ಭಾರತದಲ್ಲಿ ಹಿಂದೂ ಬಹುಸಂಖ್ಯಾತ ಎಂಬ ಗುಮ್ಮನನ್ನು ತೋರಿಸಿ ರಾಜಕೀಯ, ಆರ್ಥಿಕ ಲಾಭ ಪಡೆಯುತ್ತಿರುವ ಗುಂಪುಗಳು ವ್ಯವಸ್ಥಿತವಾಗಿ ಹಿಂದೂ ಭಾವನೆಗೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಇತ್ತೀಚಿನ ವರ್ಷಗಳಲ್ಲಿ ಓಟಿಟಿ, ವೆಬ್ ಸೀರೀಸ್ ಹೆಸರಿನ ಹೊಸ ಮಾರ್ಗ ವನ್ನು ಕಂಡುಕೊಂಡಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ದೇವದೇವತೆಗಳನ್ನು ಹೇಗೆ ಬೇಕಾದರೂ ಚಿತ್ರಿಸಬಹುದು, ಭಾವನೆಗಳನ್ನು ತುಚ್ಯವಾಗಿ ಹೀಗೆಳೆಯಬಹುದು  ಎನ್ನುವ ಸೋ-ಕಾಲ್ಡ್ ಜಾತ್ಯಾತೀತರ ಗುಂಪು ಅನ್ಯಮತಗಳ (ಮುಸ್ಲಿಮ್, ಕ್ರೈಸ್ತ) ವಿಷಯದಲ್ಲಿ ವಿಶೇಷ ಆಸ್ಥೆ ವಹಿಸುವ ಹಲವು ಉದಾಹರಣೆಗಳು ನಮಗೆ ಕಾಣಸಿಗುತ್ತವೆ.

ಇದೀಗ ಹಿಂದೂ ಸಮಾಜ ಜಾಗೃತವಾಗಿರುವ ಪರಿಣಾಮ ಈ ಕುಕೃತ್ಯಗಳು ಬೆಳಕಿಗೆ ಬಂದು ಬಾರೀ ಸಾರ್ವಜನಿಕ ಆಕ್ರೋಶಕ್ಕೆ ಮಣಿದು ಕ್ಷಮಾಪಣೆಯ ಹಿಂತೆಗೆದುಕೊಳ್ಳುವ ನಾಟಕ ನಡೆಯುತ್ತಿದೆ. ಆದರೆ ಈ ವ್ಯವಸ್ಥಿತ ಜಾಲದ ವಿರುದ್ಧ ಇನ್ನಷ್ಟು ಹೋರಾಟದ ಅಗತ್ಯವಿದೆ.

ಹಿಂದೂ ಭಾವನೆಗೆ ಧಕ್ಕೆ ತರುವ ಇತ್ತೀಚಿನ ಉದಾಹರಣೆ ಅಮೆಜಾನ್ ನಲ್ಲಿ ಪ್ರಸಾರವಾದ ‘ತಾಂಡವ್‌’ ವೆಬ್ ಸರಣಿ. ಈ ವೆಬ್ ಸರಣಿ ಪ್ರಸಾರವಾದ ಬೆನ್ನಲ್ಲೇ ಇದರ ವಿರುದ್ಧ ದೇಶವ್ಯಾಪಿ ಆಕ್ರೋಶ ವ್ಯಕ್ತವಾಯಿತು. ಚಿತ್ರದಲ್ಲಿ ುಲ್ಲೇಖಿಸಲಾದ ವಿಷಯಗಳ ಕುರಿತು ಸಾರ್ವಜನಿಕರಿಂದ ಭಾರೀ ಪ್ರಮಾಣದಲ್ಲಿ ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕೂಡಾ ಸ್ಪಷ್ಟನೆ ಕೇಳಿದೆ. ‘ತಾಂಡವ್‌’ ವೆಬ್‌ ಸರಣಿ ಹಾಗೂ ಅಮೆಜಾನ್‌ ಇಂಡಿಯಾ ಮುಖ್ಯಸ್ಥೆ ಅಪರ್ಣಾ ಪುರೋಹಿತ್‌ ಅವರ ವಿರುದ್ಧ ಉತ್ತರ ಪ್ರದೇಶದಲ್ಲಿ ಪ್ರಕರಣ ದಾಖಲಿಸಿದೆ.

ಬೇಷರತ್ ಕ್ಷಮೆ: ಸಾರ್ವಜನಿಕ ಆಕ್ರೋಶಕ್ಕೆ ಮಣಿದ ಚಿತ್ರತಂಡ ಕ್ಷಮೆಯಾಚಿಸಿದೆ. ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಚಿತ್ರತಂಡ ‘ಅಮೆಜಾನ್‌ ವೆಬ್‌ಸೀರೀಸ್‌ನಲ್ಲಿ ಇತ್ತೀಚೆಗೆ ಬಿಡುಗಡೆಯಾದ ನಮ್ಮ ಚಿತ್ರದ ಬಗ್ಗೆ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಜೊತೆಗೆ ಚಿತ್ರದ ಅಡಕಗಳ ಕುರಿತು ಸಾರ್ವಜನಿಕರಿಂದ ಭಾರೀ ಪ್ರಮಾಣದಲ್ಲಿ ದೂರು ಸಲ್ಲಿಕೆಯಾಗಿರುವ ವಿಷಯ ಕೂಡಾ ಸೋಮವಾರ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಜೊತೆಗೆ ನಡೆಸಿದ ಸಮಾಲೋಚನೆ ವೇಳೆ ಕೂಡಾ ಗಮನಕ್ಕೆ ಬಂದಿದೆ. ತಾಂಡವ್‌, ವಾಸ್ತವವಾಗಿ ಒಂದು ಕಾಲ್ಪನಿಕ ಕಥೆ ಆಧರಿತ ಚಿತ್ರ. ಅದು ಯಾವುದೇ ವ್ಯಕ್ತಿ ಅಥವಾ ಘಟನೆಗಳ  ಜೊತೆ ಹೋಲಿಕೆಯಾಗುತ್ತಿರುವುದು ಕಾಕತಾಳೀಯ. ಚಿತ್ರತಂಡವಾಗಲೀ ಅಥವಾ ತಂಡದ ಯಾವುದೇ ವ್ಯಕ್ತಿಗಾಗಲೀ ಯಾವುದೇ ವ್ಯಕ್ತಿ, ಧರ್ಮ, ಸಮುದಾಯ, ಜಾತಿ ಅಥವಾ ನಂಬಿಕೆಗಳಿಗೆ ಧಕ್ಕೆ ಉಂಟುಮಾಡುವ ಉದ್ದೇಶವಿಲ್ಲ. ಆದರೂ ಕೂಡಾ ಚಿತ್ರದ ಬಗ್ಗೆ ವ್ಯಕ್ತವಾಗಿರುವ ಅಭಿಪ್ರಾಯವನ್ನು ಗಮನಿಸಿ ನಾವು ಬೇಷರತ್‌  ಕ್ಷಮೆಯಾಚಿಸುತ್ತಿದ್ದೇವೆ’ ಎಂದು ಹೇಳಿದೆ.

ಬಿಹಾರದ ಮುಜಫ್ಫರ್‌ಪುರದಲ್ಲಿ ವಕೀಲರೊಬ್ಬರು ತಾಂಡವ್‌ ಸಿನಿ ತಂಡದ 96 ಜನರ ವಿರುದ್ಧ ಕೋರ್ಟ್‌ನಲ್ಲಿ ಕ್ರಿಮಿನಲ್‌ ದೂರು ದಾಖಲಿಸಿದ್ದಾರೆ.

ಶಿವಸೇನೆ ಸರ್ಕಾರದಿಂದ ಭದ್ರತೆ!: ಇತ್ತ ಶಿವಸೇನೆ ನೃತೃತ್ವದ ಮಹಾರಾಷ್ಟ್ರ ಸರ್ಕಾರ  ಮುಂಬೈನಲ್ಲಿ ಅಮೆಜಾನ್‌ ಕಚೇರಿ ಮತ್ತು ಚಿತ್ರದ ನಾಯಕ ನಟ  ಸೈಫ್‌ ಅಲಿ ಖಾನ್‌ ಅವರ ನಿವಾಸಗಳಿಗೆ ಹೆಚ್ಚಿನ ಭದ್ರತೆ ಒದಗಿಸಿದೆ.

ಈ ವೆಬ್ ಸರಣಿಯಲ್ಲಿ ಶಿವನ ಪಾತ್ರಧಾರಿ  ಪಾತ್ರವಹಿಸಿರುವ ಮಹಮ್ಮದ್ ಝೀಶನ್ ಅಯಬ್  ತುಕಡೇ ತುಕಡೇ ಗ್ಯಾಂಗ್ ಹಾಗೂ ದೇಶದ್ರೋಹದ ಆರೋಪ ಹೊತ್ತಿರುವ ಉಮರ್ ಖಲೀದ್ ಪರವಾಗಿ ಧನಿ ಎತ್ತಿರುವ ಆರೋಪ ಕೂಡಾ ಇದೆ.

https://twitter.com/RatanSharda55/status/1351210105937813506?s=20

Leave a Reply

Your email address will not be published.

This site uses Akismet to reduce spam. Learn how your comment data is processed.