ಹುಬ್ಬಳ್ಳಿ: ಸಮುತ್ಕರ್ಷ ಐಎಎಸ್ ಅಕಾಡೆಮಿ ಹುಬ್ಬಳ್ಳಿ, ದೆಹಲಿಯ ಸಂಕಲ್ಪ ಐಎಎಸ್ ಅಕಾಡೆಮಿ ಸಹಯೋಗದೊಂದಿಗೆ 2021-22 ರ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ಸಮುತ್ಕರ್ಷದ 8 ಜನ ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ.
ಸಮುತ್ಕರ್ಷ ಐಎಎಸ್ ಅಕಾಡೆಮಿಯು ಹಲಕೆಲವು ವರ್ಷಗಳಿಂದ ಯುಪಿಎಸ್ಸಿಗೆ ತರಬೇತಿ ನೀಡುತ್ತಿದ್ದು,’Nation building through IAS’ ಎಂಬ ಟ್ಯಾಗ್ ಲೈನ್ನೊಂದಿಗೆ ಇಂದಿನ ಯುವ ಜನತೆಯನ್ನು ರಾಷ್ಟ್ರ ನಿರ್ಮಾಣದ ಕಾರ್ಯಕ್ಕೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.
ಏಪ್ರಿಲ್ ನಲ್ಲಿ ನಡೆದ ಮಾದರಿ ಸಂದರ್ಶನದ ಕಾರ್ಯಕ್ರಮದಲ್ಲಿ 11ಕ್ಕೂ ಹೆಚ್ಚು ಜನ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು.ಅದರಲ್ಲಿ 8 ಜನ ಅಭ್ಯರ್ಥಿಗಳು ತೇರ್ಗಡೆಯಾಗಿರುವುದು ಸಂತಸದ ಸಂಗತಿ. ಹಿರಿಯ ಅಧಿಕಾರಿಗಳನ್ನೊಳಗೊಂಡ ತಂಡದಿಂದ ಮಾದರಿ ಸಂದರ್ಶನವನ್ನು ಆಯೋಜಿಸಲಾಗಿತ್ತು. ಎನ್.ಜೆ ಬೆನಕ ಪ್ರಸಾದ್ (92Rank), ನಿಖಿಲ್ ಬಸವರಾಜ್ ಪಾಟೀಲ್ (139Rank), ಸೌರಭ್ ಕುಮಾರ್ (357Rank), ಮೇಘನಾ ಕೆ ಟಿ (425Rank), ಮೊಹಮ್ಮದ್ ಸಿದ್ದಿಕ್ ಶರೀಫ್ (516), ಚೇತನ್ ಕೆ (532Rank), ಪ್ರಶಾಂತ್ ಕುಮಾರ್ (641Rank),ಚೇತನ್ ಕುಮಾರ್ ಬಿ (669Rank), ಪಡೆದು ಸಾಧನೆ ಮಾಡಿದ್ದಾರೆ.
ಎಲ್ಲ ಸಾಧಕರಿಗೆ ಟ್ರಸ್ಟನ ಅಧ್ಯಕ್ಷರಾದ ಡಾII ಭಾಸ್ಕರ ರೆಡ್ಡಿ ಮತ್ತು ಎಲ್ಲ ಪದಾಧಿಕಾರಿಗಳು ಶುಭಾಶಯಗಳನ್ನು ಕೋರಿದ್ದಾರೆ.
ಸಮುತ್ಕರ್ಷ ಕೇಂದ್ರದಲ್ಲಿ ಆಫ್ ಲೈನ್ ತರಗತಿಗಳು ಪ್ರಾರಂಭವಾಗಲಿದ್ದು ಹೆಚ್ಚಿನ ಮಾಹಿತಿಗೆ 97391 13612 / samutkashias.inಗೆ ಸಂಪರ್ಕಿಸಲು ಕೋರಲಾಗಿದೆ, ಎಂದು ಟ್ರಸ್ಟನ ಕಾರ್ಯದರ್ಶಿ ಜಿತೇಂದ್ರ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.