ಇಂದು ಜಯಂತಿ

ಸತ್ಯಜಿತ್‌ ರೇ ಅವರು 20ನೇ ಶತಮಾನದ ಹೆಸರಾಂತ ಚಲನಚಿತ್ರ ನಿರ್ದೇಶಕರಾಗಿ ಪ್ರಸಿದ್ಧಿ ಹೊಂದಿದವರು. ಇವರು ಪ್ರಾದೇಶಿಕ ಭಾಷೆಯಲ್ಲಿ ಸಿನಿಮಾ ಮಾಡಿ ಆಸ್ಕರ್‌ ಪ್ರಶಸ್ತಿ ಪಡೆಯಬಹುದೆಂದು ಜಗತ್ತಿಗೆ ತೋರಿಸಿಕೊಟ್ಟ ಮಹಾನ್‌ ನಿರ್ದೇಶಕರು. ಇವರು ಸಿನಿಮಾ ಮಾತ್ರವಲ್ಲದೆ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಗಮನಾರ್ಹ. ಇಂದು ಅವರ ಜಯಂತಿ.


ಪರಿಚಯ
ಸತ್ಯಜಿತ್‌ ರೇ ಅವರು ಮೇ 2, 1921 ರಂದು ಕೊಲ್ಕತ್ತಾದಲ್ಲಿ ಜನಿಸಿದರು. ಇವರ ತಂದೆ ಸುಕುಮಾರ್‌ ಅವರು ಪ್ರಸಿದ್ಧ ಕವಿಯಾಗಿದ್ದರು. ರೇ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು
ಬ್ಯಾಲಿಗುಂಗೆಯಲ್ಲಿ ಪಡೆದರು. ನಂತರ ಅವರು ಕೊಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಪದವಿ ಪಡೆದರು. ಇವರು ಚಿಕ್ಕವಯಸ್ಸಿನಿಂದಲೇ ಹೆಚ್ಚು ಕಲೆಯ ಬಗ್ಗೆ ಆಸಕ್ತಿ ಹೊಂದಿದ್ದರು. ಹೀಗಾಗಿ ಆರಂಭದಿಂದಲೂ ಸಿನಿಮಾ ಬಗ್ಗೆ ಒಲವು ತೋರಿದ್ದರು.


ಸಿನಿಮಾ ಕ್ಷೇತ್ರದ ಕೊಡುಗೆ
ಸತ್ಯಜಿತ್ ರೇ ಅವರು ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ, ಸಂಗೀತ ಸಂಯೋಜಕ, ಕಥೆಗಾರ ಮಾತು ಕಲಾ ವಿನ್ಯಾಸಕ ಎಲ್ಲವೂ ಒಂದುಗೂಡಿದ್ದ ಅತ್ಯದ್ಭುತ ಪ್ರತಿಭಾವಂತರಾಗಿದ್ದರು. ಅವರು ಪೋಸ್ಟರುಗಳನ್ನು, ಅಕ್ಷರಗಳ ಅಚ್ಚುವಿನ್ಯಾಸವನ್ನು ಕೂಡಾ ತಾವೇ ಮಾಡಿಕೊಳ್ಳುತ್ತಿದ್ದರು. ಸತ್ಯಜಿತ್‌ ರೇ ಅವರು ಜಾಹೀರಾತು ಏಜೆನ್ಸಿಗಳಿಗೆ ಸಚಿತ್ರಕಾರರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಅವರು 1947 ರಲ್ಲಿ ಕೊಲ್ಕತ್ತಾದಲ್ಲಿ ಮೊದಲ ಫಿಲ್ಮ್ ಸೊಸೈಟಿಯನ್ನು ಸ್ಥಾಪಿಸಿದರು. ಇವರು 1955ರಲ್ಲಿ ತಮ್ಮ ಮೊದಲ ಚಿತ್ರ ಪಾಥೇರ್‌ ಪಾಂಚಾಲಿ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. ಕೇನ್ಸ್‌ ಫಿಲ್ಮ್‌ ಫೆಸ್ಟಿವಲ್‌ ನಲ್ಲಿ ಚಿತ್ರ ಸಾಕಷ್ಟು ಪ್ರಶಂಸೆ ಗಳಿಸಿತು. ಇಂದಿಗೂ ಸಹ ಈ ಸಿನಿಮಾ ಹೆಚ್ಚು ಪ್ರಚಲಿತದಲ್ಲಿದೆ.


ಚಾರುಲತಾ (1964, ದಿ ಲೋನ್ಲಿ ವೈಫ್) ಜಲ್ಸಾಘರ್ (1958, ದಿ ಮ್ಯೂಸಿಕ್ ರೂಮ್) 1962 ರಲ್ಲಿ ಕಾಂಚನ್ಜುಂಗಾ, ದಿ ಚೆಸ್ ಪ್ಲೇಯರ್ಸ್ (1977), ದಿ ಹೋಮ್ ಅಂಡ್ ದಿ ವರ್ಲ್ಡ್ ಎಂಬ ಚಲನಚಿತ್ರ ಸೇರಿದಂತೆ ಒಟ್ಟು 37 ಚಲನಚಿತ್ರಗಳನ್ನು ನಿರ್ದೇಶಿಸಿ ಪ್ರಪಂಚದಾದ್ಯಂತ ಪ್ರಸಿದ್ಧರಾದರು.


ಸಾಹಿತ್ಯ ಕ್ಷೇತ್ರ
ಸತ್ಯಜಿತ್‌ ರೇ ಅವರು ಸಿನಿಮಾ ನಿರ್ದೇಶನ ಮಾತ್ರವಲ್ಲದೆ ಸಾಹಿತ್ಯದ ಕಡೆಗೂ ಹೆಚ್ಚು ಒಲವು ತೋರಿದ್ದರು . ಇವರು ಫೆಲುಡಾ ಪಾತ್ರವನ್ನು ಒಳಗೊಂಡ ಜನಪ್ರಿಯ ಪತ್ತೇದಾರಿ ಕಥೆಗಳ ಸರಣಿಯನ್ನು ಬಳಗೊಂಡಂತೆ ಅನೇಕ ಪುಸಕ್ತಗಳನ್ನು ಬರೆದಿದ್ದಾರೆ. ಇವರು ಬರೆದಂತಹ ಪುಸ್ತಕಗಳನ್ನು ಇಂಗ್ಲಿಷ್‌, ಜರ್ಮನ್, ಫ್ರೆಂಚ್, ಸ್ಪ್ಯಾನಿಷ್, ಇಟಾಲಿಯನ್ ಮತ್ತು ಇತರ ಭಾರತೀಯ ಭಾಷೆಗಳಲ್ಲಿ ಅನುವಾದಿಸಲಾಗಿದೆ. ‘ದಿ ಕಂಪ್ಲೀಟ್ ಅಡ್ವೆಂಚರ್ಸ್ ಎಂಬ ಪುಸ್ತಕ ಕುತೂಹಲಕಾರಿ ಕಥೆಯನ್ನು ಒಳಗೊಂಡಿದೆ. ಶಂಕರ್‌, ಗಲ್ಫ್‌ ೧೦೧, ದಿ ಎಂಪರರ್ಸ್‌ ರಿಂಗ್‌, ಸೇರಾ ಸತ್ಯಜಿ, ರಾಯಲ್ ಬೆಂಗಾಲ್ ರಹಸ್ಯ ಸೇರಿದಂತೆ ಹಲವಾರು ಪುಸ್ತಕ ಬರೆದಿದ್ದಾರೆ.

ಪ್ರಶಸ್ತಿ

ಸತ್ಯಜಿತ್‌ ರೈ ಅವರಿಗೆ ಅತ್ಯುತ್ತಮ ಚಲನಚಿತ್ರಗಳಿಗಾಗಿ ಭಾರತ ಸರ್ಕಾರವು ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 1992ರಲ್ಲಿ ಅವರಿಗೆ ಆಸ್ಕರ್ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸಿನೆಮಾ ಕ್ಷೇತ್ರಕ್ಕೆ ಅವರ ಕೊಡುಗೆಯ ಕಾರಣಕ್ಕೆ ‘ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಯಿತು. ಜೊತೆಗೆ ಭಾರತ ಸರ್ಕಾರ ರೇ ಅವರಿಗೆ ‘ಭಾರತರತ್ನ’ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.
ರೇ ಅವರಿಗೆ ಆಸ್ಕರ್‌ ಪ್ರಶಸ್ತಿ ಘೋಷಣೆಯಾದಾಗ ಅನಾರೋಗ್ಯ ಸಮಸ್ಯೆಯಿಂದ ಪ್ರಶಸ್ತಿ ಸ್ವೀಕರಿಸಲು ವಿದೇಶಕ್ಕೆ ಹೋಗುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಆದ್ದರಿಂದ ಆಸ್ಕರ್‌ ಸಮಿತಿ ಅಧ್ಯಕ್ಷರು ಭಾರತಕ್ಕೆ ಬಂದು ಪ್ರಶಸ್ತಿ ನೀಡಿ ಗೌರವಿಸಿದ್ದರು.

ಸತ್ಯಜಿತ್‌ ರೇ ಅವರು ಏಪ್ರಿಲ್ 23, 1992‌ ರಂದು ಅನಾರೋಗ್ಯದಿಂದ ಕೊಲ್ಕತ್ತಾದಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.