ಕಾಸರಗೋಡು November 13: ರಾಷ್ಟೀಯ ಸ್ವಯಂಸೇವಕ ಸಂಘದ ಸೇವಾ ಘಟಕವಾದ ಸೇವಾ ಭಾರತಿ ಕಾಸರಗೋಡು ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಕಾಸರಗೋಡು ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಬಿಸಿಯೂಟ ಯೋಜನೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ . ಸೇವಾ ಭಾರತಿಯ ಈ ಮಹತ್ಕಾರ್ಯದಲ್ಲಿ ಕೈಜೋಡಿಸಲು ಕೆಲವು ದಾನಿಗಳು ಮುಂದಾಗಿದ್ದಾರೆ .ಇತ್ತಿಚಿಗೆ ನವರಾತ್ರಿ ಹಬ್ಬದಂದು ಆರಂಭಿಸಲಾದ ಈ ಯೋಜನೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಾಗುವ ಬಡರೋಗಿಗಳಿಗೆ ವರದಾನವಾಗಿದೆ . ದಿನಂಪ್ರತಿ ಕನಿಷ್ಠ 250 ಮಂದಿಗೆ  ಬಿಸಿಯೂಟ ವಿತರಿಸಲಾಗುತ್ತಿದೆ . ಗಂಜಿ , ಚಟ್ನಿ . ಉಪ್ಪಿನಕಾಯಿ ಒಳಗೊಂಡ  ಬಿಸಿಯೂಟ ವಿತರಣೆ ಯಶಸ್ವಿಯಾಗಿ ನಡೆಯುತ್ತಿದೆ.

ಈ ಯೋಜನೆಯ ಯಶಸ್ವಿಗಾಗಿ  ಸೇವಾ ಭಾರತಿಯ ಅಧ್ಯಕ್ಷರೂ , ಟೌನ್ ಬ್ಯಾಂಕಿನ ಜನರಲ್ ಮೆನೇಜೆರ್ ಆಗಿರುವ ಮಹಾಬಲ ರೈ(ಅಧ್ಯಕ್ಷ), ತಾಲೂಕ ಸಹಸೇವಾ  ಪ್ರಮುಖ್ ಉಮೇಶ್(ಕಾರ್ಯದರ್ಶಿ), ಏನ್.ಎಮ್.ಜಿ ಬ್ಯಾಂಕ್ ಮೊಗ್ರಾಲ್ ಪುತ್ತೂರು ಶಾಖೆಯ ಸಿಬ್ಬಂದಿ ಸುರೇಶ ನಾಯಕ್ ಕೂಡ್ಲು(ಕೋಶಾಧಿಕಾರಿ), ಗಂಗಾಧರ ಚೌಕಿ(ಜೊತೆ ಕಾರ್ಯದರ್ಶಿ ),  ಟೌನ್ ಬ್ಯಾಂಕಿನ ನೌಕರ  ಜಯಂತ, ರಾಜೇಶ್ ಚೌಕಿ, ಶಶಿ , ಕೃಷ್ಣ ಬೋವಿಕ್ಕಾನ( ಸದ್ಯಸರು) ಎಂಬಿವರು ಒಳಗೊಂಡ ಸಮಿತಿ ರಚಿಸಲಾಗಿದೆ. ಸೇವಾ ಭಾರತಿಯ ಈ ಮಹತ್ಕಾರ್ಯಕ್ಕೆ ಮಂಗಳೂರಿನಲ್ಲಿ ಚಿನ್ನದ ವ್ಯಪಾರಿಯಾಗಿರುವ ಶಾಂತಾರಾಮ ಕಾಮತ್ ಎಂಬವರು ಅಭಿನಂದನೆ ಸಲ್ಲಿಸಿದ್ದಾರೆ. ಇತ್ತಿಚಿಗೆ ಅವರು ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ವಿತರಿಸಲು ಸಿಹಿತಿಂಡಿ ನೀಡಿದ್ದಾರೆ. ಅದೇ ರೀತಿ ನವರಾತ್ರಿ ಪ್ರಯುಕ್ತ ಕೊರೋಕ್ಕೋಡು ಆರ್ಯ ಕಾತ್ಯಾಯಿನಿ ಶ್ರೀ ಮಹಾದೇವ ಕ್ಷೇತ್ರದ ಆಡಳಿತ ಮುಕ್ತೇಸರ ಬಿ. ಪುರುಷೋತ್ತಮ ರಾವ್  ಧರೆಕರ್ ಪಾಯಸ  ವಿತರಿಸಿದ್ದಾರೆ.

Leave a Reply

Your email address will not be published.

This site uses Akismet to reduce spam. Learn how your comment data is processed.