ಇಂದು ಹರಿಹರದ ತುಂಗಭದ್ರಾ ನದಿಯ ತಟದಲ್ಲಿ “ಉತ್ತರದಲ್ಲಿ ಗಂಗಾ ಆರತಿ ಮಾದರಿಯಲ್ಲಿ ದಕ್ಷಿಣದಲ್ಲಿ ತುಂಗಾ ಆರತಿ” ಪ್ರಯುಕ್ತ 108 ಯೋಗ ಮಂಟಪಗಳ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು  ನೆರವೇರಿಸಿದ್ದಾರೆ.

ಇದೇ ಸಂದರ್ಭದಲ್ಲಿ ಹರಿಹರದ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮಿಗಳು, ಸಚಿವರಾದ ಭೈರತಿ ಬಸವರಾಜ,ಮುರುಗೇಶ್ ನಿರಾನಿ,ಜಿ.ಎಂ ಸಿದ್ಧೇಶ್ವರ್ ಮೊದಲಾದವರು ಉಪಸ್ಥಿತರಿದ್ದರು.

ಶಿಲಾನ್ಯಾಸವನ್ನು ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು – “ಈ ಮೊದಲು ಕಾಶಿ ವಿಶ್ವನಾಥನ ಕ್ಷೇತ್ರವೂ ಬಹಳ ಇಕ್ಕಟ್ಟಾಗಿ ಕಿಷ್ಕಿಂಧೆಯಿಂದ ಕೂಡಿತ್ತು. ಸನ್ಯಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಈಗ ಕಾಶಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಿ ಗಂಗಾರತಿ ಮುಕ್ತವಾಗಿ ನಡೆಯಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅದೇ ಮಾದರಿಯಲ್ಲಿ ತುಂಗಾ ಆರತಿ ಕಾರ್ಯಕ್ರಮ ಸಹ ಪೂಜ್ಯ ವಚನಾನಂದ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯಲಿದೆ.ಅಲ್ಲದೆ, ನಗರೋತ್ಥಾನ ಯೋಜನೆಯಡಿಯಲ್ಲಿ ಹರಿಹರಕ್ಕೆ 40 ಕೋಟಿ ರೂ ಅನುದಾನ ಮಂಜೂರು ಮಾಡಲಾಗಿದೆ. ತುಂಗಭದ್ರಾ ನದಿಯ ತಟದಲ್ಲಿರುವ ಹರಿಹರದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಅನುದಾನವನ್ನು ನೀಡುತ್ತಿದೆ,”ಎಂದಿದ್ದಾರೆ.


https://twitter.com/BSBommai/status/1495279528515563520?t=8BRKMfi-pl7HgMBN-8sAHA&s=19

ಏನಿದು ತುಂಗಾ ಆರತಿ ?
ಉತ್ತರ ಭಾಗದ ಭಾರತದಲ್ಲಿ ಪ್ರತಿ ನಿತ್ಯ ಸಂಜೆ ಗಂಗಾತಟದಲ್ಲಿ ಆರತಿ ನಡೆಯುತ್ತದೆ.ಕಣ್ಮನ ಸೆಳೆಯುವ ಗಂಗಾರತಿಯಲ್ಲಿ ಜನ ಶ್ರದ್ಧಾ ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ.ಅಲ್ಲದೆ ಪ್ರವಾಸಿಗರನ್ನೂ ವಿಶೇಷವಾಗಿ ಆಕರ್ಷಿಸುತ್ತದೆ. ದಕ್ಷಿಣ ಭಾಗದ ಭಾರತದಲ್ಲಿಯೂ ನದಿಗಳನ್ನು ಅತ್ಯಂತ ಶ್ರದ್ಧೆಯಿಂದ ಪೂಜಿಸಲಾಗುತ್ತದೆ. ‘ಗಂಗಾ ಸ್ನಾನ ತುಂಗಾ ಪಾನ’ ಎನ್ನುವ ನಾಣ್ನುಡಿಯೂ ಇದೆ. ಹೀಗಾಗಿ ಗಂಗಾರತಿಯಂತೆ ತುಂಗಾರತಿಯನ್ನು ನಡೆಸಲು ಆಯೋಜಿಲಾಗಿದೆ.

ತುಂಗೆ ಉಳಿಸಿ ಕೂಗು
ಪಶ್ಚಿಮ ಘಟ್ಟದ ಒಡಲಲ್ಲಿ ಹುಟ್ಟುವ ತುಂಗೆ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಯ ಜೀವನಾಡಿ,ತುಂಗೆ ಕೂಡಲಿಯಲ್ಲಿ ಭದ್ರಾ ನದಿಯೊಟ್ಟಿಗೆ ಸೇರಿ ತುಂಗಭದ್ರಾ ನದಿಯಾಗಿ ಹರಿಯುತ್ತದೆ.

ಆದರೆ ಇತ್ತೀಚೆಗೆ ತುಂಗೆಯಲ್ಲಿ ಮಾಲಿನ್ಯ ಹೆಚ್ಚುತ್ತಿದ್ದು ಶೃಂಗೇರಿ ಪಟ್ಟಣದ ಕೊಳಚೆ ನೀರು ತುಂಗಾನದಿಗೆ ಬಿಡಲಾಗುತ್ತಿದೆ‌.ಅಲ್ಲದೆ ಪ್ರವಾಸಿಗರ ಬೇಜವಾಬ್ದಾರಿ ವರ್ತನೆಯ ಕೊಡುಗೆಯೂ ನದಿಯೊಳಗೆ ತ್ಯಾಜ್ಯ ಹೆಚ್ಚುವಲ್ಲಿ ಮಹತ್ವವಾಗಿದೆ.

ತುಂಗಾ ನದಿಗೆ ಸೇರುವ ಭೀಮನಕಟ್ಟೆಯಿಂದ ಹೊರಡುವ ಮಾಲತಿ ನದಿಯ ತಿರುವು ಈಗಾಗಲೇ ಒಣಗಿ ಹೋಗಿದ್ದು ತುಂಗೆಯ ಪುನರುಜ್ಜೀವನಕ್ಕೆ ಆದ್ಯತೆ ನೀಡಲೇಬೇಕಿದೆ‌.ಈ ನಿಟ್ಟಿನಲ್ಲಿ ತುಂಗಾರತಿ ಎಂಬ ಕಲ್ಪನೆ ಮತ್ತು ಅದರ ಪುನರುತ್ಥಾನದ ಸಂಕಲ್ಪ ಮಾಡಿರುವುದು ಸ್ವಾಗತಾರ್ಹವಾದ ವಿಚಾರ.

Leave a Reply

Your email address will not be published.

This site uses Akismet to reduce spam. Learn how your comment data is processed.