
ಉಡುಪಿ, ಫೆಬ್ರವರಿ 4, 2024: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ, ಬಿಜೆಪಿಯ ಹಿರಿಯ ನಾಯಕ ಸೋಮೇಶೇಖರ ಭಟ್ (89 ವರ್ಷ) ಇಂದು ವಯೋಸಹಜ ಕಾರಣಗಳಿಂದ ನಿಧನರಾಗಿದ್ದಾರೆ.
ಸಂತಾಪ: ಅಗಲಿದ ಹಿರಿಯ ಸ್ವಯಂಸೇವಕ ಸೋಮೇಶೇಖರ ಭಟ್ ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆಯವರು, ಪೇಜಾವರ ಶ್ರೀಗಳು ಸೇರಿದಂತೆ ಅನೇಕ ನಾಯಕರುಗಳು ಸಂತಾಪ ಸೂಚಿಸಿದ್ದಾರೆ.
ಸಂತಾಪ ಸಂದೇಶ : ಸೋಮಶೇಖರ ಭಟ್ಟರ ಕುಟುಂಬದ ಎಲ್ಲರಿಗೆ ನನ್ನ ತೀವ್ರ ಸಂತಾಪಗಳು. ಸಮರ್ಪಿತ ಜೀವ ಒಂದು ತನ್ನ ಯಾತ್ರೆಯನ್ನು ಮುಗಿಸಿದೆ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ. ಓಂ ಶಾಂತಿಃ॥
– ದತ್ತಾತ್ರೇಯ ಹೊಸಬಾಳೆ
ಸರಕಾರ್ಯವಾಹರು
ರಾಷ್ಟ್ರೀಯ ಸ್ವಯಂಸೇವಕ ಸಂಘ ಪರಿಚಯ:
- ಪರಿಚಯ
ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ (ರಿ) ಕಡಿಯಾಳಿ ಇದರ ಸ್ಥಾಪಕ ಸದಸ್ಯರಾಗಿ, ಕುಂಜಿಬೆಟ್ಟು ಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘ(ರಿ)ದ ನಿರ್ದೇಶಕರಾಗಿದ್ದರು.

ಎಲ್ ಕೆ ಅಡ್ವಾನಿ, ವಿಎಸ್ ಆಚಾರ್ಯ, ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಅನೇಕ ಮುಖಂಡರ ನಿಕಟವರ್ತಿಯಾಗಿದ್ದರು. ಅವರ ಶ್ರಮದ ಪ್ರಾಮುಖ್ಯತೆಯನ್ನು ಗುರುತಿಸಿ 2020ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕರೆಮಾಡಿ ಆರೋಗ್ಯವನ್ನು ವಿಚಾರಿಸಿದ್ದರು.