ಆರೆಸ್ಸೆಸ್ ನ ಎರಡು ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭೆ ಇಂದು ಬೆಂಗಳೂರಿನಲ್ಲಿ ಆರಂಭಗೊಂಡಿದೆ. ಆರೆಸ್ಸೆಸ್ ನ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್, ಸರಕಾರ್ಯವಾಹರಾದ ಸುರೇಶ್ ಭಯ್ಯಾಜಿ ಜೋಶಿ ಭಾರತಮಾತೆಯ ಫೋಟೋಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಭೆಗೆ ಚಾಲನೆ ನೀಡಿದರು.
ಕಳೆದ ಬಾರಿಯ ಎಬಿಪಿಎಸ್ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಆದರೆ, ಕೋವಿಡ್ ಕಾರಣದಿಂದ ನಡೆಯಲಿಲ್ಲ. ಕಸಾಮಾನ್ಯವಾಗಿ ಎಬಿಪಿಎಸ್ ನಲ್ಲಿ 1,500 ಪ್ರತಿನಿಧಿಗಳು ಪ್ರತಿ ವರ್ಷ ಭಾಗವಹಿಸುತ್ತಾರೆ. ಆದರೆ ಈ ವರ್ಷ 450 ಜನರು ಮಾತ್ರ ಇರುತ್ತಾರೆ. ಪ್ರತಿಬಾರಿಯಂತೆ ಮೂರು ದಿನಗಳ ಬದಲಾಗಿ ಈ ಬಾರಿಯ ಅಧಿವೇಶನ ಎರಡು ದಿನಗಳ ಕಾಲ ಮಾತ್ರ ನಡೆಯುತ್ತದೆ. ಅಲ್ಲದೆ, ಈ ಬಾರಿಯ ಅಧಿವೇಶನದಲ್ಲಿ ಆನ್ಲೈನ್ ಮೂಲಕವೂ ಪ್ರತಿನಿಧಿಗಳು ಸೇರುತ್ತಾರೆ ಎಂದು ತಿಳಿಸಲಾಗಿದೆ.