ಕಾನ್ಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ತಮ್ಮ ಕಾನ್ಪುರ ಪ್ರವಾಸದಲ್ಲಿ ಮೂರು ಸಂಘಟನಾ ಸಭೆಗಳಲ್ಲಿ ಭಾಗವಹಿಸಿದರು.
ಮೊದಲ ಅವಧಿಯಲ್ಲಿ ಕುಟುಂಬ ಪ್ರಬೋಧನದಲ್ಲಿ ಕಾರಗಯಕರ್ತರು ಪ್ರಾಂತದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ವರದಿ ನೀಡಿದರು.ಇದನ್ನು ಆಲಿಸಿ ಈ ಕಾರ್ಯಕ್ಕೆ ವೇಗ ಕೊಡಬೇಕು ಎಂದು ಆಗ್ರಹಿಸಿದರು. ಮಾತನಾಡುತ್ತಾ, “ಪ್ರತಿ ಕುಟುಂಬವೂ ಸುಸಂಸ್ಕೃತವಾಗಬೇಕು, ಕುಟುಂಬದ ಅರ್ಥ ಚಿಕ್ಕಪ್ಪ-ಚಿಕ್ಕಮ್ಮ,ಮಾವ – ಅತ್ತೆ, ಅಜ್ಜ- ಅಜ್ಜಿ ಇತ್ಯಾದಿ, ಅಲ್ಲದೆ ಪ್ರತಿ ಕುಟುಂಬದಲ್ಲೂ ಎಲ್ಲಾ ಸದಸ್ಯರು ದಿನಕ್ಕೆ ಒಮ್ಮೆ ಕೂತು ಒಟ್ಟಿಗೆ ಊಟ ಮಾಡಬೇಕು”, ಎಂದು ಹೇಳಿದರು.
ಎರಡನೇ ಅವಧಿಯಲ್ಲಿ ಸೇವಾ ವಿಭಾಗದ ಕಾರ್ಯಕರ್ತರು ತಮ್ಮ ಕೆಲಸದ ವಿವರಗಳನ್ನು ಸರಸಂಘಚಾಲಕರಾದ ಮೋಹನ್ ಭಾಗವತ್ ಅವರೆದುರು ಮಂಡಿಸಿದರು. ಪ್ರಾಂತದ 215 ಸೇವಾ ನೆಲೆಗಳಲ್ಲಿ ಹೊಲಿಗೆ ಕೇಂದ್ರಗಳು, ಸಂಸ್ಕಾರ ಕೇಂದ್ರಗಳು ಇತ್ಯಾದಿ 15 ರೀತಿಯ ಸೇವಾ ಕಾರ್ಯಗಳು ನಡೆಯುತ್ತಿವೆ ಎಂದು ಕಾರ್ಯಕರ್ತರು ತಿಳಿಸಿದರು. ಆನಂತರ ಮಾತನಾಡಿದ ಸರಸಂಘಚಾಲಕರು, “ನಮ್ಮದು ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆ, ಸಮಾಜದ ನೋವು ನಮ್ಮ ನೋವು. ಸಮಾಜದ ಪ್ರತಿಯೊಂದು ವರ್ಗವೂ ಪ್ರಗತಿ ಹೊಂದಬೇಕು, ಜಾತೀಯತೆಯ ಮನಸ್ಥಿತಿಯನ್ನು ಸಂಪೂರ್ಣವಾಗಿ ತೊಲಗಿಸಬೇಕು. ನಾವೆಲ್ಲರೂ ಭಾರತ ಮಾತೆಯ ಮಕ್ಕಳು, ಒಂದೇ ತಾಯಿಯ ಮಕ್ಕಳು,ಹಾಗಾಗಿಯೇ ನಾವೆಲ್ಲರೂ ಒಡಹುಟ್ಟಿದವರು.” ಎನ್ನುತ್ತಾ ಸಾಮರಸ್ಯದ ಸಂದೇಶ ಸಾರಿದರು.
ಮೂರನೇ ಅವಧಿಯಲ್ಲಿ, ಪ್ರಾಂತ ಕಾರ್ಯಕಾರಿಣಿಯ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ಸರಸಂಘಚಾಲಕರು, ಮಾತನಾಡುತ್ತಾ, “ಘೋಷ್ ಶಿಬಿರದಲ್ಲಿ ಹವಾಮಾನವು ಸಹಕರಿಸದ ಇರಬಹುದು, ಆದರೆ ಸ್ವಯಂಸೇವಕರು ಬಹಳ ಶ್ರದ್ಧೆಯಿಂದ ವಾದ್ಯಗಳನ್ನು ನುಡಿಸುವುದನ್ನು ಅಭ್ಯಾಸ ಮಾಡಿದ್ದಾರೆ. ಈ ರೀತಿಯ ಅಭ್ಯಾಸ ನಿರಂತರವಾಗಿ ಮುಂದುವರಿದರೆ ಮಾತ್ರ ಶಿಬಿರದ ಸಾರ್ಥಕವಾಗುತ್ತದೆ. ಪ್ರತಿ ಜಿಲ್ಲೆಯಲ್ಲೂ ಘೋಷ್ನ ಉತ್ತಮ ತಂಡವು ರೂಪುಗೊಳ್ಳಲಿ. ಜನರು ಘೋಷ್ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಲಿ. 2025ರಲ್ಲಿ ಸಂಘದ ಶತಮಾನೋತ್ಸವ ವರ್ಷ ಪೂರ್ಣಗೊಳ್ಳುವ ಸಂದರ್ಭದಲ್ಲಿ ಪ್ರಾಂತದ ಪ್ರತಿ ಗ್ರಾಮಗಳಲ್ಲಿ ಶಾಖೆಯಾಗಬೇಕು. ದೇವಸ್ಥಾನ, ಸ್ಮಶಾನ, ಜಲ ಮೂಲದ ಮೇಲೆ ಇಡೀ ಹಿಂದೂ ಸಮಾಜಕ್ಕೆ ಸಮಾನ ಹಕ್ಕು ಸಿಗಬೇಕು. ಜಾತೀಯತೆ ಸಮಾಜಕ್ಕೆ ಕಂಟಕವಾಗಿದೆ, ದೊಡ್ಡವರು ಅಥವಾ ಚಿಕ್ಕವರು ಯಾರೂ ಇಲ್ಲ, ಎಲ್ಲರೂ ಸಮಾನರು. ಎಲ್ಲಾ ಜಾತಿಗಳ ಸಮಾಜವು ರಾಷ್ಟ್ರೀಯ ಹಿತಾಸಕ್ತಿಗೆ ಕೊಡುಗೆ ನೀಡಿದೆ, ಮಹಾಪುರುಷರು ಹುಟ್ಟದ ಜಾತಿ ಇರಲು ಸಾಧ್ಯವೇ ಇಲ್ಲ, ಎಲ್ಲ ಜಾತಿಯಲ್ಲೂ ಯಾರಾದರೂ ಒಬ್ಬರು ಮಹಾಪುರುಷ ಜನಿಸಿರುತ್ತಾರೆ”.
ಬೈಠಕ್ನಲ್ಲಿ ಅಖಿಲ ಭಾರತೀಯ ಸಹ ವ್ಯವಸ್ಥಾ ಪ್ರಮುಖ್ ಶ್ರೀ ಅನಿಲ್ ಓಕ್ ಹಾಗು ಸಂಘಚಾಲಕ ಜ್ಞಾನೇಂದ್ರ ಸಚಾನ್ ಅವರು, ಪ್ರಾಂತ ಪ್ರಚಾರಕ ಶ್ರೀ ರಾಮ, ಸಹ ಪ್ರಾಂತ ಪ್ರಚಾರಕ ರಮೇಶ, ಹಾಗು ಅನೇಕ ಅಧಿಕಾರಿಗಳು, ಹಿರಿಯ ಸ್ವಯಂಸೇವಕರು ಉಪಸ್ಥಿತರಿದ್ದರು.