VHP's Milind Parande at the press conference

ಸಾಮಾಜಿಕ ಸಮರಸತೆಗೆ ಶ್ರೀ ರಾಮ ಜನ್ಮಭೂಮಿಯ ಮಂದಿರ ಅನುಪಮ ಕೇಂದ್ರವಾಗಲಿದೆ: ಮಿಲಿಂದ್ ಪರಾಂಡೆ.

ನಾಗಪುರ/ಬೆಂಗಳೂರು, 30 ಜುಲೈ 2020: ಮರ್ಯಾದಾ ಪುರುಷೋತ್ತಮನಾದ ಪ್ರಭು ಶ್ರೀರಾಮನು ಸಾಮಾಜಿಕ ಸಮರಸತೆ ಹಾಗೂ ಸಶಕ್ತೀಕರಣದ ಸಂದೇಶವನ್ನು ತನ್ನ ಭವ್ಯ ಜೀವನದ ಆಚರಣೆಯಿಂದ ಸಾರಿದ್ದಾನೆ. ಈ ಮಂದಿರದ ಶಿಲಾನ್ಯಾಸಕ್ಕೆ ದೇಶದೆಲ್ಲೆಡೆಯಿಂದ ಸಂಗ್ರಹಿಸಿ ಬಳಸಲಾಗುವ ಮೃತ್ತಿಕೆ, ವಿವಿಧ ನದಿಗಳ ಜಲ ರಾಷ್ಟ್ರಕ್ಕೆ ಏಕಾತ್ಮತೆಯ ದರ್ಶನವನ್ನು ಸಾರುತ್ತದೆ ಎಂದು ವಿಶ್ವ ಹಿಂದೂ ಪರಿಷದ್ ನ ಕೇಂದ್ರೀಯ ಮಹಾಮಂತ್ರಿಯಾದ ಶ್ರೀ ಮಿಲಿಂದ್ ಪರಾಂಡೆ ಪತ್ರಿಕಾ ಗೋಷ್ಠಿಯಲ್ಲಿ ನುಡಿದರು. ಡಾ. ಹೆಡಗೇವಾರ್ ಅವರ ಸಂಘ-ಗಂಗಾ ವನ್ನು, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ದೀಕ್ಷಾ ಭೂಮಿಯಲ್ಲಿ ಸಮತಾ-ಗಂಗಾವನ್ನು ಪರಿಚಯಿಸಿದ ಊರಿನಲ್ಲಿ ಪತ್ರಕರ್ತರ ಜೊತೆ ಮಾತನಾಡುತ್ತಿರುವುದು ಹೆಮ್ಮೆಯ ವಿಚಾರವೆಂದರು.

ಪ್ರಭು ಶ್ರೀರಾಮನಿಂದ ಸಾಮಾಜಿಕ ಸಮರಸತೆಯನ್ನು ಎತ್ತಿಹಿಡಿಯುವ ಉದಾಹರಣೆಗಳಾದ ಅಹಲ್ಯೆಯ ಶಾಪ ವಿಮೋಚನೆ, ಶಬರಿಗೆ ತೋರಿದ ಪ್ರೀತಿ, ನಿಷಾದರಾಜನ ಜೊತೆಗಿನ ಮಿತ್ರತ್ವ ಕಾಣಸಿಗುತ್ತವೆ. ೧೯೮೯ರಲ್ಲಿ ಶ್ರೀ ರಾಮ ಜನ್ಮಭೂಮಿಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅನೇಕ ಸಾಧು ಸಂತರು ಉಪಸ್ಥಿತರಿದ್ದರು. ಅವರಲ್ಲಿ ಪರಿಶಿಷ್ಠ ಜಾತಿಗೆ ಸೇರಿದ ಶ್ರೀ ಕಾಮೇಶ್ವರ ಚೌಪಾಲರ ಅಮೃತಾಹಸ್ತದಿಂದಲೇ ಶಿಲಾನ್ಯಾಸವನ್ನು ನೇರವೇರಿಸಲಾಗಿತ್ತು. ಪ್ರಸ್ತುತ ದಿನಗಳಲ್ಲಿ, ಅವರು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ತರೂ ಹೌದು ಎಂದು ಅವರು ನುಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದ ವಿವಿಧ ತೀರ್ಥ ಕ್ಷೇತ್ರಗಳಿಂದ ಪಾವನ ಮೃತ್ತಿಕೆ ಹಾಗೂ ಹಲವು ನದಿಗಳಿಂದ ಸಂಗ್ರಹಿಸಲಾದ ಜಲವನ್ನು ಅಯೋಧ್ಯೆಯ ಶ್ರೀರಾಮಜನ್ಮ ಭೂಮಿಯಲ್ಲಿ ಪೂಜೆಗೆ ಸಹಾಯವಾಗುವಂತೆ ಅನುವು ಮಾಡಲಾಗಿದೆ. ಇದು ಆನಂದ ಹಾಗೂ ಹರ್ಷೋಲ್ಲಾಸದ ವಾತಾವರಣವನ್ನು ಸೃಷ್ಟಿಸುತ್ತದೆ. ಅವುಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜನನವಾದ ನಾಗಪುರವಿರಬಹುದು, ಸಂತ ರವಿದಾಸರ ಪಾವನ ಕ್ಷೇತ್ರವಾದ ಕಾಶಿ ಇರಬಹುದು, ಮಹರ್ಷಿ ವಾಲ್ಮೀಕಿಗಳ ಆಶ್ರಮವಾದ ಸೀತಾಮಢಿ ಇರಬಹುದು, ವಿದರ್ಭದ ಗೊಂದಿಯಾ ಜಿಲ್ಲೆಯ ಕಾಚಾರಗಡ್ ಇರಬಹುದು, ಝಾರಖಂಡನ ರಾಮರೇಖಾಧಾಮ್, ಮಧ್ಯಪ್ರದೇಶದ ಟಂಟ್ಯಾ ಭಿಲ್ ಪುಣ್ಯಭೂಮಿ, ಪಂಜಾಬಿನ ಅಮೃತಸರದ ಶ್ರೀ ಹರಮಂದಿರ ಸಾಹಿಬ್, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮಸ್ಥಳವಾದ ಮಹೂವಿನ, ದಿಲ್ಲಿಯ ಜೈನ ಲಾಲ್ ಮಂದಿರ, ಮಹಾತ್ಮ ಗಾಂಧಿಯವರು ೭೨ ದಿನಗಳು ನೆಲೆಸಿದ್ದ ವಾಲ್ಮೀಕಿ ಮಂದಿರವಿರಬಹುದು ಇಲ್ಲಿಂದ ಮೃತ್ತಿಕೆಯನ್ನು ಸಂಗ್ರಹಿಸಲಾಗಿದೆ ಎಂದು ಅವರು ನುಡಿದರು.

VHP’s Milind Parande at the press conference

ವಿಹಿಂಪ ಇತ್ತೀಚೆಗಷ್ಟೇ ಆದಿಚುಂಚನಗಿರಿಯ ಮಠಾಧಿಪತಿಗಳಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಅಲ್ಲಿನ ಪಾವನ ಮೃತ್ತಿಕೆಯನ್ನೂ ಸಂಗ್ರಹಿಸಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಮಿಲಿಂದ್ ಪರಾಂಡೆಯವರು ತಮ್ಮ ಮಾತನ್ನು ಮುಂದುವರಿಸುತ್ತಾ, ದೇಶದ ಜನರಲ್ಲಿ ಆಗಸ್ಟ್ ೫ನೆಯ ತಾರೀಖು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ, ಸಾಧ್ಯವಾದರೆ ದೇವಸ್ಥಾನಗಳಲ್ಲಿ, ಬೆಳಿಗ್ಗೆ ೧೦:೩೦ ರಿಂದ ತಮ್ಮ ಆರಾಧ್ಯ ದೇವರನ್ನು ನೆನೆಯುತ್ತಾ, ಭಜನೆ, ಸತ್ಸಂಗ, ಆರಾಧನೆ, ಪೂಜೆಯನ್ನು ನೆರವೇರಿಸಿ, ದೇವರಿಗೆ ಮಂಗಳಾರತಿ ಬೆಳಗಿ, ಪ್ರಸಾದ ವಿನಿಯೋಗ ಮಾಡಬೇಕೆಂದು ಕೇಳಿಕೊಂಡರು. ಅಯೋಧ್ಯೆಯ ಕಾರ್ಯಕ್ರಮವನ್ನು ಸಾಧ್ಯವಾದಷ್ಟರ ಮಟ್ಟಿಗೆ ಸಮಾಜಕ್ಕೆ ಲೈವ್ ಮುಖಾಂತರ ಬಿತ್ತರಿಸಬೇಕೆಂದು ಕೇಳಿಕೊಂಡರು. ಅಂದು ಸಂಜೆ, ನಾವು ನೆಲೆಸಿರುವ ಮನೆ, ಹತ್ತಿರದ ದೇವಸ್ಥಾನ, ಮಠ, ಗುರುದ್ವಾರ, ಆಶ್ರಮಗಳಲ್ಲಿ, ಊರುಗಳಲ್ಲಿ ದೀಪ ಬೆಳಗಿಸೋಣವೆಂಬ ಕರೆ ಇತ್ತರು. ಮಂದಿರ ನಿರ್ಮಾಣಕ್ಕಾಗಿ ಎಷ್ಟು ಸಾಧ್ಯವೋ ಅಷ್ಟು ದಾನ ನೀಡುವ ಸಂಕಲ್ಪ ಸಮಾಜ ಮಾಡಬೇಕೆಂದು ಕೇಳಿಕೊಂಡರು.

ಈ ಸಂಭ್ರಮದ ನಡುವೆ, ಕಾರ್ಯಕ್ರಮದ ನಮ್ಮ ಅನುಷ್ಠಾನಗಳಲ್ಲಿ ಕೊರೋನಾ ಸೋಂಕನ್ನು ತಡೆಯುವ ದೃಷ್ಟಿಯಿಂದ ಜಾಗರೂಕತೆಯಿಂದ ನಡೆದುಕೊಳ್ಳುವ, ಸರ್ಕಾರ ಹಾಗೂ ಆಡಳಿತ ವರ್ಗಗಳು ವಿಧಿಸಿರುವ ನಿರ್ದೇಶನಗಳನ್ನು ಗೌರವಿಸುತ್ತಾ ಆಚರಣೆಯಲ್ಲಿ ತೊಡಗಿಸಿಕೊಳ್ಳೊಣವೆಂದು ತಿಳಿಸಿದರು.

File picture Milind Parande, Central Secretary General VHP

 

 

Leave a Reply

Your email address will not be published.

This site uses Akismet to reduce spam. Learn how your comment data is processed.