ಉತ್ತರಾಖಂಡದ ಹರಿದ್ವಾರದಲ್ಲಿ 2022 ರ ಏಪ್ರಿಲ್ 5 ರಿಂದ 11 ರವರೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ದೇಶದ ಆಯ್ದ ಪ್ರಮುಖ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿದೆ. 

ಈ ಸಭೆಯು ಮಾನನೀಯ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಮತ್ತು ಮಾನನೀಯ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರ ಉಪಸ್ಥಿತಿಯಲ್ಲಿ ನಡೆಯಲಿದೆ.  ಸಂಘದ ಎಲ್ಲಾ ಸಹಸರಕಾರ್ಯವಾಹರು ಮತ್ತು ಶಾರೀರಿಕ, ಬೌದ್ಧಿಕ, ವ್ಯವಸ್ಥಾ, ಪ್ರಚಾರ, ಸೇವಾ ಮತ್ತು ಸಂಪರ್ಕ ಕಾರ್ಯ ವಿಭಾಗಗಳ ಮುಖ್ಯಸ್ಥರು ಸೇರಿದಂತೆ ಒಟ್ಟು 75 ಕಾರ್ಯಕರ್ತರನ್ನು ಸಭೆಗೆ ಆಹ್ವಾನಿಸಲಾಗುತ್ತದೆ.

ಈ ವರ್ಷ ಸಂಘದ 105 ಸ್ಥಾನಗಳಲ್ಲಿ ಸಂಘ ಶಿಕ್ಷಾ ವರ್ಗ ಸೇರಿದಂತೆ ಇತರ ಪ್ರಶಿಕ್ಷಣ ವರ್ಗಗಳನ್ನು ದೇಶಾದ್ಯಂತ ಆಯೋಜಿಸಲಾಗುತ್ತಿದ್ದು.ಈ ಪ್ರಶಿಕ್ಷಣಗಳಲ್ಲಿನ ಪಠ್ಯಕ್ರಮದಲ್ಲಿ ಬೌದ್ಧಿಕ ಮತ್ತು ಶಾರೀರಿಕವಾದ ವಿಚಾರಗಳಿಗೆ ಅಗತ್ಯವಾದ ಬದಲಾವಣೆಗಳನ್ನು ಈ ಸಭೆಯಲ್ಲಿ ಚರ್ಚಿಸಲಾಗುವುದು. ಸಂಘದ ಕಾರ್ಯಕರ್ತರ ನಿರ್ಮಾಣದಲ್ಲಿ ಈ ವರ್ಗಗಳು ಪ್ರಮುಖ ಪಾತ್ರವಹಿಸುತ್ತವೆ. ಅಂತಹ ಪಠ್ಯಕ್ರಮಗಳನ್ನು ಕಾಲಕಾಲಕ್ಕೆ ಅಂದರೆ ಮೂರರಿಂದ ಐದು ವರ್ಷಗಳ ಮಧ್ಯಂತರದಲ್ಲಿ ಪರಿಶೀಲಿಸಲಾಗುತ್ತದೆ. ಇದಲ್ಲದೆ, ಹಿಂದಿನ ವರ್ಷಗಳಲ್ಲಿ ನಡೆದ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಯೋಜನೆಗಳು ಮತ್ತು ನಿರ್ಣಯಗಳ ಅನುಷ್ಠಾನದ ಕುರಿತು ಸಭೆಯಲ್ಲಿ ವಿಚಾರ ವಿಮರ್ಶೆಗಳು ನಡೆಯಲಿವೆ.  ಇದರೊಂದಿಗೆ ವಿವಿಧ ಪ್ರಾಂತ್ಯಗಳಲ್ಲಿ ನಡೆಯುತ್ತಿರುವ ಸಂಘಕಾರ್ಯ ಮತ್ತು ವಿಶೇಷ ಕಾರ್ಯವಿಧಿಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗುವುದು.

ಶ್ರೀ ಸುನಿಲ್ ಅಂಬೇಕರ್
ಅಖಿಲ ಭಾರತ ಪ್ರಚಾರ ಪ್ರಮುಖರು
ರಾಷ್ಟ್ರೀಯ ಸ್ವಯಂಸೇವಕ ಸಂಘ

Leave a Reply

Your email address will not be published.

This site uses Akismet to reduce spam. Learn how your comment data is processed.