Mai Cha Jayadev ji speaks on the occassion

Mai Cha Jayadev ji speaks on the occassion

Bagalakot, Karnataka: June -20: Seva Bharati, a Rashtriya Swayamsevak Sangh initiative for social service has dedicated one more bunch of houses to North Karnataka flood victims. In a meaningful programme  on Monday the newly constructed houses has been handed over to the flood victims at Kotnalli village of Guledagudda district of North Karnataka. RSS National Executive Council Member, Senior Pracharak Sri Mai Cha Jayadev ji  formally handed over the houses during the dedication ceremony.

Speaking on the occasion Jayadev ji said, “Through various social service schemes and projects, RSS is involved in more than 1.50 lakh Seva activities across the nation. RSS works in all walks of social life, including the rehabilitation of  8 crore Tribal  community of the nation. Seva is a divine term and action. RSS is indulged in a silent social transformation by means of Seva activities in its journey of 85 years. Seva Bharati’s work and dedication should be applauded”.

“RSS has openly supported anti-corruption movements by Baba Ramdev and Anna Hazare. But few shortisighted politicians are sounding different and to draw a political gain few are opposing the participation of Sangh in these movements. Such criticism is to be condemned, RSS will support all those  issues in national interest and welfare. It is unfortunate have such Union ministers who still blame Sangh for wrong reasons ” said Mai Cha Jayadev ji.

Sri Abhinava Oppatteshwara Swamiji of Oppattheshwara Mutt, Guledagudda, Sri Adi Siddheshwara Swamiji of Jalihala, RSS Saha Pranth Pracharak Shankaranand, Vibhag Pracharak Narendra, several others were present during the occasion.

In previous house dedication programmes, RSS Sarasanghachalak Mohan ji Bhagwat, Former RSS chief K S Sudarshan ji, Chief Minister B S Yeddyurappa were participated at different flood affected villages.

ಬಾಗಲಕೋಟೆ June 20:  ಬ್ರಷ್ಟಾಚಾರ, ಕಪ್ಪು ಹಣದ ವಿರುದ್ಧ ರಾಮದೇವ ಬಾಬಾ, ಅಣ್ಣಾ ಹಜಾರೆ ಆರಂಭಿಸಿರುವ ಹೋರಾಟದಲ್ಲಿ ಆರ್.ಎಸ್.ಎಸ್ ಭಾಗವಹಿಸುವದನ್ನು ಆಕ್ಷೇಪಿಸುವ ಕೇಂದ್ರ ಸರ್ಕಾರದ ಕೆಲ ಸಚಿವರ ವರ್ತನೆಯನ್ನು ಕಟುವಾಗಿ ಟೀಕಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಷ್ಟ್ರೀಯ ಕಾರ‍್ಯಕಾರಣಿ ಸದಸ್ಯ ಮೈ.ಚ.ಜಯದೇವ ಇದು ದೇಶದ ದೌರ್ಭಾಗ್ಯ ಎಂದು ವಿಷಾದಿಸಿದ್ದಾರೆ.

ಗುಳೇದಗುಡ್ಡ ಬಳಿಯ ಕೊಟ್ನಳ್ಳಿ ಗ್ರಾಮದಲ್ಲಿ ಸಂಘ ಪರಿವಾರದ ಸೇವಾ ಭಾರತಿ ಮೂಲಕ ನಿರ್ಮಿಸಲಾಗಿರುವ ಆಸರೆ ಯೋಜನೆಯ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿ ಮೂಲಭೂತ ಸೌಕರ‍್ಯ ಯೋಜನೆಗಳನ್ನು ಉದ್ಘಾಟಿಸಿದ ನಂತರ ಮಾತನಾಡಿದ ಅವರು ಆರ್.ಎಸ್.ಎಸ್ ಈ ಹೋರಾಟವನ್ನು ಬೆಂಬಲಿಸಿದೆ, ಇದು ರಾಷ್ಟ್ರೀಯ ಹಿತಾಸಕ್ತಿಯ ಪ್ರಶ್ನೆ, ಇದನ್ನು ಕೇಂದ್ರ ಸಚಿವರು ಆಕ್ಷೇಪಿಸುವದು ಏಕೆ ಎಂದು ಪ್ರಶ್ನಿಸಿ ಹೋರಾಟಕ್ಕೆ ಆರ್.ಎಸ್.ಎಸ್ ಹಣೆಪಟ್ಟಿ ಹಚ್ಚುವ ಈ ನಾಯಕರ ಮನಸ್ಥಿತಿ ಬದಲಾಗುವದು ಸಾಧ್ಯವಿಲ್ಲ, ಇದು ದೇಶದ ದುರಂತ ಎಂದರು.

ಸಂವಿಧಾನದಲ್ಲಿ ಯಾವುದೇ ಹೋರಾಟವನ್ನು ಯಾರ ಬೆಂಬಲಿಸಬೇಕೆಂದು ಉಲ್ಲೇಖಿಸಿಲ್ಲ, ಬ್ರಷ್ಟರಿಗೆ, ಕಪ್ಪು ಹಣ ಹೊಂದಿದವರಿಗೆ ಶಿಕ್ಷೆಯಾಗಬೇಕೆಂಬುದು ಈ ದೇಶದ ಜನತೆಯ ಬಯಕೆ, ಅದಕ್ಕಾಗಿ ಆರ್.ಎಸ್.ಎಸ್ ಇಂತಹ ಹೋರಾಟವನ್ನು ಬೆಂಬಲಿಸುತ್ತದೆ, ಒಳ್ಳೆಯ ಕೆಲಸವನ್ನು ಪ್ರಶಂಸಿಸುವ ಕನಿಷ್ಠ ಕಾಳಜಿ ಇಲ್ಲದ ಕೆಲ ರಾಜಕಾರಣಿಗಳ ಪ್ರವೃತ್ತಿ ಆಕ್ಷೇಪಾರ್ಹವಾಗಿದೆ ಎಂದರು. ಕಾರ್ಗಿಲ ಕದನ ಮತ್ತಿತರ ಸಂದರ್ಭಗಳಲ್ಲಿ ಇಂತಹದೇ ಬೆಳವಣಿಗೆ ಕಂಡು ಬಂದಿದೆ ಎಂದರು.

ನೆರೆ ಸಂತ್ರಸ್ಥರಿಗೆ ಸೂರು ಒದಗಿಸಲು ಸೇವಾ ಭಾರತಿ ಸ್ವೀಕರಿಸಿದ ಸಂಕಲ್ಪವನ್ನು ಕೊಂಡಾಡಿದ ಜಯದೇವ ಸೇವೆ ಎಂಬುದು ಯಾರೊಬ್ಬರ ಸ್ವತಲ್ಲ, ಹಕ್ಕು ಅಲ್ಲ, ಇದು ಜನಾಂದೋಲನವಾಗಿ ರೂಪಗೊಳ್ಳಬೇಕೆಂದರು. ಸೇವೆ ಅತ್ಯಂತ ಶ್ರೇಷ್ಠವಾದ ಮೌಲಿಕ ಕಾರ‍್ಯವಾಗಿದೆ ಎಂದು ಅವರು ಹೇಳಿದರು. ಬದಲಾದ ವ್ಯವಸ್ಥೆಯಲ್ಲಿ ಜಾಗತೀಕ ಮಾರುಕಟ್ಟೆ ಸೃಷ್ಠಿಯಾಗಿದೆ, ವ್ಯಾಪಾರ ಭೂಮಿಯಾಗಿದೆ, ಆರ್.ಎಸ್.ಎಸ್. ಇದನ್ನು ಒಪ್ಪುವದಿಲ್ಲ, ವಸುದೈವ ಕುಟುಂಬಕಂ ಸಿದ್ಧಾಂತದಲ್ಲಿ ನಂಬಿಕೆ ಇಟ್ಟು ಸರ್ವ ಸಮುದಾಯದ ಸೇವೆಗೆ ಕಳೆದ  ೬೦ ವರ್ಷಗಳಿಂದ ದುಡಿಯುತ್ತಿದೆ, 8 ಕೋಟಿ ವನವಾಸಿ ಸಮುದಾಯದ ಪುನರ್ವಸತಿಯಲ್ಲಿ ತೊಡಗಿದೆ, ದೇಶದ ಸುಮಾರು ೧.೩೦ ಲಕ್ಷ ಸೇವಾ ಕ್ಷೇತ್ರದಲ್ಲಿ ಆರ್.ಎಸ್.ಎಸ್ ದುಡಿಯುತ್ತಿದೆ, ಇದು ರಾಷ್ಟ್ರದ ಹಿತಾಸಕ್ತಿ, ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಅವರು ಹೇಳಿದರು. ನೆರೆ ಅನಾಹುತದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಉತ್ತಮ ಕೆಲಸ ಮಾಡಿದೆ, ಅದಕ್ಕೆ ಸಹಕರಿಸಿ ಸೇವಾ ಭಾರತಿ ಸಂತ್ರಸ್ಥರ ನೆರವಿಗೆ ಬಂದಿದೆ ಎಂದರು.

ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಣ್ಣ ನೀರಾವರಿ ಇಲಾಖೆ ಸಚಿವ ಗೋವಿಂದ ಕಾರಜೋಳ ಅವರು ಮಾತನಾಡಿ ರಾಷ್ಟ್ರ ರಾಜಕಾರಣ ಕಲುಷಿತವಾಗಿದೆ, ಇದನ್ನು ಸುಧಾರಿಸಬಲ್ಲ ಮಹಾತ್ಮಾಗಾಂಧಿ, ಶಾಸ್ತ್ರೀ ಅವರು ಇಲ್ಲ, ವಾಜಪೇಯಿ ಅವರಂತಹ ಸರ್ಕಾರವೂ ಇಲ್ಲ, ಈ ಸಂದರ್ಭದಲ್ಲಿ ರಾಜಕೀಯವನ್ನು ಸ್ವಚ್ಛಗೊಳಿಸಿ ರಾಷ್ಟ್ರೀಯ ಸೇವೆಗೆ ಅಣಿಗೊಳಿಸಲು ಆರ್.ಎಸ್.ಎಸ್ ಮಾತ್ರ ಸಮರ್ಥವಾಗಿದೆ, ಅದಕ್ಕಾಗಿ ಸಂಘ ಮುಂಚೂಣಿಯಲ್ಲಿ ಬಂದು ಮಾರ್ಗದರ್ಶನ ಮಾಡಬೇಕೆಂದು ಕೋರಿದರು. ದಲಿತರು, ಹಿಂದುಳಿದವರು, ಸರ್ವಸಮುದಾಯದ ಕಲ್ಯಾಣವನ್ನು ಬಯಸುವ ಆರ್.ಎಸ್.ಎಸ್ ಬಗ್ಗೆ ಏನು ತಿಳಿಯದವರು ಮಾತ್ರ ಟೀಕೆ ಮಾಡುತ್ತಾರೆ, ಅವರು ಒಳ ಹೊಕ್ಕು ನೋಡಬೇಕೆಂದು ಟೀಕಾಕಾರರಿಗೆ ಕಿವಿ ಮಾತು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಅವರು ಆರ್.ಎಸ್.ಎಸ್ ಸಮಾಜ ಸೇವೆಗೆ ತೊಡಗಿಸಿಕೊಂಡ ಅಸಹಾಯಕರ ನೆರವಿಗೆ ಧಾವಿಸಬಲ್ಲ ರಾಷ್ಟ್ರೀಯ ಶಕ್ತಿ ಎಂದು ಬಣ್ಣಿಸಿದರು.

ಗುಳೇದಗುಡ್ಡ ಒಪ್ಪತ್ತೇಶ್ವರ ಮಠದ ಶ್ರೀ ಅಭಿನವ ಒಪ್ಪತ್ತೇಶ್ವರ ಮಹಾಸ್ವಾಮಿಗಳು, ಬಿ.ಎನ್.ಜಾಲಿಹಾಳ ಗ್ರಾಮದ ಶ್ರೀ ಆದಿ ಸಿದ್ದೇಶ್ವರ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದು ಜಿ.ಪಂ ಸದಸ್ಯೆ ಮಂಜುಳಾ ರಾಠೋಡ, ತಾ.ಪಂ ಅಧ್ಯಕ್ಷೆ ಸುಶೀಲಾಬಾಯಿ ಹೆಬ್ಬಳ್ಳಿ, ಲಾಯದಗುಂದಿ ಗ್ರಾ.ಪಂ ಅಧ್ಯಕ್ಷ ಬಾಲಚಂದ್ರ ಅಂಬಿಗೇರ, ತಾ.ಪಂ ಸದಸ್ಯ ಹಣಮಂತ ಪತ್ತಾರ, ಸೇವಾ ಭಾರತಿ ಮುಖ್ಯಸ್ಥ ಘನಶ್ಯಾಂ ರಾಠಿ, ಜಿ.ಪಂ ಉಪಾಧ್ಯಕ್ಷ ಹೂವಪ್ಪ ರಾಠೋಡ, ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ, ಜಿ.ಪಂ ಮುಖ್ಯಕಾರ‍್ಯನಿರ್ವಾಹಕ ಅಧಿಕಾರಿ ಡಾ.ಜೆ.ಸಿ.ಪ್ರಕಾಶ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೇವಾ ಭಾರತಿ ಅಧ್ಯಕ್ಷ ವೆಂಕಟೇಶ ಸಾಗರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗಣ್ಣ ಹುನಗುಂದ ವಂದಿಸಿದರು.

ಆರ್.ಎಸ್.ಎಸ್. ಪ್ರಾಂತ ಸಹ ಪ್ರಚಾರಕ ಶಂಕರಾನಂದ, ವಿಭಾಗ ಪ್ರಚಾರಕ ನರೇಂದ್ರ, ಜಿಲ್ಲಾ ಪ್ರಚಾರಕ ವಸಂತ, ಉಪವಿಭಾಗಾಧಿಕಾರಿ ಗೋವಿಂದರೆಡ್ಡಿ, ತಹಶೀಲ್ದಾರ ಮಹೇಶ ಕರ್ಜಗಿ, ಮಾಜಿ ಶಾಸಕರಾದ ಪಿ.ಎಚ್.ಪೂಜಾರ, ರಾಜಶೇಖರ ಶೀಲವಂತ, ರಾಮಬಿಲಾಸ ಧೂತ, ಕಮಲಕಿಶೋರ ಮಾಲಪಾಣಿ, ಡೀಕಣ್ಣ ಕಂಠಿ, ರಂಗಪ್ಪ ಶೇಬನಕಟ್ಟಿ, ಮಲ್ಲಪ್ಪ ಚೆನ್ನಿ, ಪುರುಷೋತ್ತಮ ಪಸಾರಿ, ಭಾಗ್ಯಾ ಉದ್ನೂರ, ವಿಠ್ಠಲ ಪತ್ತಾರ, ಈರಣ್ಣ ಕಂಠಿ, ಮತ್ತಿತರರು ಉಪಸ್ಥಿತರಿದ್ದರು.

ಸಪ್ಟೆಂಬರ ಅಂತ್ಯಕ್ಕೆ 13331 ಮನೆಗಳ ನಿರ್ಮಾಣ

ಜೂನ್ ತಿಂಗಳ ಅಂತ್ಯಕ್ಕೆ ನೆರೆ ಪೀಡಿತ ಆರು ಗ್ರಾಮಗಳಲ್ಲಿನ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿ ಸಪ್ಟೆಂಬರ ಅಂತ್ಯಕ್ಕೆ 13331 ಮನೆಗಳ ನಿರ್ಮಾಣ ಕಾರ‍್ಯ ಪೂರ್ತಿಗೊಳ್ಳಲಿದ್ದು ಸರ್ಕಾರ ಈ ವರೆಗೆ ಇದಕ್ಕಾಗಿ ೨೬೦ ಕೋಟಿ ರೂ.ಗಳನ್ನು ವಿನಿಯೋಗಿಸಿದೆ ಎಂದು ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಇಂದು ಪ್ರಕಟಿಸಿದರು.

ಕೊಟ್ನಳ್ಳಿ ಗ್ರಾಮದಲ್ಲಿ ನೆರೆ ಸಂತ್ರಸ್ಥರಿಗೆ ಸೇವಾ ಭಾರತಿ ನಿರ್ಮಿಸಿದ 72 ಮನೆಗಳನ್ನು ಫಲಾನುಭವಿಗಳಿಗೆ ವಿತರಿಸುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಯೋಜನೆಗೆ ಮೂಲಭೂತ ಸೌಕರ‍್ಯ ಒದಗಿಸಲು ಆಧ್ಯತೆ ನೀಡಲಾಗಿದೆ, ಇದಕ್ಕಾಗಿ ಇನ್ನೂ 40 ಕೋಟಿ ರೂ.ಗಳ ಅಗತ್ಯವಿದ್ದು ಅದನ್ನು ಒದಗಿಸಲಾಗುತ್ತದೆ, 60 ಗ್ರಾಮಗಳ ಪುನರ್ವಸತಿ ಒಟ್ಟು ಕಾರ‍್ಯಕ್ರಮ ಸಪ್ಟೆಂಬರ ಅಂತ್ಯದ ವರೆಗೆ ಪೂರ್ತಿಗೊಳ್ಳಲಿದೆ ಎಂದು ಅವರು ಹೇಳಿದರು.

ನೆರೆ ಪರಿಹಾರಕ್ಕೆ ಸರ್ಕಾರ ಕೈಗೊಂಡ ಕ್ರಮ, ದಾನಿಗಳು ನೀಡಿದ ನೆರವನ್ನು ಪ್ರಸ್ತಾಪಿಸಿ ಮಾತನಾಡಿದ ಅವರು ಇದೊಂದು ದೊಡ್ಡ ಸಾಧನೆ ಈ ಸರ್ಕಾರದಿಂದಾಗಿದೆ, ನೆರೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಾಗಿದೆ ಎಂದರು. ಕಳೆದ ೬೦ ವರ್ಷಗಳಿಂದ ರಾಜ್ಯವನ್ನಾಳಿದವರು ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಸಾಧ್ಯವಾಗಿಲ್ಲ, ಬಿಜೆಪಿ ಸರ್ಕಾರ ಮಾತ್ರ ಅದನ್ನು ಪೂರೈಸಿದೆ, ಇದನ್ನು ಒಪ್ಪಿಕೊಳ್ಳಲು ಸಾಧ್ಯವಾಗದ ವಿರೋಧ ಪಕ್ಷಗಳು ಅಸಹಾಯಕವಾಗಿ ಟೀಕಿಸುತ್ತಿವೆ ಎಂದು ವ್ಯಂಗ್ಯವಾಡಿದರು.

ಅತ್ಯಂತ ಸುರಕ್ಷಿತ, ಗುಣಮಟ್ಟದ ಮನೆಗಳನ್ನು ನಿರ್ಮಿಸಲಾಗಿದೆ, ಫಲಾನುಭವಿಗಳು ಕೂಡಲೇ ಸ್ಥಳಾಂತರಗೊಂಡು ಅದರ ಅಂದಗೆಡದಂತೆ ಕಾಪಾಡಿಕೊಳ್ಳಬೇಕೆಂದು ಕಿವಿ ಮಾತು ಹೇಳಿದ ಕಾರಜೋಳ ಗ್ರಾಮಕ್ಕೆ ಅಂಗನವಾಡಿ ಕಟ್ಟಡವನ್ನು ಒದಗಿಸಲಾಗುವದು, ಇದಕ್ಕೆ ಪೂರಕವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ೧೦ ಲಕ್ಷ ರೂ.ಗಳನ್ನು ಕೂಡಲೇ ಬಿಡುಗಡೆ ಮಾಡಲಾಗುತ್ತಿದ್ದು ಅದರಿಂದ ಸಾಂಸ್ಕೃತಿಕ ಭವನವನ್ನು ನಿರ್ಮಿಸುವಂತೆ ಅವರು ಗ್ರಾಮಸ್ಥರ ಬೇಡಿಕೆಗೆ ಮಂಜೂರಾತಿ ನೀಡಿ ಪ್ರಕಟಿಸಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಅವರು ನೆರೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಲಾಗುತ್ತಿದೆ ಎಂದರು. ಗುಳೇದಗುಡ್ಡದ ಶ್ರೀ ಅಭಿನವ ಒಪ್ಪತ್ತೇಶ್ವರ ಮಹಾಸ್ವಾಮಿಗಳು, ಬಿ.ಎನ್ ಜಾಲಿಹಾಳದ ಶ್ರೀ ಆದಿಸಿದ್ದೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು, ಆರ್.ಎಸ್.ಎಸ್ ರಾಷ್ಟ್ರೀಯ ಕಾರ‍್ಯಕಾರಿಣಿ ಸದಸ್ಯ ಮೈ.ಚ.ಜಯದೇವ ಮಾತನಾಡಿದರು. ಮಕ್ಕಳ ನಾಡಗೀತೆ, ದೇಶಭಕ್ತಿ ಗೀತೆ ಗಮನಸೆಳೆಯಿತು.

ಅತ್ಯಂತ ಹೃದಯಸ್ಪರ್ಶಿ ಸಮಾರಂಭದಲ್ಲಿ ೭೨ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು, ಮನೆ ಬೀಗದ ಕೈ ಜೊತೆಗೆ ಭಾರತಮಾತೆಯ ಭಾವಚಿತ್ರ, ತುಳಸಿ ಸಸಿ ನೀಡಲಾಯಿತು. ಕುಡಿಯುವ ನೀರು, ವಿದ್ಯುತ್ ಸಂಪರ್ಕದ ಯೋಜನೆಗೆ ಚಾಲನೆ ನೀಡಲಾಯಿತು. ಗಣ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.

 

 

1 thought on “Seva Bharati dedicates more houses to flood victims, this time at Guledagudda

  1. TIme for a 10 minute consolidated video on all the houses built by Seva Bharati for flood victims.

Leave a Reply

Your email address will not be published.

This site uses Akismet to reduce spam. Learn how your comment data is processed.