ಅಜಿತ್ ಪೈ, ಕೃಷ್ಣ ಭಟ್, ಸದಸ್ಯರಾದ ಗೀತಾ ಶೇಟ್, ಸಂಧ್ಯಾರಮೇಶ, ಲೀಲಾ ಅಮೀನ್  ಮೊದಲಾದವರು ಸಹಕರಿಸಿದರು.

ತದನಂತರ ಕಾಲೊನಿಯವರ  ಮನೆಗಳಲ್ಲಿ ನಮ್ಮ ಸಾಮರಸ್ಯ ಸದಸ್ಯರು ಮನೆಯವರೊಂದಿಗೆ ಸಹ ಭೋಜನ ನಡೆಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.