ಬೆಂಗಳೂರು October 12: ರಾಷ್ಟ್ರ ಸೇವಿಕಾ ಸಮಿತಿ ಬೆಂಗಳೂರು ವತಿಯಿಂದ ವಿಜಯದಶಮಿ ಉತ್ಸವದ ಪ್ರಯುಕ್ತ ಪಥಸಂಚಲನ ಅಕ್ಟೋಬರ್  ೧೨ ರಂದು ನಗರದ ಅಲಸೂರ್, ಮಲ್ಲೇಶ್ವರಂ, ಹೆಬ್ಬಾಳ, ಜಯನಗರ ಹಾಗೂ ಬನಶಂಕರಿ ಭಾಗಗಳಲ್ಲಿ ನಡೆಯಿತು.
IMG-20141012-WA0034
ಬನಶಂಕರಿ ಭಾಗದ ವಿಜಯದಶಮಿ ಉತ್ಸವಕ್ಕೆ ಅಧ್ಯಕ್ಷತೆಯನ್ನು  ನಿವ್ರತ್ತ ಮೇಜರ್ ಭಾವನ ಚಿರಂಜಯ್  ವಹಿಸಿದ್ದರು. ಮುಖ್ಯ ಉಪನ್ಯಾಸಕಿ ಯಾಗಿ ಶ್ರೀಮತಿ ಸಂಧ್ಯಾ ಭಾಸ್ಕರ್ ಉಪಸ್ಥಿತರಿದ್ದರು.
ನಾನು ಮಾಡಬಲ್ಲೆ ಎಂಬ ಉತ್ತಮ ವಿಚಾರದಿಂದ ಮಹಿಳೆಗಿಂತ  ನಾನು ವ್ಯಕ್ತಿ ಎಂಬ ಮನೋಭಾವ ಬೆಳೆಸಿಕೊಳ್ಳಿ .ಇದರಿಂದ ದುಷ್ಟಶಕ್ತಿ ಯನ್ನು ಅರ್ಧದಷ್ಟ್ತು ನಿರ್ನಾಮ ಮಾಡುವ ಬಲ ತಾನಾಗಿ ಬರುತ್ತದೆ ಎಂದು ಅಧ್ಯಕ್ಷರಾದ ನಿವ್ರತ್ತ ಮೇಜರ್ ಭಾವನ ಚಿರಂಜಯ್ ಮಹಿಳೆಯರಿಗೆ ಕರೆ ಕೊಟ್ಟರು.
ಅಲಸೂರು ಭಾಗದಲ್ಲಿ  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ . ವಿಜಯಲಕ್ಷ್ಮಿ   ಬಾಳೆಕುಂದ್ರಿ ವಹಿಸಿದ್ದರು. ಮುಖ್ಯ ಉಪನ್ಯಾಸಕಿ ಯಾಗಿ ಶ್ರೀಮತಿ  ವಸಂತಸ್ವಾಮಿ ,ಸಹ ಕಾರ್ಯವಾಹಿಕ ಹೊಯ್ಸಳ ಪ್ರಾಂತ ಅವರು ಉಪಸ್ಥಿತರಿದ್ದರು.
ಜಯನಗರ ಭಾಗದಲ್ಲಿ ಶ್ರೀಮತಿ ಮಂಜುಳಾ ಶ್ರೀನಿವಾಸ್ ,ಅಕ್ಯಾಡೆಮಿಕ್ ಡೈರೆಕ್ಟರ್ ಸಧ್ಗುರು ಸಾಯಿನಾಥ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಕೂಡ್ಲು ಅವರು ಅಧ್ಯಕ್ಷರಾಗಿ ಹಾಗೂ ಶ್ರೀಮತಿ ಅರುಣ ತ್ತಕ್ಕರ್ ಅವರು ಮುಖ್ಯ ಉಪನ್ಯಾಸಕರಾಗಿ ಉಪಸ್ಥಿತರಿದ್ಡ್ಡರು.
ಶ್ರೀಮತಿ  ಸಬಿತಾ ಎಸ್. ಎನ್.,ಸ್ಥಾನಿಕ ಪತ್ರಿಕೆಯ ಸಂಪಾದಕಿ ಅಧ್ಯಕ್ಷರಾಗಿ ಮತ್ತು ಶ್ರೀಮತಿ ವಿಜಯ ವಿಷ್ಣು ಭಟ್ ಮುಖ್ಯ ಉಪನ್ಯಾಸಕಿ ಯಾಗಿ ಮಲ್ಲೇಶ್ವರಂ ಭಾಗದಲ್ಲಿ ಉಪಸ್ತಿತರಿದ್ದರು.
ಹೆಬ್ಬಾಳ ಭಾಗದಲ್ಲಿ ಶ್ರೀಮತಿ ಡಾ. ಭಾರತಿ ಡಿ. ಹಾಗೂ ಶ್ರೀಮತಿ ರಾಮರತ್ನ ,ಕರ್ನಾಟಕ ಧಕ್ಷಿಣ ಪ್ರಾಂತ ಮಾತ್ರಶಕ್ತಿ ಪ್‌ಮುಖ್ ,ವಿಶ್ವ ಹಿಂದೂ ಪರಿಷತ್. ಇವರು ಅಧ್ಯಕ್ಷರು ಮತ್ತು ಮುಖ್ಯ ಉಪನ್ಯಾಸಾಖಿ ಆಗಿ ಭಾಗವಾಹಿಸಿದ್ದರು.
ಈ ವರ್ಷ ನಮಗೆಲ್ಲ ಮಂಗಳಾ ಗ್ರಹ ಯಾನ ಯಶಸಿ ನಿಂದಾಗಿ  ನಿಜವಾದ ಅರ್ಥದಲ್ಲಿ ವಿಜಯ ಉತ್ಸವ ಆಚರಿಸುವ ವರ್ಷ.  ಹಿಂದೂ ಮಹಿಳಾ ಸಂಘಟನೆ ಮಾಡುವ ಉದಿಶ್ಯದಿಂದ ೧೯೩೬ ರಂದು ಲಕ್ಷ್ಮಿ ಬಾಯೀ ಕೇಳ್ಕರ್ ವಿಜಯ ದಶಮಿಯಂದು  ರಾಷ್ಟ್ರ  ಸೇವಿಕಾ ಸಮಿತಿ ಆರಂಬಿಸಿದರು . ರಾಷ್ಟ್ರ ಸೇವಿಕಾ ಸಮಿತಿ ಯ ಲ್ಲಿ ವಯಕ್ತಿಕ  ಹಾಗೂ ಸಾಮೂಹಿಕ ಶಕ್ತಿ ಕೊಡು ಎಂದು  ಅಷ್ಟಭುಜ ದೇವಿ ಹಾಗೂ ಭಾಗವ ಧ್ವಜಕ್ಕೆ  ಪ್ರಾರ್ಥನೆ  ಸಲ್ಲಿಸುತ್ತೇವೆ. ಮಹಿಳೆಯರು ಉಜ್ವಲ  ಚಾರಿತ್ರ್ಯ   ಶೀಲಾ,ಪವಿತ್ರತೆ ಹಾಗೂ ತ್ಯಾಗ ಮನೋಭಾವ ಬೆಳೆಸಿಕೊಂಡು ಸುಸಂಸ್ಕ್ರಾತರಾಗೋಣ. ಸುಶೀಲೆಯರು,ಧೀರೆಯರು,ಸಮರ್ಥರು,ಸಂಘಟೀತರು ಆಗಿ ನಮ್ಮ ತಂದೆ,ಮಗ,ಸಹೋದರ ಹಾಗೂ ಪತಿ ಇವರಿಗೆ ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆ ಕೊಡಲು ಸಾಧ್ಯವಾಗುವಂತೆ, ದುರಾಚಾರ ಧುರ್ವ್ರತಿಗಳನ್ನು ಧ್ವಂಸ ಮಾಡುವ ಶಕ್ಸ್ಟಿ ಕೊಡು ಎಂದು ಸಮಿತಿಯಲ್ಲಿ ಪ್ರಾರ್ಥನೆ ಮಾಡುತೀವೆ . ಇದರಿಂದ ತೇಜಸ್ವಿ ರಾಷ್ಟ್ರ ನಿರ್ಮಾಣ ಮಾಡೋಣ ಎಂದು ಎಲ್ಲ  ಮುಖ್ಯ ಉಪನ್ಯಾಸಾಖಿಯರು ಮಹಿಳೆಯರಿಗೆ ಕರೆ ಕೊಟ್ಟರು.
ಮಹಿಳೆಯರೆಲ್ಲರೂ ಸಮಿತಿ ಶಾಖ ದಿಂದ ಈ ಸಂಘಟನೆಯೊಂದಿಗೆ ಜೋಡಿಸಿಕೊಳ್ಳಬಹುದು
  ಸೇವಿಕೆಯರು ಭಾರತ ಮಾತೆಯ ಜೈ ಜೈ ಕಾರ ಮಾಡುತ್ತಾ  ಘೋಷ್ ಗಣದೊಡನೆ ಪಥಸಂಚಲನ ಮಾಡಿದರು. ಸರಿಸುಮಾರು 1120 ಗಣವೇಶಧಾರಿಗಳು ಪಥಸಂಚಲನದಲ್ಲಿ ಭಾಗವಹಿಸಿದ್ದರು.ಚಿಕ್ಕ  ಮಕ್ಕಳು  ನಮ್ಮದೇಶದ ವೀರ  ಮಹಿಳೆ ಹಾಗೂ  ಪುರುಷರ ವೇಷ ಆಧರಿಸಿ  ಪಥಸಂಚಲನಕ್ಕೆ ಕಳೆ ತಂದುಕೊಟ್ಟರು.
ಬನಶಂಕರಿಯಲ್ಲಿ ೨ ಘೋಷ್ ಗಣ ಹಾಗೂ ಮಲ್ಲೇಶ್ವರಂ ನಲ್ಲಿ ಅತಿ ಹೆಚ್ಚಿನ ಗಣವೇಶಧಾರಿಗಳು ಭಾಗವಹಿಸಿ ಸಂಚಲಂಕ್ಕೆ ಮೆರಗು ತಂದರು. ಈಪಥಸಂಚಲನ ಸುಂದರ ಸಂಚಲನ ನೋಡಿ ಪ್ರೇರಣೆ ಪಡೆಯಲು ಮಾರ್ಗದ ಇಕ್ಕೆಡೆಗಳಲ್ಲಿ   ಬಹಳ ಸಂಖ್ಯೆಯಲ್ಲಿ ಜನರು  ಪುಷ್ಪವನ್ನೇರಿಸಿ,ಭಾರತ ಮಾತೆಯ ಪೂಜೆ ಮಾಡಿದರು. ​

Leave a Reply

Your email address will not be published.

This site uses Akismet to reduce spam. Learn how your comment data is processed.