ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿವಮೊಗ್ಗ ನಗರದ ವತಿಯಿಂದ ವಿಜಯದಶಮಿ ಪ್ರಯುಕ್ತ ಗಣವೇಷಧಾರಿ ಸ್ವಯಂಸೇವಕರಿಂದ ಪಥ ಸಂಚಲನ ನಡೆಯಿತು. ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಿಂದ ಹೊರಟ ಪಥ ಸಂಚಲನವು ರಾಮಣ್ಣ ಶ್ರೇಷ್ಠಿ ಪಾರ್ಕ್ ವೃತ್ತ, ಬಸವೇಶ್ವರ ದೇವಸ್ಥಾನ, ಸಿದ್ದಯ್ಯ ರಸ್ತೆ, ಎಂ ಕೆ ಕೆ ರಸ್ತೆ, ಸಾವರ್ಕರ್ ಸರ್ಕಲ್, ಶಿವಪ್ಪ ನಾಯಕ ವೃತ್ತ, ಗಾಂಧಿ ಬಜಾರ್ ಅಶೋಕ ರಸ್ತೆಯ ಮುಖಾಂತರ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣ ತಲುಪಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘಚಾಲಕ ಬಿ ಎ ರಂಗನಾಥ್, ನಗರ ಸಂಘಚಾಲಕ ಲೋಕೇಶ್ವರ ಕಾಳೆ ಅವರು ಉಪಸ್ಥಿತರಿದ್ದರು. ಪಥ ಸಂಚಲನದಲ್ಲಿ 486 ಜನ ಗಣವೇಷಧಾರಿ ಸ್ವಯಂಸೇವಕರು ಭಾಗವಹಿಸಿದ್ದರು
You may have missed
January 20, 2025
January 17, 2025