ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷತ್  ಬೆಂಗಳೂರು ಘಟಕದ ವತಿಯಿಂದ ಅಕ್ಟೋಬರ್ ೧ ರಂದು ನಗರದ ಮೂರು ಕಡೆಗಳಲ್ಲಿ ಸರಸ್ವತಿ ಪೂಜೆ ಆಚರಿಸಲಾಯಿತು . ಜಯನಗರ ಶ್ರೀ ಜಯರಾಮ ಸೇವಾ ಮಂಡಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಘಂಟು ತಜ್ಞ ಶ್ರೀ ಜಿ . ವೆಂಕಟಸುಬ್ಬಯ್ಯ ಅವರು ಪಾಲ್ಗೊಂಡು ಅ. ಭಾ .ಸಾ . ಪ ದ ವೆಬ್ ಸೈಟ್ ಮತ್ತು ವಾರ್ತಾ ಪತ್ರ ಲೋಕಾರ್ಪಣೆ ಮಾಡಿದರು.
Venkatasubbaiah-3
ಡಾ . ಎಸ್ . ಆರ್ . ಲೀಲಾ ಅವರು ಸರಸ್ವತಿ ವಂದನೆ ಮತ್ತು ಅದರ ಮಹತ್ವ ಕುರಿತು   ಉಪನ್ಯಾಸ ನೀಡಿದರು . ಮಿಥಿಕ್ ಸೊಸೈಟಿ ಸದಸ್ಯ ಶ್ರೀ ಎಂ . ಆರ್ .ಪ್ರಸನ್ನ ಕುಮಾರ್ ಪ್ರಾಸ್ತಾವಿಕ ಭಾಷಣ ಮಾಡಿ ಸಾಹಿತ್ಯ ಭಾರತಿ ಉದ್ದೇಶ ಮತ್ತು ಕಾರ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು
ವೆಬ್ ಸೈಟ್ ವಿಳಾಸ : www.sahityabharathi.org
ಶ್ರೀ ರಾಮಪುರ ಶ್ರೀ ಸಾಂದೀಪನಿ ವಿದ್ಯಾಭವನದಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಕೃತ ಉಪನ್ಯಾಸಕ ಡಾ . ಗಣಪತಿ ಹೆಗಡೆ ವಿಶೇಷ ಭಾಷಣ ಮಾಡಿದರು,ತಾಂತ್ರಿಕ ಸಲಹೆಗಾರ ಶ್ರೀ ಎನ್ . ಎಸ್ . ಗೋಪಾಲ್ ಪ್ರಾಸ್ತಾವಿಕ ಮಾತನಾಡಿದರು.ಕನ್ನಡ ಸಾಹಿತ್ಯ ಪರಿಷತ್ ಆಜೀವ ಸದಸ್ಯ ಶ್ರೀ ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು .
ಮತ್ತೊಂದು ಕಾರ್ಯಕ್ರಮ ಆರ್ . ಟಿ .ನಗರ ದಲ್ಲಿ ನಡೆಯಿತು .

Leave a Reply

Your email address will not be published.

This site uses Akismet to reduce spam. Learn how your comment data is processed.