ಅಫ್ಘಾನಿಸ್ತಾನದ ಗುರುದ್ವಾರದ ಮೇಲೆ ಐಎಸ್ಐಎಸ್‌ನ ದಾಳಿಯನ್ನು ಖಂಡಿಸಿದ್ದು ಹುತಾತ್ಮ ಸವೀಂದರ್ ಸಿಂಹರಿಗೆ ಶ್ರದ್ಧಾಂಜಲಿ ಸಲ್ಲಿಸಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರು ನೀಡಿರುವ ಶೋಕ ಸಂದೇಶ.

ಅಫ್ಘಾನಿಸ್ಥಾನದ ಕಾಬೂಲಿನಲ್ಲಿರುವ ʼಕರತೆ ಪರವಾನ್‌ ಗುರುದ್ವಾರ ಸಾಹಿಬ್‌ʼನ ಮೇಲೆ ಐಎಸ್‌ಐಎಸ್‌ನವರು ಪ್ರಾಣಘಾತುಕವಾದ ದಾಳಿ ನಡೆಸಿದ್ದು,ಅದರಲ್ಲಿ ಹುತಾತ್ಮರಾದ ಸ.ಸವೀಂದರ್‌ ಸಿಂಹ ಅವರ ಪರವಾಗಿ ಇಡೀ ದೇಶದ ಸಂವೇದನೆಗಳು ಸಮ್ಮಿಳಿತಗೊಂಡಿವೆ.

ಈ ಘಟನೆ ಕೇವಲ ʼಕರತೆ ಪರವಾನ್‌ ಗುರುದ್ವಾರಾ ಸಾಹೀಬ್ʼನ ಮೇಲೆ ನಡೆಸಿದ ಆಕ್ರಮಣವಲ್ಲ.ಬದಲಿಗೆ ಈ ಘಟನೆಯಿಂದ ಪವಿತ್ರ ಗುರುಗ್ರಂಥ ಸಾಹೇಬ್‌ಗೆ ಹಾನಿ ಮಾಡುವ ಪ್ರಯತ್ನವಾಗಿದ್ದು, ಅತ್ಯಂತ ನಿಂದನೀಯ ವಿಷಯ.

ಸಾಂಪ್ರದಾಯಿಕವಾದ ಉನ್ಮಾದದಿಂದ ಮಾರಕಾಸ್ತ್ರಗಳಿಂದ ಮಾಡಿದ ಮಾಡಿದ ಈ ದಾಳಿಯು ಹೇಡಿತನದ ಕೃತ್ಯವಾಗಿದ್ದು ಮಾನವೀಯತೆಗೆ ಅವಮಾನವಾಗಿದ್ದು, ಅಕ್ಷಮ್ಯ ಅಪರಾಧವಾಗಿದೆ.ಇದನ್ನು ಯಾವುದೇ ಸಭ್ಯ ಸಮಾಜ ಸ್ವೀಕಾರ ಮಾಡಲು ಸಾಧ್ಯವಿಲ್ಲ.ದುಃಖದ ಈ ಸಂದರ್ಭದಲ್ಲಿ ಇಡೀ ದೇಶ ಹುತಾತ್ಮ ಸವೀಂದರ್‌ ಸಿಂಹರ ಪರಿವಾರದ ಜೊತೆಗಿದೆ. ಹುತಾತ್ಮರ ಕುಟುಂಬದವರಿಗೆ ಈ ಸಂಕಟದ ಸಮಯವನ್ನು ಸಹಿಸಲು ಮತ್ತು ಧೈರ್ಯದಿಂದ ಎದುರಿಸಲು ಶಕ್ತಿ ನೀಡುವಂತೆ ಅಕಾಲ್‌ ಪರಖ್‌ರಲ್ಲಿ ನಮ್ಮೆಲ್ಲರ ಪ್ರಾರ್ಥನೆಯಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘವು ಈ ಘಟನೆಯನ್ನು ಅತ್ಯಂತ ಕಟುವಾಗಿ ನಿಂದಿಸುತ್ತದೆ.ಮತ್ತು ದಿವಂಗತರ ಆತ್ಮಕ್ಕೆ ಸದ್ಗತಿ ದೊರೆಯಲು ಪ್ರಾರ್ಥಿಸುವುದರೊಂದಿಗೆ ಅವರಿಗೆ ವಿನಮ್ರವಾದ ಶ್ರದ್ಧಾಂಜಲಿಯನ್ನು ಅರ್ಪಿಸುತ್ತದೆ.

  • ದತ್ತಾತ್ತ್ರೇಯ ಹೊಸಬಾಳೆ,ಸರಕಾರ್ಯವಾಹ, ರಾಷ್ಟ್ರೀಯ ಸ್ವಯಂಸೇವಕ ಸಂಘ

Leave a Reply

Your email address will not be published.

This site uses Akismet to reduce spam. Learn how your comment data is processed.