ಎಲ್ಲರ ಜೊತೆ ಹೊಂದಿಕೊಂಡು ಬಾಳುವುದೇ ಸಾಮರಸ್ಯ ಹಾಗೂ ಎಲ್ಲರ ವಿಚಾರಗಳನ್ನು ಗೌರವಿಸುವುದೇ ಸದ್ಭಾವನೆ

DSC_0496

ದೇಹದಲ್ಲಿ ಎಲ್ಲಾ ಅಂಗಾಂಗಳು ತಮ್ಮ ಕೆಲಸ ಮಾಡುತ್ತವೆ. ಅದು ವೈವಿದ್ಯತೆ, ಅದು ಭಿನ್ನತೆ ಅಲ್ಲ, ಎಲ್ಲಾ ಅಂಗಾಂಗಗಳು ಹೊಂದಿಕೊಂಡು ಬಾಳುತ್ತವೆ. ಅದರಂತೆ ಸಮಾಜದಲ್ಲಿ ವಿವಿಧ ಜಾತಿಗಳು ತಮ್ಮ ತಮ್ಮ ಆಚಾರ ವಿಚಾರ ಹೊಂದಿರುವವು ಆದರೆ ಹೊಂದಿಕೊಂಡು ಬಾಳುವುದೇ ಸಾಮರಸ್ಯ ಅನೇಕ ವೈವಿದ್ಯತೆಯ ನಡೆತೆಯನ್ನು, ಆಚರಣೆಯನ್ನು ಗೌರವಿಸುವುದೇ ಸದ್ಭಾವನೆ ಎಂದು ಆರ್.ಎಸ್.ಎಸ್.ನ ಹಿರಿಯ ಪ್ರಚಾರಕರಾದ ಸು.ರಾಮಣ್ಣನವರು ಹೇಳಿದರು.

ಅವರು ಮಾತನಾಡುತ್ತಾ ಜಾತಿಯ ಆಚಾರ ವಿಚಾರಗಳು ಬೇರೆಯವರ ಎಲ್ಲಾ ಜಾತಿ ಉಪಜಾತಿಯೂ ನಂಬಿರುವ ಒಂದು ಸಂಸ್ಕೃತಿಯೇ ಸಾಮರಸ್ಯ. ಭಾರತೀಯ ಸಂಸ್ಕೃತಿಯಲ್ಲಿ ವಿಶ್ವವೇ ಒಂದು ಕುಟುಂಬ ಹಾಗೆಯೇ ಮಾತೃದೇವೋಭವ, ಪಿತೃದೇವೋಭವ, ಅತಿಥಿ ದೇವೋಭವ, ದೇವನೊಬ್ಬ ನಾಮ ಹಲವು ಎಂಬುದು ಎಲ್ಲರ ಆಚರಣೆಯಾಗಿರಬೇಕು ಎಂದರು. ಭಾರತೀಯ ಹಿಂದೂ ಸಮಾಜದಲ್ಲಿ ಇರುವ ಜಾತಿಯ ಅಸ್ಪೃಶ್ಯತೆಯ ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ ಅನೇಕ ಸಾಧು ಸಂತರು ಪ್ರಯತ್ನಿಸುತ್ತಿದ್ದು ಸಾಮರಸ್ಯ ವೇದಿಕೆಯಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಮಾಜದಲ್ಲಿ ಸದ್ಭಾವನೆ ಮಾಡುವ ಕಾರ್ಯಕ್ರಮಗಳನ್ನು, ಗೋಷ್ಠಿಗಳನ್ನು ನಡೆಸುತ್ತಿದೆ ಎಂದರು.

ತುಮಕೂರು ನಗರದ ಸಿದ್ದಗಂಗಾ ಫಾರ್ಮಸಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಈ ಸದ್ಭಾವನಾಗೋಷ್ಠಿಗೆ ವಿವಿಧ ಸಮಾಜದ (ಜಾತಿಯ) ಮುಖಂಡರು ಪಾಲ್ಗೊಂಡು ಸಾಮರಸ್ಯ ಸದ್ಭಾವನೆ ವಿಚಾರಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಅನಿಸಿಕೆಗಳನ್ನು ತಿಳಿಸಿ ಚರ್ಚಿಸಿದರು ಜಿಲ್ಲೆಯ ವಿವಿಧ ಸಂಘ ಸಂಸ್ಥೆ ಹಾಗೂ ರಾಜಕೀಯ ಗಣ್ಯರು ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಿದ್ಯೋದಯ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಚಂದ್ರಣ್ಣ ವಹಿಸಿದ್ದು, ಭೈರಪ್ಪನವರು ನಿರೂಪಿಸಿದರು. ಡಾ.ಪರಮೇಶ್ವರ್‌ರವರು ಸ್ವಾಗತ ಪರಿಚಯ ಮಾಡಿದರು. ಪ್ರಭಾಕರ್‌ರವರು ವಂದನಾರ್ಪಣೆಯನ್ನು ಮಾಡಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.