ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು 2-7ರ ಜನವರಿ 2023ರವರೆಗೂ ಗೋವಾ ಪ್ರವಾಸ ಕೈಗೊಳ್ಳಲಿದ್ದಾರೆ. ಸಂಘದ ಕೆಲವು ಪ್ರಮುಖ ಅಖಿಲ ಭಾರತೀಯ ಪದಾಧಿಕಾರಿಗಳು ಹಾಗು ಸಂಘ ಪ್ರೇರಿತ ವಿಭಿನ್ನ ಸಂಘಟನೆಗಳ ಪ್ರಮುಖ ಪದಾಧಿಕಾರಿಗಳ ಜೊತೆ ಅಖಿಲ ಭಾರತೀಯ ಸ್ತರದ ಸಮನ್ವಯ ಬೈಠಕ್ ನಡೆಯಲಿದೆ.
ದಿನಾಂಕ 10-12 ಸೆಪ್ಟೆಂಬರ್ 2022ರವರೆಗೆ ಛತ್ತೀಸ್ಗಡದ ರಾಯ್ಪುರದಲ್ಲಿ ಆಯೋಜನೆಗೊಂಡ ವ್ಯಾಪಕ ಅಖಿಲ ಭಾರತೀಯ ಸಮನ್ವಯ ಬೈಠಕ್ನಲ್ಲಿ ವಿಭಿನ್ನ ವಿಷಯಗಳ ಮೇಲೆ ನಡೆದ ಸಮೀಕ್ಷೆಯ ದೃಷ್ಟಿಯಿಂದ ಜನವರಿ 5,6ರಂದು ಗೋವಾದ ನಾಗೋಶಿಯಲ್ಲಿ ನಡೆಯಲಿದೆ. ಈ ಬೈಠಕ್ ಔಪಚಾರಿಕವಾಗಿ ನಡೆಯುವುದಿಲ್ಲ, ಬದಲಾಗಿ ಅನೌಪಚಾರಿಕವಾಗಿ ಚರ್ಚೆಯ ರೂಪದಲ್ಲಿ ಆಯೋಜನೆಗೊಳ್ಳಲಿದೆ.
ಬೈಠಕ್ನಲ್ಲಿ ಸರಸಂಘಚಾಲಕರಾದ ಡಾ.ಮೋಹನ್ ಭಾಗವತ್ ಅವರು, ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆಯವರ ಸಹಿತ ಸಂಘದ ಅನ್ಯ ಅಖಿಲ ಭಾರತೀಯ ಪದಾಧಿಕಾರಿಗಳು ಹಾಗೂ ವಿಶ್ವ ಹಿಂದೂ ಪರಿಷತ್ನ ಮಿಲಿಂದ್ ಪರಾಂಡೆ,ವಿದ್ಯಾರ್ಥಿ ಪರಿಷತ್ನ ಆಶೀಶ್ ಚೌಹಾಣ್, ಭಾರತೀಯ ಮಜದೂರ್ ಸಂಘದ ಸುರೇಂದ್ರನ್ ಜೀ, ಭಾರತೀಯ ಜನತಾ ಪಾರ್ಟಿಯ ಬಿ.ಎಲ್.ಸಂತೋಷ್ ಅವರ ಸಹಿತ ವಿದ್ಯಾ ಭಾರತಿ ಭಾರತೀಯ ಕಿಸಾನ್ ಸಂಘ ಇತ್ಯಾದಿ ಸಂಘಟನೆಗಳ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ಇದರ ಜೊತೆಗೆ ಜನವರಿ 7ರಂದು ಸಂಜೆ ಸ್ಥಾನೀಯ ಸ್ವಯಂಸೇವಕರ ಏಕತ್ರೀಕರಣದ ಸಲುವಾಗಿ ಮೋಹನ್ ಭಾಗವತ್ ಅವರು ಮಾರ್ಗದರ್ಶನ ಮಾಡಲಿದ್ದಾರೆ.
ಸುನಿಲ್ ಅಂಬೇಕರ್,ಅಖಿಲ ಭಾರತೀಯ ಪ್ರಚಾರ ಪ್ರಮುಖ್, ರಾಷ್ಟ್ರೀಯ ಸ್ವಯಂಸೇವಕ ಸಂಘ