ಒಮ್ಮೆ ಶಿವಾಜಿ ಮಹಾರಾಜರು ಸಾತಾರಾ ಕೋಟೆಯಲ್ಲಿರುವಾಗ, ತಮ್ಮ ಗುರುಗಳಾದ ರಾಮದಾಸರನ್ನು ನೋಡುತ್ತಾರೆ. ಅಲ್ಲಿ ರಾಮದಾಸರು ಭಿಕ್ಷೆಯನ್ನು ಬೇಡುವುದನ್ನು ಕಂಡ ಶಿವಾಜಿ ಮಹಾರಾಜರು ತಮ್ಮ ಗುರುವಿಗೆ ರಾಜ ಮುದ್ರಿತ ಪತ್ರವನ್ನು ಬರೆಯುತ್ತಾರೆ. ಆ ಪತ್ರದ ಪ್ರಮುಖ ಸಾಲು ಗಳು ಹೀಗಿವೆ ” ಗುರುದೇವ ನನ್ನ ಬಳಿ ಇರುವುದೆಲ್ಲವೂ ನಿಮ್ಮದೇ, ನನ್ನನ್ನೂ ಒಳಗೊಂಡಂತೆ ನನ್ನ ಸರ್ವಸ್ವವೂ ನಿಮಗೆ ಧಾರೆಯೆರೆಯುತ್ತೆನೆ. ಇನ್ನೂ ಮುಂದೆ ನೀವು ಭಿಕ್ಷೆಯನ್ನು ಬೇಡಬಾರದು.” ಎಂದು ಅದರಲ್ಲಿ ಬರೆದಿದ್ದರು ಶಿವಾಜಿ ಮಹಾರಾಜರು.
ಆ ಪತ್ರವನ್ನು ಓದಿದ ರಾಮದಾಸರು ಶಿವಾಜಿಯ ಬಳಿ ಬಂದು ” ಶಿವಾಜಿ ನೀನು ನನಗೆ ಎಲ್ಲವನ್ನೂ ಕೊಟ್ಟಿದ್ದೀಯ”! ಶಿವಾಜಿ ಮಹಾರಾಜರು: “ಹೌದು”, ರಾಮದಾಸರು:” ಈಗ ನಿನ್ನ ಬಳಿ ಏನು ಇಲ್ಲವಲ್ಲ”! ಹಾಗಾದರೆ ನೀನೂ ನನ್ನ ಜೊತೆಗೆ ಬಾ, ಇಬ್ಬರೂ ಕೂಡಿ ಭಿಕ್ಷೆ ಬೇಡೋಣ”. ಶಿವಾಜಿ ಮಹಾರಾಜರು ಏನು ಮಾತಾನಾಡದೇ ಅವರ ಹಿಂದೆ ಹೊರಟು ಹೋದರು.
ಇದನ್ನು ಸೂಕ್ಷ್ಮವಾಗಿ ಗಮನಿಸಿದ ಗುರುದೇವ ರಾಮದಾಸರು ಮನಸಿನಲ್ಲಿ “ಒಬ್ಬ ಮಹಾರಾಜ ಎಲ್ಲವನ್ನೂ ತೊರೆದು ಭಿಕ್ಷೆ ಬೇಡಲೂ ಬರುವುದೆಂದರೆ ಸಾಮಾನ್ಯವೇ” ಎಂದು ಯೋಚಿಸಿತ್ತಾ ಶಿವಾಜಿ ನಿನ್ನ ಮೇಲೆ ನನಗೆ ಪ್ರೀತಿ ಅಭಿಮಾನ ಹೆಚ್ಚುತ್ತಿದೆ ಎಂದು ರಾಮದಾಸರು ಹೇಳುತ್ತ “ನಿನಗಿನ್ನೂ ಚಿಕ್ಕ ವಯಸ್ಸು ವೈರಾಗ್ಯದ ಕಾಲ ಇನ್ನೂ ಬಂದಿಲ್ಲ, ಹೋಗು ನಿನಗೆ ಒಂದು ಒಳ್ಳೆಯ ರಾಜ್ಯ ಸಿಕ್ಕಿದೆ ಅಲ್ಲಿ ಉತ್ತಮವಾದ ಸ್ವರಾಜ್ಯ ಸಾಮ್ರಾಜ್ಯವನ್ನು ಸ್ಥಾಪಿಸು. ಪ್ರಜೆಗಳ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡು” ಎಂದು ಶಿವಾಜಿಗೆ ಸಲಹೆಯನ್ನು ಕೊಟ್ಟರು ರಾಮದಾಸರು.
ಅವರ ಆ ಒಂದು ಮಾತನ್ನೂ ದಿವ್ಯ ಪ್ರಸಾದವೆಂದು ಸ್ವೀಕರಿಸಿದ ಶಿವಾಜಿ ಮಹಾರಾಜರು. ಮುಳುಗುತ್ತಿರುವ ಹಿಂದೂ ಸಾಮ್ರಾಜ್ಯವನ್ನು ಮರುಸ್ಥಾಪಿಸಲು ತನ್ನ ಗುರುದೇವ ಧರಿಸಿದ ಕೇಸರಿ ಬಣ್ಣವನ್ನು ತನ್ನ ಸಾಮ್ರಾಜ್ಯದ ಧ್ವಜವನ್ನಾಗಿ ಮಾಡಿಕೊಂಡು ಇಡೀ ಭಾರತವನ್ನಾಳಿದ್ದು ಇತಿಹಾಸ. ಆ ಧ್ವಜವನ್ನೇ ನಾವಿಗ ಭಗವಾ ಧ್ವಜ ಅಂದರೆ ಭಗವಂತನ ಧ್ವಜ ಎಂದು ಸಹಸ್ರಾರು ಹಿಂದೂಗಳು ನಂಬಿದ್ದೆವೆ.
ಈ ಒಂದು ಸನ್ನಿವೇಶವನ್ನು ನಾವು ಸೂಕ್ಷ್ಮವಾಗಿ ಗಮನಿಸಿದರೆ ನಮಗೆ ಒಂದು ಪ್ರಶ್ನೆ ಉದ್ಭವಿಸುತ್ತದೆ. “ಮನುಷ್ಯ ಅಂದಮೇಲೆ ಅವನಿಗೆ ಗುರಿ ಇರುವುದು ಸಹಜ ಆದರೆ ಆ ಗುರಿಯನ್ನು ಸಾಧಿಸಲು ಒಬ್ಬ ಗುರು ಇರಬೇಕು” ಎಂಬ ಪ್ರಶ್ನೆಗೆ ಉತ್ತರವಾಗಿ ಸಿಗುವುದು ಶಿವಾಜಿ ಮಹಾರಾಜರು ಮತ್ತು ಗುರು ರಾಮದಾಸರು.
ನಮ್ಮ ದೇಶ ಕಂಡಂತೆ ದೊಡ್ಡ ದೊಡ್ಡ ಸಾಮ್ರಾಜ್ಯದ ಸ್ಥಾಪನೆಯ ಹಿಂದೆ ಒಬ್ಬೊಬ್ಬ ಮಹಾನ್ ಗುರುಗಳು ಇದ್ದರು ಎಂಬುದು. ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯ ಕಾರಣರಾದ ಹಕ್ಕಬುಕ್ಕರ ಹಿಂದೆ ವಿದ್ಯಾರಣ್ಯರೆಂಬ ಗುರುವಿದ್ದರು, ಹಸ್ತಿನಾಪುರದ ಸಾಮ್ರಾಜ್ಯವನ್ನು ಸ್ಥಾಪಿಸಲೆಂದು ಹೊರಟ ಅರ್ಜುನನ ಹಿಂದೆ ಶ್ರೀ ಕೃಷ್ಣನೆಂಬ ಗುರುವಿದ್ದ, ಮೌರ್ಯ ಸಾಮ್ರಾಜ್ಯದ ಸ್ಥಾಪನೆಯ ಚಂದ್ರಗುಪ್ತನ ಹಿಂದೆ ಮಹಾ ಮೇಧಾವಿ ಚಾಣಕ್ಯರೆಂಬ ಗುರುಗಳಿದ್ದರು.
ಗುರು ಇಲ್ಲದೆ ಗುರಿಯನ್ನು ಸಾಧಿಸುವುದು ಕಷ್ಟ, ಅದೇ ಗುರಿ ಇದ್ದು ಗುರುವನ್ನು ಹುಡುಕದಿದ್ದರೆ ಅದು ಇನ್ನೂ ಕಷ್ಟ.. ಗುರಿಯೊಡನೆ ಉತ್ತಮವಾದ ಗುರು ಯಾರು ಎಂದು ಹುಡುಕಿ ನಿಮ್ಮ ಗುರಿಯನ್ನು ಸಾಧಿಸವುದು ಉತ್ತಮ.
ನಮಗೆ ಗುರು ರಾಮದಾಸರಂತ ಗುರುಗಳ ಮಾರ್ಗದರ್ಶನವಿರಲಿ, ನಾವು ಶಿವಾಜಿಯಂತಹ ಶಿಷ್ಯನಾಗಬೇಕು ಆಗ ಮಾತ್ರ ಸಮಾಜ ಶಾಂತಿಯಿಂದಿರಲು ಸಾಧ್ಯ. ಇಲ್ಲದಿದ್ದರೆ ಈಗಿನ ಹಿಜಾಬ್ ವಿವಾದದ ರೀತಿಯ ಅನಗತ್ಯ ವಾದಗಳು ಬಂದು ನೆಲೆನಿಲ್ಲುತ್ತದೆ. ನಮಗೆ ಶಿವಾಜಿ ಮಹಾರಾಜರಂತಹ ಉದಾಹರಣೆಗಳು ಬೇಕೆ ವಿನಃ ಈ ಭಯೋತ್ಪಾದಕ, ಉಗ್ರವಾದದಂತ ಮತಾಂಧರಲ್ಲ ಉದಾಹರಣೆಯಲ್ಲ.