ಶ್ರೀ ಎಸ್ ಉಮೇಶ್ ರಚಿಸಿರುವ ‘ತಾಷ್ಕೆಂಟ್ ಡೈರಿ’ ಲೋಕಾರ್ಪಣೆಗೊಳ್ಳಲು ಸಿದ್ಧ.

ಮೈಸೂರಿನ ಲೇಖಕ ಎಸ್. ಉಮೇಶ್‍ರವರು ರಚಿಸಿರುವ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಕುರಿತ ಪುಸ್ತಕ `ತಾಷ್ಕೆಂಟ್ ಡೈರಿ’ ಈ ವಾರ ಮೈಸೂರಿನಲ್ಲಿ ಬಿಡುಗಡೆಗೊಳ್ಳುತ್ತಿದೆ. ಖ್ಯಾತ ಭಾಷಾತಜ್ಞರೂ ಹಿರಿಯರೂ ಆದ ಡಾ. ಪ್ರಧಾನ್ ಗುರುದತ್ತರವರ ಉಪಸ್ಥಿತಿಯಲ್ಲಿ ನಾಡಿನ ಹಿರಿಯ ಕಾದಂಬರಿಕಾರರೂ ಸರಸ್ವತಿ ಸಮ್ಮಾನ್ ಪುರಸ್ಕೃತರೂ ಆದ ಡಾ.ಎಸ್.ಎಲ್. ಭೈರಪ್ಪನವರಿಗೆ ಮೊದಲ ಪ್ರತಿಯನ್ನು ಸಮರ್ಪಣೆ ಮಾಡುವ ಮೂಲಕ ಪುಸ್ತಕ ಜುಲೈ 17, ಶುಕ್ರವಾರದಂದು ಲೋಕಾರ್ಪಣೆಗೊಳ್ಳಲಿದೆ.

‘ತಾಷ್ಕೆಂಟ್ ಡೈರಿ’ ಭಾರತದ ಎರಡನೇ ಪ್ರಧಾನಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಯವರ ಕುರಿತ ಅಪರೂಪದ ಪುಸ್ತಕ. ಈ ಪುಸ್ತಕ ಒಂದು ಸಾಮಾನ್ಯ ಕುಟುಂಬದಿಂದ ಬಂದು ದೇಶದ ಅತ್ಯುನ್ನತ ಪದವಿಯನ್ನು ಅಲಂಕರಿಸಿದ ಮಹಾನ್ ವ್ಯಕ್ತಿಯೊಬ್ಬರ ಜೀವನ ಕಥನ. ವ್ಯಕ್ತಿಯೊಬ್ಬ ತನ್ನ ಆದರ್ಶ ಮತ್ತು ಉದಾತ್ತ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ಹೇಗೆ ಕೊಂಡೊಯ್ಯಬಲ್ಲ ಎನ್ನುವುದಕ್ಕೆ ಜ್ವಲಂತ ನಿದರ್ಶನ.

ಇಲ್ಲಿ ಶಾಸ್ತ್ರೀಜಿಯವರ ಸಾರ್ವಜನಿಕ ಬದುಕಿನ ಹತ್ತಾರು ಮನಕಲಕುವ ಘಟನೆಗಳಿವೆ. ಪ್ರಧಾನ ಮಂತ್ರಿಯಾಗಿ ಅವರು ದೇಶವನ್ನು ಮುನ್ನಡೆಸಿದ ವರ್ಣನೆಯಿದೆ. 1965ರಲ್ಲಿ ಭಾರತ-ಪಾಕೀಸ್ತಾನದ ನಡುವೆ ನಡೆದ ಭಯಾನಕ ಯುದ್ಧದ ಕಥನವಿದೆ. ಯುದ್ಧದ ಸಮಯದಲ್ಲಿ ಶಾಸ್ತ್ರೀಜಿ ತೆಗೆದುಕೊಂಡ ದಿಟ್ಟ ನಿರ್ಧಾರಗಳ ವಿವರಣೆ ಇದೆ.

ಶಾಂತಿದೂತನಂತೆ ತಾಷ್ಕೆಂಟಿಗೆ ತೆರಳಿ ಹೆಣವಾಗಿ ಭಾರತಕ್ಕೆ ಮರಳಿದ ಕಣ್ಣೀರ ಕಥೆಯಿದೆ. ಆ ನಂತರ ಆಸ್ಫೋಟಗೊಂಡ ಭಾರತೀಯರ ಆಕ್ರೋಷದ ವಿವರಣೆ ಇದೆ. ಅವರ ಸಾವಿನ ಕುರಿತ ಸತ್ಯಾನ್ವೇಷಣೆ ಇದೆ. ಅವರ ಸಾವಿನ ಸುತ್ತ ಹೆಣೆದುಕೊಂಡ ಅನುಮಾನದ ಸಂಪೂರ್ಣ ವಿಶ್ಲೇಷಣೆಯಿದೆ. ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಭಾರತದ ಪ್ರಧಾನ ಮಂತ್ರಿ ದೂರದ ದೇಶಕ್ಕೆ ಹೋದಾಗ ಅಲ್ಲಿ ಅವರಿಗೆ ಕನಿಷ್ಟ ಸೌಕರ್ಯಗಳಾಗಲಿ ಕನಿಷ್ಟ ಭದ್ರತೆಯನ್ನಾಗಲಿ ನೀಡದೆ ಬೇಜವಾಬ್ದಾರಿತನ ಮೆರೆದ ಭಾರತ ಸರ್ಕಾರ ಮತ್ತು ಅಲ್ಲಿನ ಮಂತ್ರ್ರಿಗಳ ಬಗ್ಗೆ ಆಕ್ರೋಶವಿದೆ.

ಸ್ವಾರ್ಥ, ದುರಾಸೆ ಮತ್ತು ಅಧಿಕಾರ ದಾಹದಿಂದ ದೇಶದ ಹಿತಾಸಕ್ತಿಯನ್ನೆ ಬಲಿಕೊಟ್ಟ ನಮ್ಮ ನಾಯಕರ ಅಸಲಿ ಮುಖ ಅನಾವರಣಗೊಂಡಿದೆ. ಭಾರತ ಸರ್ಕಾರದ ದಾಖಲೆಗಳು, ಸಂಸತ್ತಿನ ನಡೆವಳಿಗಳು, ಶಾಸ್ತ್ರೀಜಿಯವರೊಂದಿಗೆ ಕೆಲಸ ಮಾಡಿದ್ದ ಅನೇಕ ಅಧಿಕಾರಿಗಳು ಬರೆದಿದ್ದ ಪುಸ್ತಕಗಳು,
ಸಿ.ಐ.ಎ ಮತ್ತು ಕೆ.ಜಿ.ಬಿ ಆರ್ಕೈವ್‍ಗಳು ಹೀಗೆ ಇವೆಲ್ಲವನ್ನೂ ಕ್ರೋಡೀಕರಿಸಿ ಪ್ರಕಟಗೊಂಡಿರುವ ಅಮೂಲ್ಯ ಕೃತಿ ‘ತಾಷ್ಕೆಂಟ್ ಡೈರಿ’.

ಒಟ್ಟಾರೆ ಕನ್ನಡದ ಓದುಗರಿಗೆ ಇದೊಂದು ಅಪರೂಪದ ಅನುಭವ ನೀಡುವುದರಲ್ಲಿ
ಅನುಮಾನವಿಲ್ಲ.

‘ತಾಷ್ಕೆಂಟ್ ಡೈರಿ’
ಲೇಖಕರು: ಶ್ರೀ ಎಸ್ ಉಮೇಶ್
ಪ್ರಕಾಶಕರು: ಧಾತ್ರಿ, ಮೈಸೂರು
ಪುಟಗಳು : ೨೪೦
ಬೆಲೆ: ೧೭೦/-
https://www.dhatripublication.com ನಲ್ಲಿ ಪ್ರಿ ಆರ್ಡರ್ ಮಾಡಬಹುದಾಗಿದೆ.

Tashkent Diary:
The book is about Sri Lal Bahdur Shastri the second Prime Minister of India. He was the man who came from a humble section of the society and rose to the highest position of the country. Shastri was the creator the timeless slogan “Jai Javan Jai Kisan”.

A rear book in kannada language on Sri Lal Bhadur Shastriji is getting released this week in Mysuru. The maiden copy of the book will be delivered to well-known novelist and Saraswati Samman awarded novelist Dr. S L. Bhyrappa.

The book caries the great stories of political and personal life of Shastriji. The readers will take home the unique and thrilling narration of 1965 war with Pakistan. The book also throws light on his death in Tashkent followed by various theories around it. This is going to be an exciting read for all the readers.

Title : Tashkent Diary
Author : S Umesh
Language : Kannada
Publisher: Dhatri Publications, Mysore
No of Pages: 240
Price: Rs 170
Website to visit for Pre-order: https://www.dhatripublication.com

Leave a Reply

Your email address will not be published.

This site uses Akismet to reduce spam. Learn how your comment data is processed.