ದೇಶದ ಮೊದಲ ಸೆಮಿಕಂಡಕ್ಟರ್ ಘಟಕ ರಾಜದಲ್ಲಿ ಸಾಪನೆಗೆ ಬೃಹತ್ ಒಪ್ಪಂದ 22900 ಕೋಟಿ ಹೂಡಲಿರುವ ಐಎಸ್‌ಎಂಸಿ ಸಂಸ್ಥೆಯು ಮೈಸೂರಿನಲ್ಲಿ ಜಾಗ ಕೇಳಿದೆ.
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಜಗತ್ತಿನ ಗಮನ ಸೆಳೆದಿರುವ ಕರ್ನಾಟಕ ಶೀಘ್ರದಲ್ಲೇ ದೇಶದ ಮೊದಲ ಹಾಗೂ ಅತ್ಯಂತ ಬೃಹತ್ ಸೆಮಿ ಕಂಡಕ್ಟರ್ ಘಟಕದ ತವರೂರಾಗಲಿದೆ. 22900 ಕೋಟಿ ಹೂಡಿಕೆಯೊಂದಿಗೆ ಸೆಮಿಕಂಡಕ್ಟರ್ ಘಟಕ ಸ್ಥಾಪಿಸಲು ಅಬುಧಾಬಿ ಮೂಲದ ನೆಕ್ಸ್ ಆರ್ಬಿಟ್ ವೆಂಚರ್ ಸಂಸ್ಥೆ ಸಾರಥ್ಯದ ಹೂಡಿಕೆದಾರರ ಒಕ್ಕೂಟವಾಗಿರುವ ಐಎಸ್ ಎಂಸಿ ಮುಂದೆ ಬಂದಿದೆ. ಮುಖ್ಯಮಂತ್ರಿ ಬೊಮ್ಮಾಯಿ ಸಮ್ಮುಖದಲ್ಲಿ ಐಎಸ್‌ಎಂಸಿ ಹಾಗೂ ರಾಜ್ಯ ಸರ್ಕಾರದ ನಡುವೆ ಭಾನುವಾರ ಒಪ್ಪಂದಕ್ಕೆ ಸಹಿ ಬಿದ್ದಿದೆ.
ದೇಶದ ಮೊತ್ತ ಮೊದಲ ಸೆಮಿ ಕಂಡಕ್ಟರ್ ಘಟಕ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಒಪ್ಪಂದ ಮಾಡಿಕೊಂಡಿದ್ದು ಇದರಿಂದಾಗಿ ಮುಂದಿನ ಎರಡು ದಶಕದಲ್ಲಿ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ ಲಭಿಸಲಿವೆ. ಇದಕ್ಕಾಗಿ ಕರ್ನಾಟಕ ಸರ್ಕಾರ, ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಅಶ್ವತ್ಥ ನಾರಾಯಣ ಅವರನ್ನು ಅಭಿನಂದಿಸುತ್ತೇನೆ ಎಂದು ರಾಜೀವ್ ಚಂದ್ರಶೇಖರ್ ಅವರು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯವು ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಬೆಂಗಳೂರು ತನ್ನ ಹಿಡಿತವನ್ನು ಮುಂದುವರೆಸುವ ಪ್ರಯತ್ನದಲ್ಲಿದೆ. ದೇಶದಲ್ಲಿ ಮೊದಲ ಒಪ್ಪಂದವಾಗಿದ್ದು ಮುಂದಿನ ದಿನಗಳಲ್ಲಿ ಬೆಂಗಳೂರು ಈ ನಿಟ್ಟಿನಲ್ಲಿ ಮಹತ್ವದ ಕೇಂದ್ರವಾಗಲಿದೆ ಎಂಬುದು ಐಟಿ ತಜ್ಞರ ಅಭಿಪ್ರಾಯ ವಾಗಿದೆ.
ಸೆಮಿ ಕಂಡಕ್ಟರ್‌ನ ಉತ್ಪಾದನೆಯ ಕುರಿತಾಗಿ ಮಾತನಾಡಿದ ನರೇಂದ್ರ ಮೋದಿಯವರು “ಭಾರತವು ತನ್ನ ತಂತ್ರಜ್ಞಾನದ ಕ್ರಾಂತಿಯನ್ನು ಮುನ್ನಡೆಸಲಿದೆ.ನಮ್ಮ ಸೆಮಿ ಕಂಡಕ್ಟರ್‌ಗಳ ಬಳಕೆಯು 2030ರ ಹೊತ್ತಿಗೆ 110ಬಿಲಿಯನ್ ಡಾಲರುಗಳ ವಹಿವಾಟನ್ನು ದಾಟಲಿದೆ.ನಾವು 21ನೆಯ ಶತಮಾನದಲ್ಲಿ ಅತ್ಯಂತ ಕೌಶಲಯುತವಾದ ಯುವಶಕ್ತಿಯಲ್ಲಿ ಹೂಡಿಕೆ ಮಾಡಿದ್ದೇವೆ.ಹಾಗಾಗಿ ತಂತ್ರಜ್ಞಾನದ ಉತ್ಪಾದನಾ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಸಾಧ್ಯವಾಗುತ್ತದೆ” ಎಂದಿದ್ದಾರೆ.