ಮುಂಬಯಿ : “ಇಂದು ಭಾರತದಲ್ಲಿ ಅಪಾರ ಸಾಧ್ಯತೆಗಳಿವೆ” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ.ಮೋಹನ್ ಭಾಗವತ್ ಅವರು ಹೇಳಿದರು. “ಪ್ರತಿ ವಲಯದಲ್ಲಿ ನುರಿತ ಮಾನವ ಸಂಪನ್ಮೂಲ ಲಭ್ಯವಿದೆ.ಭಾರತ ವಿಶ್ವ ಗುರುವಾಗಲು ಸಂಪೂರ್ಣವಾಗಿ ಅನುಕೂಲಕರವಾದ ಪರಿಸ್ಥಿತಿ ಇದೆ. ಸಂತ ಶಿರೋಮಣಿ  ರವಿದಾಸರ ಸಾಮರಸ್ಯದ ತತ್ವಗಳನ್ನು ಪ್ರತಿಯೊಬ್ಬರೂ ಅನುಸರಿಸಿದರೆ, ಭಾರತವು ವಿಶ್ವ ಗುರುವಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ”ಎಂದು ಅವರು ರವಿದಾಸ ಜಯಂತಿಯಂದು ರವಿದಾಸ ಸಮಾಜ ಪಂಚಾಯತ್ ಸಂಘ, ವಿಭಾಗ ಸಮಿತಿ ನಂ.5, ವಸುಧಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರಭಾದೇವಿಯಲ್ಲಿರುವ ರವೀಂದ್ರ ನಾಟ್ಯ ಮಂದಿರದಲ್ಲಿ ಆಯೋಜಿಸಿದ್ದ ಸಂತ ಶಿರೋಮಣಿ ಸಂತ ರವಿದಾಸ ಜಯಂತಿ ಆಚರಣೆ ಸಮಾರೋಪಗೊಂಡಿತು.

ಸಂತ ಶಿರೋಮಣಿ ಸಂತ ರವಿದಾಸ್ ಜಯಂತಿ ಆಚರಣೆಯಲ್ಲಿ ಸರಸಂಘಚಾಲಕರು ಮಾತನಾಡುತ್ತಾ “ಸಂತ ರವಿದಾಸರ ಬಗ್ಗೆ ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ” ಎಂದು ಹೇಳುತ್ತಾ,”ಇಂದು ಭಾರತ ಸಾಧಿಸುತ್ತಿರುವ ಪ್ರಗತಿಯು ತನ್ನ ಬೇರುಗಳನ್ನು ಭಾರತೀಯ ಸಂತರ ವಿಚಾರಗಳ ಮೂಲದಲ್ಲಿದೆ. ಸಂತ ರವಿದಾಸರೂ ಅದರ ಅವಿಭಾಜ್ಯ ಅಂಗ. ಅವರ ಕೆಲಸ ಮತ್ತು ಅವರ ಕಾರ್ಯದ ಪರಿಣಾಮಗಳನ್ನು ನೋಡಿ, ಸಮಕಾಲೀನ ಸಂತರು ಅವರಿಗೆ ಸಂತ ಶಿರೋಮಣಿ ಎಂಬ ಬಿರುದನ್ನು ನೀಡಿದ್ದರು.”

ಮೋಹನ್ ಭಾಗವತ್  ಅವರು ಮುಂದುವರೆದು ಮಾತನಾಡುತ್ತಾ “ವಿತ್ತೀಯ ಲಾಭದ ಕಾರಣಕ್ಕಾಗಿ ತಪ್ಪು ಸಂಪ್ರದಾಯದ ಚೌಕಟ್ಟಗಳನ್ನು ಸೃಷ್ಟಿಸಲಾಗಿದೆ. ಇದರಿಂದ ದಬ್ಬಾಳಿಕೆಯ ವ್ಯವಸ್ಥೆಯನ್ನು ಸೃಷ್ಟಿಯಾಯಿತು. ಇದು ನಮ್ಮ ನಡುವೆ ಇದ್ದ ಆತ್ಮೀಯತೆ ಮತ್ತು ಬಾಂಧವ್ಯವನ್ನು ಕೊಂದು ಹಾಕಿತು ಮತ್ತು ವಿದೇಶಿ ಶಕ್ತಿಗಳು ಈ ಒಡಕಿನ ಲಾಭ ಪಡೆದು ನಮ್ಮನ್ನು ವಿಭಜಿಸಲು ಅವಕಾಶವನ್ನು ಗಿಟ್ಟಿಸಿಕೊಂಡಿತು. ಹಿಂದೆ ನಮ್ಮಲ್ಲಿನ ಸಂಪತ್ತಿನ ಲೂಟಿಗಾಗಿ ಮಾತ್ರ ಆಕ್ರಮಣಗಳು ನಡೆಯುತ್ತಿದ್ದವು. ಇಸ್ಲಾಮಿಕ್ ಆಕ್ರಮಣದ ನಂತರ ಪರಿಸ್ಥಿತಿ ಬಿಗಡಾಯಿಸಿತು.ಅದೆಂತಹ ಆಕ್ರಮಣವೆಂದರೆ ಆ ಅಕ್ರಮಣ ನಮ್ಮ ಇಡೀ ವ್ಯವಸ್ಥೆಯ ತಳಹದಿಯನ್ನೇ ಬುಡಮೇಲು ಮಾಡಿಬಿಟ್ಟಿತು.”

ಸಂತ ರವಿದಾಸರಿಗೆ ಸತ್ಯದ ಅರಿವಾಯಿತು, ಅವರ ಹಾದಿ ಸತ್ಯದ ಹುಡುಕಾಟವಾಗಿತ್ತು. ಶೇಷ್ಠ -ಕನಿಷ್ಠ ಎಂಬ ಕಲ್ಪನೆ ಸಂಪೂರ್ಣ ತಪ್ಪು ಎಂದು ಅವರು ನಂಬಿದ್ದರು. ಸತ್ಯ, ಸಹಾನುಭೂತಿ, ಆಂತರಿಕ ಶುದ್ಧತೆ ಮತ್ತು ನಿರಂತರ ಪರಿಶ್ರಮ ರವಿದಾಸರ ಬೋಧನೆಗಳು. ಯಾವ ಪರಂಪರೆಯನ್ನು ಜೊತೆಗೂಡಿಸಿಕೊಂಡು ನಡೆಯಬೇಕು ಮತ್ತು ಯಾವುದನ್ನು ಸಂಪ್ರದಾಯದಿಂದ ದೂರವಿಡಬೇಕು ಎಂಬುದು ಅವರಿಗೆ ತಿಳಿದಿತ್ತು. ಸಂತ ರವಿದಾಸರ ಆಧ್ಯಾತ್ಮಿಕ ಶಕ್ತಿಯಿಂದಾಗಿ ಅನೇಕ ಗಣ್ಯರು ಅವರ ಶಿಷ್ಯರಾದರು.

ಸಂತ ರವಿದಾಸರು ಸದ್ಗುಣದಿಂದ ಗೌರವ ಪಡೆಯಿರಿ ಎಂಬ ಸಂದೇಶ ನೀಡಿದರು. ಸಂತ ರವಿದಾಸರು ವೈರಾಗಿಗಳಾಗಿದ್ದರು ಹಾಗಾಗಿಯೇ ಅವರು ಸತ್ಯವನ್ನು ಹೇಳಬಲ್ಲವರಾಗಿದ್ದರು. ದೇಶವನ್ನು ವಿಶ್ವಗುರುವನ್ನಾಗಿ ಮಾಡಲು, ಪ್ರತಿಯೊಬ್ಬ ಭಾರತೀಯನೂ ಸಂತ ರವಿದಾಸರ ವೈರಾಗ್ಯದ ಮನೋಭಾವವನ್ನು ಹೊಂದಬೇಕಾಗಿದೆ.

ಒಂದು ಸುಧಾರಿತ ಸಮಾಜದ ಅಡಿಪಾಯವೇ ಸಾಮರಸ್ಯ. ಇಂದು ತುಟಿಗಳಲ್ಲಿ ಮಾತ್ರವಱ ಸಾಮರಸ್ಯ ಗೋಚರಿಸುತ್ತದೆ. ಅದು ಒಳಗಿನಿಂದ ಬರಬೇಕು, ನಾವೆಲ್ಲರೂ ಹಾಗೆ ಒಳಗಿನಿಂದ ಬರುವಂತೆ ಪ್ರಯತ್ನಿಸಬೇಕಾಗಿದೆ. ಪ್ರತಿಯೊಂದು ಸಂದರ್ಭದಲ್ಲೂ ಸಂತ ರವಿದಾಸರು ಹೇಗೆ ನಡೆದುಕೊಂಡರು,ಹೇಗೆ ವಿಚಾರ ಮಾಡಿದರು ಎಂಬುದನ್ನು ಅಧ್ಯಯನ ಮಾಡಿ, ಅಭ್ಯಾಸ ಮಾಡಿ ದೇಶವನ್ನು ಮುನ್ನಡೆಸೋಣ ಎಂದು ಭಾಗವತ್ ಅವರು ತಮ್ಮ ವಿಚಾರ ಮಂಡಿಸಿದರು. ಕಾರ್ಯಕ್ರಮದ ಸ್ಥಳಕ್ಕೆ ಬರುವ ಮುನ್ನ ಅಲ್ಲಿನ ಸಂತ ರವಿದಾಸರ ಭವನಕ್ಕೂ ಭೇಟಿ ನೀಡಿದರು.

ವೇದಿಕೆಯಲ್ಲಿ ವಾರ್ಡ್ ಸಮಿತಿ ನಂ.5 ಅಧ್ಯಕ್ಷ ನಾರಾಯಣ ತಿವೇರೆಕರ್, ಸಮಾಜದ ಅಧ್ಯಕ್ಷ ಮಯೂರ್ ದೇವ್ಲೇಕರ್, ಧನಂಜಯ್ ವಸಂತ ವಯಂಗಾಣಕರ್, ವಿನಾಯಕ ವಸಂತ ವಯಂಗಾಣಕರ್, ವಸುಧಾ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ರವಿ ಪೇವೇಕರ ಉಪಸ್ಥಿತರಿದ್ದರು. 2023 ರ ಅಂತ್ಯದ ವೇಳೆಗೆ ಸಂತ ರವಿದಾಸ್ ಜಿ ಭವನವನ್ನು ಉದ್ಘಾಟಿಸಲಾಗುವುದು ಮತ್ತು ಈ ಭವನದ ಆರನೇ ಮಹಡಿಯಲ್ಲಿ ಸಮಾಜದ ಉದ್ಯಮಿಗಳಿಗಾಗಿ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಮಯೂರ್ ದೇವಲೇಕರ್ ಹೇಳಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.