ಚನ್ನೇನಹಳ್ಳಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕರಾದ ಶ್ರೀ ತಿಮ್ಮಯ್ಯ (97ವರ್ಷಗಳು) ನಿಧನರಾಗಿದ್ದಾರೆ.

1954ರಿಂದ (69 ವರ್ಷಗಳಿಂದ) ಪ್ರಚಾರಕರು. ಕಳೆದ 49 ವರ್ಷಗಳಿಂದ ಜನಸೇವಾ ವಿದ್ಯಾಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಜನಸೇವಾ ವಿದ್ಯಾಕೇಂದ್ರದ ಕೃಷಿ ವಿಭಾಗದ ವರ್ಧನೆಗೆ ತಿಮ್ಮಯ್ಯನವರ ಶ್ರಮ ವಿಶಿಷ್ಟವಾದದ್ದು. ತಮ್ಮ ಇಳಿವಯಸ್ಸಿನಲ್ಲೂ ಚೆನ್ನೇನಹಳ್ಳಿಯಲ್ಲಿನ ಆಂಜನೇಯಸ್ವಾಮಿ ದೇವಸ್ಥಾನದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸುತ್ತಲಿನ ಗ್ರಾಮಗಳಲ್ಲಿ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಸಂತಾಪ: ಅಗಲಿದ ಜ್ಯೇಷ್ಠ ಪ್ರಚಾರಕ ಶ್ರೀ ತಿಮ್ಮಯ್ಯ ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸಹ ಸರಕಾರ್ಯವಾಹ ಮುಕುಂದ ಸಿ ಆರ್, ಕ್ಷೇತ್ರೀಯ ಸಂಘಚಾಲಕ ವಿ. ನಾಗರಾಜ, ಪ್ರಾಂತ ಸಂಘಚಾಲಕ ವಾಮನ್ ಶೆಣೈ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ‌.

ಜನಸೇವಾ ವಿದ್ಯಾಕೇಂದ್ರದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಶ್ರೀ ತಿಮ್ಮಯ್ಯ ಅವರಿಗೆ ವಿಶೇಷ ಗೌರವಾರ್ಪಣೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ಮುಕುಂದ ಸಿ ಆರ್, ಜನಸೇವಾ ವಿದ್ಯಾಕೇಂದ್ರದ ಗೌರವ ಕಾರ್ಯದರ್ಶಿ ಅ ಸಾ ನಿರ್ಮಲ ಕುಮಾರ್ ಉಪಸ್ಥಿತರಿದ್ದರು.

ಸ್ವ. ತಿಮ್ಮಯ್ಯನವರ ಸರಳ ಬದುಕು, ವೈಚಾರಿಕ ಬದ್ದತೆ, ನಿಷ್ಟೆ ಮತ್ತು ಕಾರ್ಯತತ್ಪರತೆಗಳು ಸದಾ ಸ್ಮರಣೀಯ, ಪ್ರೇರಣಾದಾಯಕ.
ಓಂ ಶಾಂತಿಃ ಶಾಂತಿಃ.

– ವಿ ನಾಗರಾಜ್, ಕ್ಷೇತ್ರೀಯ ಸಂಘಚಾಲಕರು, ರಾಷ್ಟ್ರೀಯ ಸ್ವಯಂಸೇವಕ ಸಂಘ

Leave a Reply

Your email address will not be published.

This site uses Akismet to reduce spam. Learn how your comment data is processed.