Houses constructed by Seva Bharati at Inamboodihal of Hunagunda taluk at North Karnataka

ನೆರೆ ಸಂತ್ರಸ್ತರಿಗೆ 92 ಸೇವಾಭಾರತಿ ನಿರ್ಮಿಸಿದ ಮನೆಗಳ ಹಸ್ತಾಂತರ

Houses constructed by Seva Bharati at Inamboodihal of Hunagunda taluk at North Karnataka

ಇನಾಂಬೂದಿಹಾಳ: ಯುವ ಜನತೆಯಲ್ಲಿ ದೇಶ ಪ್ರೇಮ,ಪ್ರಾಮಾಣಿಕತೆ ಮರೆಯಾಗುತ್ತಿದೆ. ಇಂದಿನ ಯುವ ಪೀಳಿಗೆ ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯಕ್ಷೇತ್ರದ ಪ್ರಮುಖ ಡಾ.ಪ್ರಭಾಕರ ಭಟ್ ಎಂದು ಸಲಹೆ ಮಾಡಿದರು. ಸೇವಾಭಾರತಿ ಕರ್ನಾಟಕ ಸಂತ್ರಸ್ತರಿಗಾಗಿ ನಿರ್ಮಿಸಿದ ಮನೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತವು ಜಗತ್ತನ್ನೆ ಗೆದ್ದಿದೆ. ರೈಫಲ್, ಯುದ್ದಗಳಿಂದಲ್ಲ, ಕಷ್ಟದಲ್ಲಿರುವ ಜನರ ನೋವಿಗೆ ಸ್ಪಂದಿಸುವದು. ಬಡವರ ಬಾಳಿಗೆ ಬೆಳಕಾಗುವಂತಹ ಸೇವೆ ಮಾಡುವ ಮೂಲಕ ಭಾರತವು ಜಗತ್ತನ್ನು ಗೆದ್ದಿದೆ ಎಂದರು.

ತ್ಯಾಗ, ಪರಿಶ್ರಮ, ಸೇವಾ ಮನೋಭಾವನೆಯಿಂದ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದೇವೆ. ಆದರೆ ಇಂದು ಪ್ರಾಮಾಣಿಕತೆ, ಸೇವಾ ಮನೋಭಾವನೆ, ಸಮರ್ಪಣೆಯಂತಹ ಗುಣಗಳು ಯುವಜನತೆಯಲ್ಲಿ ದೂರವಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು. ರಾಷ್ಟ್ರ ಕಟ್ಟುವಂತಹ ಕೆಲಸ ತುರ್ತಾಗಿ ನಡೆಯಬೇಕಾಗಿದೆ. ಪ್ರತಿಯೊಬ್ಬ ವ್ಯಕ್ತಿಯನ್ನು ಉತ್ತಮ,ಸಜ್ಜನಿಕೆ ಗುಣಗಳನ್ನು ಹೊಂದಿದ ವ್ಯಕ್ತಿಯನ್ನಾಗಿ ಮಾಡಬೇಕಾದ ಅಗತ್ಯತೆ ಇದೆ. ರಾಷ್ಟ್ರೀಯ ಸ್ವಯಂ ಸೇವಾ ಸಂಘದಿಂದ ಕಳೆದ ೮೦ ವರ್ಷಗಳಿಂದ ರಾಷ್ಟ್ರ ಕಟ್ಟುವಂತಹ ಕೆಲಸವಾಗುತ್ತಿದೆ. ಧರ್ಮ, ಸಂಸ್ಕೃತಿ, ಜೀವನ ಮಲ್ಯ ಉಳಿಸುವಂತಹ ಪವಿತ್ರ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು. ಸಂತ್ರಸ್ತರಿಗೆ ನೆರವು ನೀಡುತ್ತಿದ್ದೇವೆ ಎಂದು ಭಾವಿಸದೇ, ಭಗವಂತ ಸೇವೆ ಮಾಡಲು ಒಂದು ಅವಕಾಶ ನೀಡಿದ್ದಾನೆಂದು ತಿಳಿದು ಸಂತ್ರಸ್ತರ ಕಷ್ಟಗಳಿಗೆ ಸ್ಪಂದಿಸಬೇಕು. ಸಮನ್ವಯ, ಸಾಮರಸ್ಯ ಜೀವನವನ್ನು ನಡೆಸುತ್ತಾ ಮನೆಗಳನ್ನು ಚನ್ನಾಗಿ ಉಪಯೋಗಿಸಿ ದೇಶ ಸೇವೆ ಪ್ರೇರಣೆ ನೀಡುವಂತಹ ಮನೆಗಳಾಗಿ ರೂಪುಗೊಂಡಾಗ ಮಾತ್ರ ಮನೆಗಳನ್ನು ಕಟ್ಟಲು ಸಹಕಾರ ನೀಡಿದ ದಾನಿಗಳ ಜೀವನಕ್ಕೆ ಸಾರ್ಥಕತೆ ಬರುತ್ತದೆ ಎಂದರು.

ನೆರೆ ಸಂತ್ರಸ್ತರ ಮನೆ ಹಂಚಿಕೆ ಕುರಿತು ಸುಳ್ಳು ಆರೋಪ ಮಾಡುವ ವಿರೋಧ ಪಕ್ಷ ಮುಖಂಡರು, ಖುದ್ದಾಗಿ ನೆರೆ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ನಿಜವನ್ನು ತಿಳಿದುಕೊಳ್ಳಬೇಕು. ನೆರೆ ಸಂತ್ರಸ್ತರ ಹೆಸರಿನಲ್ಲಿ ರಾಜಕೀಯ ಮಾಡುವದು ಪಾಪದ ಕೆಲಸ ಎಂದು ಸಣ್ಣ ನೀರಾವರಿ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.

ಹುನಗುಂದ ತಾಲೂಕಿನ ಇನಾಂಬೂದಿಹಾಳದಲ್ಲಿ ಸೇವಾ ಭಾರತಿ ಕರ್ನಾಟಕ ಸಂಸ್ಥೆ ನಿರ್ಮಿಸಿದ ನೆರೆ ಸಂತ್ರಸ್ತರಿಗೆ ಮನೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಕುಡಿಯುವ ನೀರು ಮತ್ತು ಇತರೆ ಮೂಲಭೂತ ಸೌಕರ್ಯಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕಳೆದ 60 ವರ್ಷಗಳಿಂದ ಅದೆಷ್ಟೋ ನೆರ ಹಾವಳಿಯಾದರೂ ಅದಕ್ಕೆ ಶಾಸ್ವತವಾದ ಪರಿಹಾರವನ್ನು ಕಲ್ಪಸದೇ ಕಾಲಹರಣ ಮಾಡಿದ್ದರು ಎಂದು ಟೀಕಿಸಿದರು. ನೆರೆ ಸಂತ್ರಸ್ತರಿಗೆ ಮನೆಗಳು ಹಂಚಿಕೆಯಾಗಿಲ್ಲವೆಂದು ನಗರದಲ್ಲಿ ಕುಳಿತು ಮಾಧ್ಯಮಗಳ ಮುಂದೆ ಮಾತನಾಡುವುದನ್ನು ಬಿಟ್ಟು ಖುದ್ದಾಗಿ ನೆರೆಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅರಿತು ಸತ್ಯವನ್ನು ಮಾತನಾಡಬೇಕು ಎಂದು ವಿರೋಧ ಪಕ್ಷಗಳ ವಿರುದ್ದ ಹರಿಹಾಯ್ದ ಅವರು, ಸಂತ್ರಸ್ತರಿಗೆ ಮನೆ ಹೋಗಲಿ ಒಂದು ಜಗವನ್ನು ನೀಡಿದ ಈ ಹಿಂದಿನ ಸರ್ಕಾರಗಳು ನಮ್ಮ ಆಡಳಿತದ ವಿರುದ್ದ ಮಾತನಾಡುವಂತಹ ನೈತಿಕ ಹಕ್ಕು ಇಲ್ಲ, ಸಂತ್ರಸ್ತರ ವಿಷಯದಲ್ಲಿ ರಾಜಕೀಯ ಮಾಡುವದು ಪಾಪದಕೆಲಸವೆಂದು ಹೇಳಿದರು.

2 ಸಾವಿರ ಕೋಟಿ ಖರ್ಚು: ನೆರೆ ಸಂತ್ರಸ್ತರಿಗೆ ಪುನರ್ ವಸತಿ  ಕಲ್ಪಸಲು 2 ಸಾವಿರ ಕೋಟಿ ರೂಗಳನ್ನು ಖರ್ಚು ಮಾಡಿದೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು. ನೆರ ಹಾವಳಿಯಿಂದ ತೊಂದರೆಗೊಳಗಾದ ರಾಜ್ಯದ ಸುಮಾರು 342 ಗ್ರಾಮಗಳನ್ನು ಸಂಪೂರ್ಣ ಸ್ಥಳಾಂತರ ಮಾಡಲು ಕ್ರಮಕೈಗೊಳ್ಳಲಾಗಿದೆ. ೬೫ ಸಾವಿರ ಮನೆಗಳನ್ನು ನಿರ್ಮಿಸಲು ಚಾಲನೆ ನೀಡಲಾಗಿದೆ. ಇದಕ್ಕಾಗಿ 2 ಸಾವಿರ ಕೋಟಿ ರೂಗಳನ್ನು ಖರ್ಚು ಮಾಡಲಾಗಿದೆ ಎಂದ ಅವರು, ಜಿಲ್ಲೆಯಲ್ಲಿ 60 ಗ್ರಾಮಗಳಿಗೆ ನೆರಯ ತೊಂದರೆಯಾಗಿತ್ತು,ಅದರಂತೆ ೬೦ ಗ್ರಾಮಗಳ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಸಲು 10100 ಎಕರೆ ಜಮೀನು ಖರೀದಿ ಮಾಡಲಾಗಿದೆ. 305 ಕೋಟಿ ರೂಗಳನ್ನು ಖರ್ಚು ಮಾಡಲಾಗಿದೆ. ಸಂತ್ರಸ್ತರಿಗೆ ಸಸಿ ನೀಡುವ ಮೂಲಕ ಮನೆಗಳನ್ನು ಹಸ್ತಾಂತರ ಮಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯಕ್ಷೇತ್ರದ ಪ್ರಮುಖ ಡಾ.ಪ್ರಭಾಕರ ಭಟ್ ಮಾತನಾಡಿ, ಸೇವಾ ಮನೋಭಾವನೆ, ಪ್ರಮಾಣಿಕತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಯುವ ಸಮುದಾಯಕ್ಕೆ ಸಲಹೆ ಮಾಡಿದರು.

ಶಾಸಕ ವೀರಣ್ಣ ಚರಂತಿಮಠ ಮಾತನಾಡಿ ಸರ್ಕಾರದ ಎಲ್ಲಾ ಯೋಜನೆಗಳನ್ನು ಗ್ರಾಮೀಣ ಭಾಗಗಕ್ಕೆ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು ಎಂದರು. ವಿಧಾನಪರಿಷತ್ ಸದಸ್ಯ ಜಿ.ಎಸ್.ನ್ಯಾಮಗೌಡ,ಜಿಪಂ ಅಧ್ಯಕ್ಷೆ ಕವಿತಾ ದಡ್ಡೆನ್ನವರ, ಉಪಾಧ್ಯಕ್ಷ ಹೂವಪ್ಪ ರಾಠೋಡ, ಸದಸ್ಯ ಈರಣ್ಣ ಬಂಡಿ, ತಾಪಂ ಸದಸ್ಯ ಎಚ್.ಡಿ.ವೈದ್ಯ,ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ, ಜಿಪಂ ಸಿಇಒ ಡಾ.ಜೆ.ಸಿ.ಪ್ರಕಾಶ್,ಬೆಂಗಳೂರ ಎಪಿಎಂಸಿ ವರ್ತಕರ ಸಂಘದ ಶಂಕ್ರಪ್ಪ, ನ್ಯಾಷನಲ್ ಕೋ ಆಫ್-ಕ್ರಡಿಟ್ ಬ್ಯಾಂಕಿನ ಎಚ್.ಆರ್.ಸುರೇಶ, ಶಣ್ಮುಗಂ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.