ಸೆಪ್ಟೆಂಬರ್ 18, 2017, ಹುಬ್ಬಳ್ಳಿ: ರಾಷ್ಟ್ರೀಯ ಸೇವಾ ಭಾರತಿ ಒಂದು ಅಖಿಲ ಭಾರತೀಯ ಸೇವಾ ಸಂಸ್ಥೆ. ಅದರ ಮುಖ್ಯ ಉದ್ದೇಶ ಸಮಾನ ಮನಸ್ಕ ಸ್ವಯಂಸೇವಾ ಸಂಸ್ಥೆಗಳನ್ನು ಒಂದೇ ಛತ್ರದಡಿ ತರುವುದು. ಐದು ವರ್ಷಕ್ಕೊಮ್ಮೆ ‘ಸೇವಾ ಸಂಗಮ’ವನ್ನು ನಡೆಸಿಕೊಂಡು ಬರಲಾಗಿದೆ. 2017ನೇ ಸಾಲಿನ ‘ಸೇವಾ ಸಂಗಮ’ ಕಾರ್ಯಕ್ರಮ ಡಿಸೆಂಬರ್ 1, 2,3 ರಂದು ಹುಬ್ಬಳ್ಳಿಯಲ್ಲಿ ನಡೆಯಲಿದೆ. ಈ ವಿಷಯವನ್ನು ಶ್ರೀ ಶ್ರೀಧರ ಸಾಗರ, ರಾಷ್ಟ್ರೀಯ ಸೇವಾ ಭಾರತಿಯ ಅಖಿಲ ಭಾರತೀಯ ಪ್ರಶಿಕ್ಷಣ ಪ್ರಮುಖರು ಹಾಗೂ ದಕ್ಷಿಣ ಭಾರತದ ಸಂಯೋಜಕರು ತಿಳಿಸಿದ್ದಾರೆ.

 

ಸಸಿ ನೆಡುವುದು, ಗೋ ಸಂವರ್ಧನೆ, ಮನೆಮದ್ದು, ಕೃಷಿ, ಸ್ವಚ್ಛತ, ಆರೋಗ್ಯ ತಪಾಸಣೆ, ರಕ್ತದಾನ, ವ್ಯಕ್ತಿತ್ವ ವಿಕಸನ, ಪರಿವಾರ ಮಿಲನ, ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ, ಉಚಿತ ಮನೆಪಾಠ, ಭಜನಾ ಕೇಂದ್ರಗಳು, ಸಂಸ್ಕಾರ ಕೇಂದ್ರಗಳು,ಬಾಲಕಲ್ಯಾಣ ಕೇಂದ್ರಗಳು, ದಿವ್ಯಾಂಗ ಮಕ್ಕಳ ಶಾಲೆ, ಸಂಚಾರಿ ಚಿಕಿತ್ಸಾಲಯ, ಮಹಿಳೆಯರಿಗೆ ಹೋಳಿಗೆ ತರಬೇತಿ ಕೇಂದ್ರಗಳು, ರಕ್ತನಿಧಿ, ಯೋಗಕೇಂದ್ರಗಳು ಸೇರಿದಂತೆ ಇನ್ನಿತರ ಸ್ವಯಂಸೇವಾ ಸಂಸ್ಥೆಗಳನ್ನು ಒಂದೆಡೆ ತರುವ ಮಹಾಸಂಗಮವೇ ‘ಸೇವಾ ಸಂಗಮ.’

ಈ ವಿಷಯವಾಗಿ ಇಂದು ಹುಬ್ಬಳ್ಳಿಯಲ್ಲಿ ಪತ್ರಿಕಾ ಘೋಷ್ಠಿ ನಡೆಸಿ ಕಾರ್ಯಕ್ರಮದ ವಿವರಗಳನ್ನು ಹಂಚಿಕೊಳ್ಳಲಾಯಿತು. ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದವರು:

1. ಡಾ|| ರಘು ಅಕಮಂಚಿ
ಸೇವಾ ಸಂಗಂಮ 2017ರ ಸ್ವಾಗತ ಸಮಿತಿಯ ಸದಸ್ಯರು.

2.ಶ್ರೀ. ವೈ.ಸತೀಶ
ಸೇವಾ ಸಂಗಮ 2017ರ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರು.

3. ಶ್ರೀ ಶ್ರೀಧರ ಸಾಗರ
ರಾಷ್ಟ್ರೀಯ ಸೇವಾ ಭಾರತೀಯ ಅಖಿಲ ಭಾರತೀಯ ಪ್ರಶಿಕ್ಷಣ ಪ್ರಮುಖರು & ದಕ್ಷಿಣ ಭಾರತದ ಸಂಯೋಜಕರು.

4. ಶ್ರೀ ಗೋವಿಂದಪ್ಪ ಗೌಡಪ್ಪಗೊಳ
ಸೇವಾ ಸಂಗಮ 2017ರ ಸ್ವಾಗತ ಸಮಿತಿಯ ಕಾರ್ಯದರ್ಶಿಗಳು.

 

Leave a Reply

Your email address will not be published.

This site uses Akismet to reduce spam. Learn how your comment data is processed.