ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ವಿದೇಶೀ ನೇರ ಬಂಡವಾಳ ಅನಿವಾರ್ಯವೇ?

ಸುದ್ದಿ: ನಮ್ಮ ದೇಶದ ವಿವಿಧ ಕ್ಷೇತ್ರಗಳಲ್ಲಿ ವಿದೇಶೀ ಬಂಡವಾಳದ ನೇರ ಹೂಡಿಕೆಗೆ ಸರಕಾರವು ದೇಶದ ಬಾಗಿಲುಗಳನ್ನು ಒಂದೊಂದಾಗಿ ತೆರೆಯುತ್ತಿದೆ. ಇದೀಗ ಚಿಲ್ಲರೆ ವ್ಯಾಪಾರದಲ್ಲಿ ವಿದೇಶೀ ಬಂಡವಾಳ ಹೂಡಿಕೆಗೆ ಸಂಬಂಧಿಸಿದ ಕಾನೂನನ್ನು ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಜಾರಿ ಮಾಡಲು ಯುಪಿಎ ಸರಕಾರವು ಪ್ರಯತ್ನಿಸಿತು. ಇದಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಮತ್ತು ಸರಕಾರದ ಕೆಲವು ಅಂಗಪಕ್ಷಗಳು ಬಲವಾದ ಪ್ರತಿರೋಧ ಒಡ್ಡಿದ ಕಾರಣದಿಂದ ಸರಕಾರವು ತಾತ್ಕಾಲಿಕವಾಗಿ ಹಿಂದೆ ಸರಿದಿದೆ.

ಹಿನ್ನೆಲೆ: 

ವಿದೇಶೀ ಬಂಡವಾಳಕ್ಕೆ ಅವಕಾಶ ನೀಡಿದರೆ ಮೂಲಭೂತ ಸೌಕರ್ಯಗಳು ಉತ್ತಮಗೊಳ್ಳುತ್ತವೆ, ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುತ್ತವೆ ಮತ್ತು ಅತ್ಯಾಧುನಿಕ ತಂತ್ರಜ್ಞಾನವು ನಮಗೆ ಲಭಿಸುತ್ತದೆ, ಎನ್ನುವ ವಾದವನ್ನು ಮುಂದಿಟ್ಟು ಸರಕಾರವು ಅದನ್ನು ಸ್ವಾಗತಿಸುತ್ತಿದೆ. ಇದರ ಜೊತೆಗೆ, ರೈತನ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಲಭಿಸುತ್ತದೆ, ಗ್ರಾಹಕರಿಗೆ ಸರಕುಗಳು ಅಗ್ಗದ ಬೆಲೆಯಲ್ಲಿ ಸಿಗುತ್ತವೆ, ಎಂದೂ ಸರಕಾರವು ವಾದಿಸುತ್ತಿದೆ. ಆದರೆ, ಈ ಯಾವ ವಾದವನ್ನೂ ಪ್ರತಿಪಕ್ಷಗಳು ಮತ್ತು ಚಿಲ್ಲರೆ ವ್ಯಾಪಾರದಲ್ಲಿ ತೊಡಗಿರುವ ಹೆಚ್ಚಿನ ವ್ಯಾಪಾರಿಗಳು ಒಪ್ಪುತ್ತಿಲ್ಲ. ಸರಕಾರವು ಅಮೆರಿಕದ ಒತ್ತಡಕ್ಕೆ ಸಿಲುಕಿ ಈ ನಿರ್ಧಾರ ಕೈಗೊಂಡಿದೆ ಎನ್ನುವ ಗುಮಾನಿಯೂ ಎಲ್ಲರಲ್ಲಿದೆ.

. ವಿದೇಶೀ ಕಂಪನಿಗಳು ಭಾರತದೊಳಕ್ಕೆ ಬಂದರೆ, ಮೂಲಭೂತ ಸೌಕರ್ಯಗಳು ಉತ್ತಮಗೊಳ್ಳುತ್ತವೆ , ಎನ್ನುವುದು ಸರಕಾರದ ಅಂಬೋಣ. ಆದರೆ, ಮೂಲಭೂತ ಸೌಕರ್ಯ ಉತ್ತಮಗೊಳಿಸುವ ಜವಾಬ್ದಾರಿ ಸರಕಾರದ್ದಲ್ಲವೆ? ವಿದೇಶೀ ಬಂಡವಾಳದಿಂದ ಮೂಲಭೂತ ಸೌಕರ್ಯ ಉತ್ತಮಗೊಳ್ಳಲಿ ಎಂದು ಸರಕಾರವೇ ಹೇಳಿದರೆ, ತನ್ನ ಕೈಯ್ಯಲ್ಲಿ ಅದು ಸಾಧ್ಯವಿಲ್ಲ ಎಂದು ಹೇಳಿದಂತಾಯಿತಲ್ಲವೇ?

೨. ವಾಲ್‌ಮಾರ್ಟ್, ಮೆಟ್ರೋ, ಟೆಸ್ಕೋ, ಕಾಸ್ಟ್‌ಕೋ ಮುಂತಾದ ವಿದೇಶೀ ಕಂಪನಿಗಳು ಭಾರತಕ್ಕೆ ಬರುತ್ತಿರುವ ಉದ್ದೇಶವಾದರೂ ಏನು? ಅವುಗಳೇನೂ ಭಾರತವನ್ನಾಗಲೀ, ಇಲ್ಲಿರುವ ಬಡವರನ್ನಾಗಲೀ ಉದ್ಧಾರ ಮಾಡುವುದಕ್ಕೆ ಇಲ್ಲಿಗೆ ಬರುತ್ತಿಲ್ಲ. ಹೇಳಿಕೇಳಿ ಅವುಗಳು ವ್ಯಾಪಾರೀ ಸಂಸ್ಥೆಗಳು. ಅವುಗಳ ಏಕೈಕ ಉದ್ದೇಶ ಲಾಭ ಮಾಡಿಕೊಳ್ಳುವುದು. ನಮ್ಮ ದೇಶದಲ್ಲಿ ವ್ಯಾಪಾರ ಮಾಡಿ, ಲಾಭ ಗಳಿಸಿ, ಆ ಹಣವನ್ನು ತಮ್ಮ ದೇಶಗಳಿಗೆ ಒಯ್ಯುವುದೇ ಈ ಸಂಸ್ಥೆಗಳ ಉದ್ದೇಶ.

೩. ಇನ್ನು ಈ ಸಂಸ್ಥೆಗಳು ಬೃಹತ್ ಗಾತ್ರದ ಸಂಸ್ಥೆಗಳು. ಅವು ಇಲ್ಲಿ ಬಂದರೆ, ಇಲ್ಲಿನ ಸ್ಥಳೀಯ ಚಿಲ್ಲರೆ ವ್ಯಾಪಾರಿಗಳು ಆ ದೈತ್ಯ ಸಂಸ್ಥೆಗಳೊಡನೆ ಸ್ಪರ್ಧಿಸುವುದು ಸಾಧ್ಯವೇ ಇಲ್ಲ. ಹೀಗೆ ಸ್ಥಳೀಯ ಸಂಸ್ಥೆಗಳನ್ನು ಮುಚ್ಚಿಸಿ, ತಮ್ಮದೇ ಏಕಸ್ವಾಮ್ಯವನ್ನು ಈ ಸಂಸ್ಥೆಗಳು ಸಾಧಿಸುತ್ತವೆ. ಆ ನಂತರ, ಸಣ್ಣಸಣ್ಣ ವಸ್ತುಗಳಿಗೂ, ಏಲ್ಲಾ ದೇಶವಾಸಿಗಳೂ ಅವರ ಮೇಲೇ ಅವಲಂಬಿತವಾಗಬೇಕಾಗುತ್ತದೆ. (೨೦ ಂ?ಂಜUಂಳ ತನ್ನ ವ್ಯಾಪಾರದಿಂದ ತಂಪು ಪಾನೀಯ ತಯಾರಿಕೆಯಲ್ಲಿ ಪೆಪ್ಸಿಕೊ ಉಳಿದೆಲ್ಲಾ ದೇಶಿ ಉತ್ಪಾದಕರನ್ನು ನೆಲಕಚ್ಚಿಸಿರುವುದನ್ನು ನೆನಪಿಸಿಕೊಳ್ಳಿ)

೪. ದೇಶದಲ್ಲೀಗ ೧.೨೫ ಕೋಟಿ ನೋಂದಾಯಿತ ಚಿಲ್ಲರೆ ವ್ಯಾಪಾರಿಗಳಿದ್ದಾರೆ. ತಳ್ಳುವ ಗಾಡಿ, ರಸ್ತೆಬದಿ ಮಾರಾಟದವರೂ ಸೇರಿದರೆ ಈ ಸಂಖ್ಯೆ ೪ ಕೋಟಿ ಆಗಬಹುದು. ವಿದೇಶಿ ಕಂಪನಿಗಳ ಆಗಮನದಿಂದ ಈ ವ್ಯಾಪಾರಿಗಳು ನಿರುದ್ಯೊಗಿಗಳಾಗುವುದಿಲ್ಲವೆ? ಅವರ ಆದಾಯವನ್ನೇ ನಂಬಿಕೊಂಡಿರುವ ಸುಮಾರು ೨೦ ಕೋಟಿ ಜನರಿಗೆ ಪರಿಹಾರವೇನು?

೫. ವಾಲ್ ಮಾರ್ಟ್ ಈಗಿನ ಅಂದಾಜಿನಂತೆ ಮಳಿಗೆಗಳನ್ನು ತೆರೆದರೂ ಒಟ್ಟು ೨ ಲಕ್ಷ ಜನರಿಗೆ ಉದ್ಯೋಗ ನೀಡಬಹುದು. ೪ ಕೋಟಿ ಜನರನ್ನು ನಿರುದ್ಯೋಗಿ ಮಾಡಿ ೨ ಲಕ್ಷ ಜನರಿಗೆ ಉದ್ಯೋಗ ಒದಗಿಸುವುದು ಮೂರ್ಖತನವಲ್ಲವೆ?

೬. ಪ್ರಾರಂಭದಲ್ಲಿ ಕೆಲವು ಂ?ಂಜ ಈ ಸಂಸ್ಥೆಗಳು ಬಳಕೆದಾರರಿಗೆ ಅಗ್ಗದ ಬೆಲೆಯಲ್ಲಿಯೇ ಕೊಡಬಹುದು. ಹಾಗೆ ಮಾಡುವುದರಿಂದ ತಮಗೆ ಸ್ವಲ್ಪ ಂ?ಂಔವಾದರೂ ಆ ಸಂಸ್ಥೆಗಳು ಅದನ್ನು ಭರಿಸುವ ಶಕ್ತಿ ಹೊಂದಿರುತ್ತವೆ. ಆದರೆ, ಒಮ್ಮೆ ಏಕಸ್ವಾಮ್ಯ ಸಾಧಿಸಿದ ನಂತರ, ಅವರು ನಿಗದಿಸಿದ ಬೆಲೆಯನ್ನೇ ನೀಡಬೇಕಾಗುತ್ತದೆ.

೭. ರೈತರ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಎಂಬ ಆPಂ?ಂಜPಂ ಮಾತು ವ್ಯವಹಾರದಲ್ಲಿ ಬರುವುದೇ? ಕೇವಲ ಲಾಭವನ್ನು ಗಳಿಸುವ ಉದ್ದೇಶ ಹೊಂದಿರುವ ಇವರು ಜಗತ್ತಿನ ಯಾವ ಭಾಗದಲ್ಲಿ ಕಡಿಮೆ ದರದಲ್ಲಿ ಸಿಗುವುದೋ ಅಲ್ಲಿಂದ ಕೊಂಡುತಂದು ಇಲ್ಲಿ ಮಾರಾಟ ಮಾಡುತ್ತಾರೆ.

೮. ಈಗಿರುವ ಮಧ್ಯವರ್ತಿಗಳು ನಮ್ಮವರೇ. ಆದರೆ ವಿದೇಶೀ ಕಂಪನಿಗಳು ದೈತ್ಯ ದಳ್ಳಾಳಿಗಳು. ಸಾಮಾಜಿಕ ಬದ್ಧತೆಯನ್ನು -ಜನಪರ ಕಾಳಜಿಯನ್ನು ಇವರಿಂದ ನಾವು ನಿರೀಕ್ಷಿಸಬಹುದೇ?

೯. ಈ ಹಿಂದೆಯೇ ವಿದೇಶೀ ನೇರ ಬಂಡವಾಳವಾದ ಅನೇಕ ಕ್ಷೇತ್ರಗಳಿವೆ. ಅಲ್ಲಿ ಆಗಿರುವ ಸಾಧನೆಯಾದರೂ ಏನು? ಆ ಯಾವ ಕ್ಷೇತ್ರದಲ್ಲಿ ಬೆಲೆ ಇಳಿಕೆಯಾಗಿದೆ? ಆ ಬಂಡವಾಳದಿಂದ ಮೂಲಭೂತ ಸೌಕರ್ಯಗಳು ಎ?ಂಂಔ

ಉತ್ತಮಗೊಂಡಿವೆ? (ಸಗಟು ವ್ಯಾಪಾರದಲ್ಲಿ ತೊಡಗಿರುವ ಯಾವ ಕಂಪನಿಯೂ ಈ ತನಕ ಒಂದೇ ಒಂದು ಶೈತ್ಯಾಗಾರವನ್ನೂ ನಿರ್ಮಿಸಲಿಲ್ಲ)

೧೦. ಒಟ್ಟಿನಲ್ಲಿ, ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ವಿದೇಶೀ ನೇರ ಬಂಡವಾಳ ಹೂಡಿಕೆ ಅನಿವಾರ್ಯವೇ? ಇದನ್ನು ಬಿಟ್ಟರೆ, ದೇಶವನ್ನು ಅಭಿವೃದ್ಧಿ ಪಡಿಸಲು, ಇಲ್ಲಿನ ಜನರನ್ನು ಉದ್ಧಾರ ಮಾಡಲು, ಸರಕಾರಕ್ಕೆ ಸಾಧ್ಯವಿಲ್ಲವೇ? ಈ ವಿದೇಶೀ ದೈತ್ಯ ಕಂಪನಿಗಳು, ನಮ್ಮ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಏಕಸ್ವಾಮ್ಯ ಸಾಧಿಸಿಬಿಟ್ಟರೆ, ಆ ನಂತರ ಸರಕಾರದ ಮೇಲೂ ಪ್ರಭಾವ ಬೀರದಿರುತ್ತವೆಯೇ? ಇದರಿಂದ ದೇಶದ ಆರ್ಥಿಕತೆಗೆ, ಸಾರ್ವಭೌಮತ್ವಕ್ಕೆ ಹಾನಿಯಾಗದಂತೆ, ಸರಕಾರವು ಯಾವ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದೆ? ಈ ಕಂಪನಿಗಳಿಂದಾಗಿ ಕೆಲಸ ಕಳೆದುಕೊಳ್ಳುವ ಚಿಲ್ಲರೆ ವ್ಯಾಪಾರಿಗಳಿಗೆ ಸರಕಾರ ಯಾವ ರೀತಿಯ ಸುಭದ್ರತೆ ನೀಡುತ್ತದೆ? ಈ ಕಂಪನಿಗಳಿಂದಾಗಿ ರೈತರಿಗೆ ಅನ್ಯಾಯವಾಗುವುದಿಲ್ಲ ಎನ್ನುವುದಕ್ಕೆ ಆಧಾರವೇನು?

ಹಾಗೇನಾದರೂಅನ್ಯಾಯವಾದರೆ ಅದನ್ನು ಸರಕಾರ ಯಾವ ರೀತಿ ಸರಿಪಡಿಸುತ್ತದೆ?

Leave a Reply

Your email address will not be published.

This site uses Akismet to reduce spam. Learn how your comment data is processed.