
ರಾಯ್ಪುರ, ಛತ್ತೀಸ್ಗಡ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಮನ್ವಯ ಬೈಠಕ್ -2022 ರಾಯ್ಪುರದಲ್ಲಿ ನಡೆಯುತ್ತಿದ್ದು ಇರದಲ್ಲಿ 36 ಸಂಘಟನೆಗಳ ಪ್ರಮುಖ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.ಬೈಠಕ್ಗೆ ಸಂಬಂಧಿಸಿದಂತೆ ಪತ್ರಕರ್ತರಿಗೆ ವಿಚಾರ ತಿಳಿಸುತ್ತಾ ಸುದ್ದಗೋಷ್ಟಿಯಲ್ಲಿ ಮಾತನಾಡಿದ ಅಖಿಲ ಭಾರತೀಯ ಪ್ರಚಾರ ಪ್ರಮುಖರಾದ ಶ್ರೀ ಸುನಿಲ್ ಅಂಬೇಕರ್ ಅವರು ವಿದ್ಯಾ ಭಾರತಿ, ಅಖಿಲಭಾರತೀಯ ವಿದ್ಯಾರ್ಥಿ ಪರಿಷತ್, ಸಕ್ಷಮ, ವನವಾಸಿ ಕಲ್ಯಾಣ, ಸೇವಾ ಭಾರತಿ, ವಿಶ್ವ ಹಿಂದೂ ಪರಿಷತ್, ರಾಷ್ಟ್ರ ಸೇವಿಕಾ ಸಮಿತಿ, ಭಾರತೀಯ ಜನತಾ ಪಾರ್ಟಿ,ಭಾರತೀಯ ಮಜ್ದೂರ್ ಸಂಘ,ಭಾರತೀಯ ಕಿಸಾನ್ ಸಂಘ ಸೇರಿದಂತೆ ಅನ್ಯ ಸಹಯೋಗಿ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ಎಲ್ಲ ಸಂಘಟನೆಗಳು ಸಂಘ ಪ್ರೇರಿತ ವಿಚಾರದ ಕುರಿತು ಕೆಲಸ ಮಾಡುತ್ತಿದ್ದು,ಸಮಾಜ ಜೀವನದ ವಿವಿಧ ಕ್ಷೇತ್ರದಲ್ಲಿ ಸ್ವಾಯತ್ತ ರೂಪದಲ್ಲಿ ಕೆಲಸ ಮಾಡುತ್ತಿದೆ. ಈ ಎಲ್ಲ ಸಂಘಟನೆಗಳು ವರ್ಷದಲ್ಲಿ ಒಂದು ಬಾರಿ ಸೆಪ್ಟೆಂಬರ್ ತಿಂಗಳಿನಲ್ಲಿ ಸೇರುವ ವಾಡಿಕೆಯಿದ್ದು,ತಮ್ಮ ಕಾರ್ಯ ಮತ್ತು ಅನುಭವವನ್ನು ಪ್ರಸ್ತುತ ಪಡಿಸುತ್ತಾ ಮತ್ತು ಈ ನಿಟ್ಟಿನಲ್ಲಿ ಬೇರೆ ಸಂಘಟನೆಗಳಿಂದಲೂ ಕಲಿಯುವ ಮತ್ತು ಅವರ ಕಾರ್ಯಗಳ ಕುರಿತು ತಿಳಿಯುವ ಅವಕಾಶ ದೊರೆಯುತ್ತದೆ. ಸಮಾನ ಉದ್ದೇಶ ಮತ್ತು ಕಾರ್ಯ ಮಾಡಲು ಇವು ಪ್ರೇರಣೆ ನೀಡುತ್ತದೆ. ಕೆಲವು ಸಂಘಟನೆಗಳು ಕೆಲವು ಬಾರಿ ಒಟ್ಟಿಗೆ ಮಾಡಬೇಕಾಗುತ್ತದೆ. ಉದಾಹರಣೆಗೆ ಹೇಗೆ ಆರ್ಥಿಕ ಸಮೂಹವು ಕಳೆದ ವರ್ಷ ಸ್ವಾವಲಂಬೀ ಭಾರತ ಅಭಿಯಾನ ಆರಂಭಿಸಿದರು, ಸಭೆಯಲ್ಲಿ ಕಳೆದ ವರ್ಷ ಆ ಕುರಿತಂತೆ ಅನ್ಯ ಕ್ಷೇತ್ರದ ಸಂಘಟನೆಗಳು ಯಾವ ರೀತಿ ಕೆಲಸ ಮಾಡಬೇಕೆಂದು ಚರ್ಚೆ ನಡೆಯಿತು.
ಅವರು ಮುಂದುವರೆದು ಮಾತನಾಡುತ್ತಾ ಸಂಘದಲ್ಲಿ ಅನೇಕ ಗತಿವಿಧಿಗಳು ನಡೆಯುತ್ತಿದೆ. ಗೋಸೇವಾ,ಗ್ರಾಮವಿಕಾಸ, ಪರ್ಯಾವರಣ, ಕುಟುಂಬ ಪ್ರಭೋದನ,ಸಾಮಾಜಿಕ ಸಮರಸತೆ,ಇತ್ಯಾದಿ ವಿಚಾರಗಳನ್ನು ಮುಂದುವರೆಸಿಕೊಂಡು ಹೋಗುವ ಕುರಿತಾಗಿಯೂ ಚರ್ಚೆ ನಡೆಯಲಿದೆ. ಸಭೆಯ ಉದ್ದೇಶ ಸಮಾಜದ ಎದುರು ಬರುವ ಸವಾಲುಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಿ, ಸಮಗ್ರವಾದ ದೃಷ್ಟಿಕೋನದಿಂದ ಸಮಾಧಾನವನ್ನು ರಾಷ್ಟ್ರೀಯ ಚಿಂತನೆಯ ಆಧಾರದ ಮೇಲೆ ಯೋಜಿಸಿ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿಸುವುದಾಗಿದೆ.
ಸುನೀಲ್ ಅಂಬೇಕರ್ ಅವರು ಮಾತನಾಡಿ ಈ ಸಭೇಯಲ್ಲಿ ಸರಸಂಘಚಾಲಕರಾದ ಶ್ರೀ ಮೋಹನ್ ಭಾಗವತ್, ಸರಕಾರ್ಯವಾಹರಾದ ದತ್ತಾತ್ತ್ರೇಯ ಹೊಸಬಾಳೆ, ಎಲ್ಲ ಸಹಸರಕಾರ್ಯವಾಹರು,ಶ್ರೀಮುಕುಂದ, ಶ್ರೀ ಅರುಣ ಕುಮಾರ್, ಶ್ರೀ ಮನಮೋಹನ್ ವೈದ್ಯ,ಕೃಷ್ಣಗೋಪಾಲ್ ಹಾಗು ರಾಮದತ್ತ ಚಕ್ರಧರ ಸಹಿತ ಪ್ರಮುಖ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.