ಇಂದು ಜಯಂತಿ

ಸತ್ಯೇಂದ್ರನಾಥ್ ಬೋಸ್ ಅವರು ಭಾರತೀಯ ಗಣಿತಶಾಸ್ತ್ರಜ್ಞರಾಗಿ ಪ್ರಸಿದ್ಧಿ ಹೊಂದಿದವರು. ಅಷ್ಟೇ ಅಲ್ಲದೆ ಸಂಖ್ಯಾಶಾಸ್ತ್ರೀಯ ಯಂತ್ರಶಾಸ್ತ್ರದಲ್ಲಿ ಪ್ರಮುಖ ಕೆಲಸ ಮಾಡಿದರು. ಆಲ್ಬರ್ಟ್ ಐನ್ಸ್ಸ್ಟೇನ್ ಅವರ ಸಹಯೋಗ ಮತ್ತು ಬೋಸ್ ಐನ್ಸ್ಸ್ಟೇನ್ ಅಂಕಿ ಅಂಶಗಳ ಅಡಿಪಾಯಕ್ಕಾಗಿ ಅವರು ಹೆಚ್ಚು ಹೆಸರುವಾಸಿಯಾಗಿದ್ದರು. ಅವರು ಗಣಿತ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯ. ಇಂದು ಅವರ ಜಯಂತಿ.


ಪರಿಚಯ
ಸತ್ಯೇಂದ್ರನಾಥ್ ಬೋಸ್ ಅವರು ಜನವರಿ 1, 1894ರಲ್ಲಿ ಕೊಲ್ಕತ್ತಾದಲ್ಲಿ ಜನಿಸಿದರು. ಇವರ ತಂದೆ ಸುರೇಂದ್ರನಾಥ್ ಅವರು ಈಸ್ಟ್ ಇಂಡಿಯಾ ರೈಲ್ವೆಯ ಇಂಜಿನಿಯರಿಂಗ್ ವಿಭಾಗದಲ್ಲಿ ಕೆಲಸ ನಿರ್ವಹಿಸಿದರು. ಅವರು ಪ್ರಾಥಮಿಕ ಮತ್ತು ಫ್ರೌಢಶಾಲೆಯನ್ನು ಕೊಲ್ಕತ್ತಾದಲ್ಲಿ ಮುಗಿಸಿದರು. ನಂತರ ಅವರು ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿಎಸ್ಸಿ ಮತ್ತು ಎಂಎಸ್ಸಿ ಪದವಿಯಲ್ಲಿ ವ್ಯಾಸಂಗ ಮಾಡಿದರು.


ವೃತ್ತಿ
ಸತ್ಯೇಂದ್ರನಾಥ್ ಅವರು 1916ರಲ್ಲಿ ಕೊಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಉಪನ್ಯಾಸಕರಾಗಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ಅವರು ಅಲ್ಲಿ 1916 ರಿಂದ 1921 ರವರೆಗೆ ಸೇವೆ ಸಲ್ಲಿಸಿದರು. ಅವರು 1921ರಲ್ಲಿ ಹೊಸದಾಗಿ ಸ್ಥಾಪಿಸಲಾದ ಢಾಕಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು. 1924ರಲ್ಲಿ ಸತ್ಯೇಂದ್ರ ನಾಥ್ ಬೋಸ್ ಮ್ಯಾಕ್ಸ್ ಪ್ಲಾಂಕ್ಸ್ ಲಾ ಮತ್ತು ಲೈಟ್ ಕ್ವಾಂಟಮ್ ಹೈಪೋಥೆಸಿಸ್ ಎಂಬ ಶೀರ್ಷಿಕೆಯ ಲೇಖನವನ್ನು ಪ್ರಕಟಿಸಿದರು. ವಿಜ್ಞಾನ ವಲಯಗಳಲ್ಲಿ ‘ಬೋಸ್-ಐನ್ಸ್ಟೈನ್ ಸಿದ್ಧಾಂತ’ ಎಂದು ಪ್ರಸಿದ್ದಿ ಪಡೆದರು.


ಸಾಧನೆ
ಬೋಸ್ ಅವರು 1924ರಲ್ಲಿ ಯುರೋಪ್ ಗೆ ತೆರಳಿದರು. ಅವರು ಮೇರಿ ಕ್ಯೂರಿ, ಪೌಲಿ, ಹೈಸೆನ್ಬರ್ಗ್ ಮತ್ತು ಪ್ಲಾಂಕ್ ಅವರಂತಹ ವಿಜ್ಞಾನಿಗಳೊಂದಿಗೆ ಕೆಲಸ ಮಾಡಿದರು. ಅವರು ಬರ್ಲಿನ್ ನಲ್ಲಿ ಐನ್ಸ್ಸ್ಟೇನ್ ಅವರನ್ನು ಭೇಟಿಯಾದರು. 2 ವರ್ಷಗಳ ಯುರೋಪ್ ನಲ್ಲಿ ವಾಸಿಸಿದ ನಂತರ, ಬೋಸ್ 1926ರಲ್ಲಿ ಢಾಕಾಗೆ ಮರಳಿದರು. 1945ರಲ್ಲಿ ಕೊಲ್ಕತ್ತಾಗೆ ಮರಳಿದರು. ಅಲ್ಲಿ ಅವರು ಕೊಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ನೇಮಕಗೊಂಡರು.


1956ರಲ್ಲಿ ಕೊಲ್ಕತ್ತಾ ವಿಶ್ವವಿದ್ಯಾಲಯದಿಂದ ನಿವೃತ್ತರಾಗಿ ಮತ್ತು ಶಾಂತಿನಿಕೇತನಕ್ಕೆ ಸ್ಥಳಾಂತರಗೊಂಡರು. ಅವರು ಶಾಂತಿನಿಕೇತನದಲ್ಲಿ ದೀರ್ಘಕಾಲ ಉಳಿಯಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ಮತ್ತೆ ಕೊಲ್ಕತ್ತಾಕ್ಕೆ ಹಿಂದಿರುಗಬೇಕಾಯಿತು. ಅದೇ ವರ್ಷ ಅವರನ್ನು ರಾಯಲ್ ಸೊಸೈಟಿಯ ಫೆಲೋ ಆಗಿ ನೇಮಿಸಲಾಯಿತು. ನಂತರ ರಾಷ್ಟ್ರೀಯ ಪ್ರಾಧ್ಯಾಪಕರಾಗಿ ನೇಮಕಗೊಂಡರು. ನಂತರ ಅವರು ವಿಶ್ವಭಾರತಿ ವಿಶ್ವವಿದ್ಯಾಲಯದ ಉಪಕುಲಪತಿಯಾದರು. 1958ರಲ್ಲಿ, ಅವರನ್ನು ಲಂಡನ್ನ ರಾಯಲ್ ಸೊಸೈಟಿಯ ಫೆಲೋ ಮಾಡಲಾಯಿತು.


ಪ್ರಶಸ್ತಿ
ಸತ್ಯೇಂದ್ರನಾಥ್ ಬೋಸ್ ಅವರ ಅತ್ಯುತ್ತಮ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರವು ‘ಪದ್ಮಭೂಷಣ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಸತ್ಯೇಂದ್ರನಾಥ್ ಬೋಸ್ ಅವರು ಫೆಬ್ರವರಿ 4, 1974 ರಂದು ಕೊಲ್ಕತ್ತಾದಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.