Bangalore March 18: ಆರೆಸ್ಸೆಸ್ ಸ್ಥಾಪಕ ಡಾ. ಕೇಶವ ಬಲಿರಾಂ ಹೆಡಗೆವಾರ್ ರ 123 ನೇ ಜನ್ಮದಿನದ ಪ್ರಯುಕ್ತ ಬೆಂಗಳೂರಿನ ವಿಜಯನಗರ ಭಾಗದಲ್ಲಿ 18-03-2012 ರಂದು ಸೇವಾ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.
ಗೋವಿಂದರಾಜನಗರ ಮತ್ತು ದೀಪಾಂಜಲಿನಗರ:
ಯಾದವ ಸೇವಾ ಪ್ರತಿಷ್ಠಾನ ಮತ್ತು ಮಹಾವೀರ್ ಜೈನ್ ನೇತ್ರಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಚಂದ್ರಾ ಬಡಾವಣೆಯ ಅರುಂಧತಿ ನಗರದಲ್ಲಿರಿರುವ ಸೇವಾಬಸ್ತಿ(slum) ನಲ್ಲಿ ಉಚಿತ ನೇತ್ರಾ ತಪಾಸಣ ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ಅರುಂಧತಿ ನಗರದಲ್ಲಿರುವ ಸರ್ಕಾರಿ ಶಾಲೆ ಯಲ್ಲಿ ಆಯೋಜಿಸಲಾಗಿತ್ತು.
ಶಿಬಿರದ ಕೆಲವು ಉಲ್ಲೇಖನೀಯ ಅಂಶಗಳು
- ಶಿಬಿರದ ಪೂರ್ವಬಾವಿಯಾಗಿ ಅರುಂಧತಿನಗರ ಮತ್ತು ನಾಗರಬಾವಿಯಲ್ಲಿ ಸುಮಾರು 300 ಮನೆ ಮನೆಗೆ ತೆರಳಿ ಅವರ ಮನೆಗಳಲ್ಲಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ವಿಚಾರಿಸಿ ಅವರಿಗೆಲ್ಲ ಕಾರ್ಡ್ ವಿತರಿಸಾಯಿತು.
- ಶಿಬಿರದಲ್ಲಿ ಸುಮಾರು 120 ಕ್ಕೂ ಹೆಚ್ಚು ಜನರು ಸೇವೆಯನ್ನು ಪಡೆದುಕೊಂಡರು.
- 13 ಜನಗಳಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸಲಾಯಿತು.
- ಸುಮಾರು 14 ಜನರನ್ನು ಮಧುಮೇಹ ಮತ್ತು ರಕ್ತದೊತ್ತಡ ತೊಂದರೆ ಇರುವವಗೆ ಪ್ರತಿ ತಿಂಗಳು ಅವರ ತಪಾಸಣೆ ನಡೆಸಿ ಅಗತ್ಯವಿರುವ ಔಷಧಿ ವದಗಿಸಲು ಗುರುತಿಸಲಾಗಿದೆ.
ವಿಜಯನಗರ:
ಯಾದವ ಸೇವಾ ಪ್ರತಿಷ್ಠಾನ ಮತ್ತು ರಾಷ್ಟ್ರೋತ್ಥಾನ ರಕ್ತನಿಧಿ ಇವರ ಸಂಯುಕ್ತ ಆಶ್ರಯದಲ್ಲಿ ಹಂಪಿನಗರ ದಲ್ಲಿ ರಕ್ತದಾನಶಿಬಿರವನ್ನು ಆಯೋಜಿಸಲಾಗಿತ್ತು. 103 ಜನ ರಕ್ತದಾನ ಮಾಡುವುದರೊಂದಿಗೆ ಶಿಬಿರದಲ್ಲಿ ಪಾಲ್ಗೊಂಡರು.
ಜ್ಞಾನಭಾರತಿನಗರ:
ಯಾದವ ಸೇವಾ ಪ್ರತಿಷ್ಠಾನ ಮತ್ತು ರಾಷ್ಟ್ರೋತ್ಥಾನ ರಕ್ತನಿಧಿ ಇವರ ಸಂಯುಕ್ತ ಆಶ್ರಯದಲ್ಲಿ ಜ್ಞಾನಜ್ಯೋತಿನಗರ ದಲ್ಲಿ ರಕ್ತದಾನಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದಲ್ಲಿ 81 ಜನ ರಕ್ತದಾನ ಮಾಡುವುದರೊಂದಿಗೆ ಪಾಲ್ಗೊಂಡರು.