ತಿರುವನಂತಪುರಂ: ಕೇರಳದಲ್ಲಿ 2019ರ ಜನವರಿಯಿಂದ 2023ರ ಡಿಸೆಂಬರ್ ವರೆಗೆ ದಾಖಲಾಗಿರುವ ನಾಪತ್ತೆಯಾದ ಹುಡುಗಿಯರ ಪ್ರಕರಣಗಳ ಸಂಖ್ಯೆ 5338 ಎಂಬ ಆಘಾತಕಾರಿ ಸುದ್ದಿಯನ್ನು ಕೇರಳ ಪೊಲೀಸ್ ತಿಳಿಸಿದೆ.
ಆರ್ ಟಿ ಐ ಕಾಯಿದೆ-2005 ಅಡಿಯಲ್ಲಿ ಬೆಂಗಳೂರಿನ ಗಿರೀಶ್ ಭಾರದ್ವಾಜ್ ಅವರು ಸಲ್ಲಿಸಿದ ಅರ್ಜಿಗೆ ಪ್ರತ್ಯುತ್ತರವನ್ನು ರವಾನಿಸಿದ ತಿರುವನಂತಪುರಂನ ರಾಜ್ಯ ಅಪರಾಧ ದಾಖಲೆಗಳ ಬ್ಯೂರೋನ ಸಾರ್ವಜನಿಕ ಮಾಹಿತಿ ಅಧಿಕಾರಿಯವರು ಏಪ್ರಿಲ್ 12ರಂದು ಪತ್ರ ಬರೆಯುವ ಮೂಲಕ ಈ ಕಳವಳಕಾರಿ ಮಾಹಿತಿಯನ್ನು ತಿಳಿಸಿದ್ದಾರೆ.
ಬೆಂಗಳೂರಿನ ಗಿರೀಶ್ ಭಾರದ್ವಾಜ್ ಅವರು ಮೂರು ಪ್ರಶ್ನೆಗಳಿಗೆ ಉತ್ತರವನ್ನು ಬಯಸಿ ಆರ್ ಟಿ ಐ ಅರ್ಜಿ ಕಳುಹಿಸಿದರು. ಅದಕ್ಕೆ ಉತ್ತರಿಸಿರುವ ಕೇರಳ ಪೊಲೀಸ್, ಮೊದಲ ಪ್ರಶ್ನೆಗೆ ನೀಡಿರುವ ಉತ್ತರದ ಮಾಹಿತಿಯ ಪ್ರಕಾರ 2019ರ ಜನವರಿ ಯಿಂದ 2023ರ ಡಿಸೆಂಬರ್ 31ರವರೆಗೆ ಕೇರಳದಲ್ಲಿ ದಾಖಲಾಗಿರುವ ಒಟ್ಟು ಹುಡುಗಿಯರ ನಾಪತ್ತೆ ಪ್ರಕರಣಗಳ ಸಂಖ್ಯೆ 5338 ಆಗಿದೆ. ಎಂದು ತಿಳಿಸಿದೆ.
ಇನ್ನುಳಿದ ಎರಡು ಪ್ರಶ್ನೆಗಳಿಗೆ ‘ಈ ಮಾಹಿತಿಯು ಆರ್ ಟಿ ಐ ಕಾಯಿದೆಯ ದಾಖಲೆ 2(f) ನಂತೆ ಲಭ್ಯವಿರುವುಲ್ಲ. ಆದ್ದರಿಂದ, ಈ ಮಾಹಿತಿಯು ನಿಮಗೆ ಲಭ್ಯವಿರುವುದಿಲ್ಲ’ ಎಂಬುದಾಗಿ ತಮ್ಮ ಉತ್ತರವನ್ನು ಪತ್ರದಲ್ಲಿ ತಿಳಿಸಿದ್ದಾರೆ.