ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಬನಶಂಕರಿ ಭಾಗದ ‘ಸೇವಾ ಸಾಂಘಿಕ್ ‘ನ ಅಡಿಯಲ್ಲಿ ಭಾನುವಾರದಂದು  “ಸಾರಕ್ಕಿ ಕೆರೆ” ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

DSC04036 (1)

 

ಸಾಂಘಿಕ್ ನಲ್ಲಿ ಪ್ರಾಂತ ಸೇವಾ ಪ್ರಮುಖರಾದ ಶ್ರೀ ಸದಾಶಿವ್ ಸೇವೆಯ ಮಹತ್ವ ತಿಳಿಸಿದರು. ಸ್ವಚ್ಚತಾ ಕಾರ್ಯಕ್ರಮದಲ್ಲಿ ಸಂಘದ ಸ್ವಯಂ ಸೇವಕರ ಜೊತೆ ಬೆಂಗಳೂರು ಮಹಾನಗರಪಾಲಿಕೆ ಕಾರ್ಮಿಕರು, ಅಧಿಕಾರಿಗಳು, ಬಿ ಜೆ ಪಿ ಯ ಕಾರ್ಯಕರ್ತರು, ಎನ್ ಸಿ ಸಿ ಸ್ವಯಂ ಸೇವಕರು ಭಾಗವಹಿಸಿದ್ದರು. 600  ಕ್ಕೂ ಹೆಚ್ಚು ಜನಭಾಗವಹಿಸಿದ್ದು ಸ್ಥಳೀಯರಲ್ಲಿ ಮತ್ತು ರಸ್ತೆಯಲ್ಲಿ ಓಡಾಡುತ್ತಿದ್ದ ಜನರಲ್ಲಿ ವಿಶೇಷ ಆಸಕ್ತಿ ಮೂಡಿಸಿತು. ಇದರಿಂದ ಸ್ಪೂರ್ತಿಗೊಂಡ ನಾಗರೀಕರು ಸ್ವಯಂ ಪ್ರೇರಣೆಯಿಂದ ಪಾಲುಗೊಂಡು ಸ್ವಚ್ಚತಾ ಕಾರ್ಯವನ್ನು ಪ್ರಶಂಸಿದರು. ಸ್ಥಳೀಯ ಶಾಸಕರಾದ ಬಿ ಎನ್ ವಿಜಯಕುಮಾರ್, ಶ್ರೀ ಎಂ. ಸತೀಶ ರೆಡ್ಡಿ, ಎಂ. ಕೃಶ್ಣಪ್ಪ, ಜಯನಗರ ಮತ್ತು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮಹಾ ನಗರಸಭಾ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸ್ವಚ್ಚಾತಾ ಕಾರ್ಯಕ್ರಮ ಯಶಸ್ವಿಯಾಗಿ ನಡೆದು ಕೆರೆಯ ಅಂದವನ್ನು ಹೆಚ್ಚಿಸಿದೆ, ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕರಾದ ಮಾ. ವೆಂಕಟರಾಮ್ ರವರು ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಕಾರ್ಯಕ್ರಮಕ್ಕೆ ವಿಶೇಷತೆ ಮೂಡಿಸಿತ್ತು.

DSC03992 DSC03993 DSC04010

1 thought on “ಸೇವಾ ಸಾಂಘಿಕ್: ಆರೆಸ್ಸೆಸ್ ಕಾರ್ಯಕರ್ತರಿಂದ ಸಾರಕ್ಕಿ ಕೆರೆ ಸ್ವಚ್ಛತೆ

  1. ತುಂಬಾ ಸಂತಸದ ವಿಷಯ ….
    ಸರ್ಕಾರದಿಂದ ಹೂಳೆತ್ಟಿಸುವ ಕೆಲಸವಾಗಿದ್ದರೆ ಚೆನ್ನಾಗಿರುತ್ತಿತ್ತು

Leave a Reply

Your email address will not be published.

This site uses Akismet to reduce spam. Learn how your comment data is processed.