ಭಾರತ ಪರಿಕ್ರಮ ಯಾತ್ರೆ

ಉಡುಪಿ October 30 2012: ರಾಷ್ಟ್ರ ಪ್ರೇಮ, ಏಕತೆ, ಗಾ್ರಮೀಣ ಪ್ರಗತಿ, ಸಂಸ್ಕತಿ ಉಳಿಸಲು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆರಂಭವಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಸೀತಾರಾಮ ಕೆದಿಲಾಯರ ಭಾರತ ಪರಿಕ್ರಮ ಯಾತ್ರೆ 83ನೇ ದಿನಕ್ಕೆ ಕಾಲಿಟ್ಟಿದೆ. ಮಂಗಳವಾರ ಉಡುಪಿಗೆ ಆಗಮಿಸಿದ ಕೆದಿಲಾಯರನ್ನು ಜನತೆ ಆದರದಿಂದ ಸ್ವಾಗತಿಸಿದರು.

ಭಾರತ ಪರಿಕ್ರಮ ಯಾತ್ರೆ

ಕೆದಿಲಾಯರು ಪಾಂಗಳದಲ್ಲಿ ಮುಂಜಾನೆ ಗೋ ಪೂಜೆ ಸಲ್ಲಿಸಿ ನಡಿಗೆಯನ್ನು ಆರಂಭಿಸಿ ಕಟಪಾಡಿ, ಉದಾ್ಯವರ, ಅಂಬಲಪಾಡಿ, ಕರಾವಳಿ ವೃತ್ತ, ಆದಿವುಡುಪಿಯ ಮಧ್ವನಗರಕ್ಕೆ ತಲುಪಿದರು. ದಾರಿಯುದ್ದಕ್ಕೂ ಅಲ್ಲಲ್ಲಿ ಜನರು ಯಾತ್ರೆಯನ್ನು ಆರತಿ ಮಾಡುವ ಮೂಲಕ ಸಾ್ವಗತಿಸಿದರು. ನಗರ ಪ್ರವೇಶಿಸಿದ ಪರಿಕ್ರಮಯಾತ್ರೆಯನ್ನು ಅಂಬಲಾಡಿ ಜಂಕ್ಷನ್‌ ಬಳಿ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ.ಬೀ.ವಿಜಯ ಬಲ್ಲಾಳ್‌ ಅವರು ಸಾ್ವಗತಿಸಿದರು. ಆದಿವುಡುಪಿಯ ಸರ್ಕಾರಿ ಶಾಲೆಯಲ್ಲಿ ತೆಂಗಿನ ಸಸಿಯನ್ನು ನೆಟ್ಟ ಕೆದಿಲಾಯರು, ಅಲ್ಲಿನ ವಿದಾ್ಯರ್ಥಿಗಳಿಗೆ ಪರಿಸರ ಪಾಠವನ್ನು ಹೇಳಿದರು.

ಗೋವು, ಮರ, ಪರಿಸರ ನಮಗೆ ಆಶ್ರಯ ನೀಡುತ್ತದೆ. ಅಲ್ಲದೇ ಕೊಡುವುದನ್ನು ಕಲಿಸುತ್ತದೆ. ಪರಿಸರವನ್ನು ರಕ್ಷಿಸಲು ಕನಿಷ್ಟ ವಾರಕ್ಕೆ ಒಂದಾದರೂ ಸಸಿಯನ್ನು ನೆಡಬೇಕು. ಅದಕ್ಕೆ ಸಾವಯವ ಗೊಬ್ಬರವನ್ನು ಹಾಕಬೇಕು, ಸರಿಯಾದ ಆರೈಕೆ ಮಾಡಬೇಕು. ವಿಷಯುಕ್ತ ರಾಸಾಯನಿಕ ಗೊಬ್ಬರಗಳನ್ನು ಬಳಸಿದರೆ, ನಮಗೆ ನೀಡುವ ಫಲ ಕೂಡ ವಿಷಪೂರಿತವಾಗಿರುತ್ತದೆ. ಗಿಡಗಳನ್ನು ನೆಡುವಾಗಲೇ ಯಾವುದೋ ಗಿಡಗಳನ್ನು ನೆಡುವ ಬದಲು, ಹಣ್ಣಿನ ಅಥವಾ ಔಷಧೀಯ ಗಿಡಗಳನ್ನು ನೆಡಬೇಕು. ಗಾ್ರಮೀಣ ಪರಿಸರ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಅಲ್ಲಿಂದ ಮೂಡಬೆಟ್ಟು, ಮಧ್ವನಗರದ ಮಣಿಕಂಠ ಅವರ ಮನೆಗೆ ತೆರಳಿದ ಕೆದಿಲಾಯರನ್ನು ಮನೆಯವರು ಪಾದಪೂಜೆ ಮಾಡುವ ಬಳಿಕ ಬರಮಾಡಿಕೊಂಡರು.
ಯಾತ್ರೆಯಲ್ಲಿ RSS ದಕ್ಷಿಣ ಮಧ್ಯ  ಕ್ಷೇತ್ರೀಯ  ಪ್ರಚಾರಕ ಪ್ರಮುಖ್‌ ದಾ.ಮ. ರವೀಮದ್ರ, ಕರ್ನಾಟಕ ಪಾರಂತ ಪ್ರಚಾರ ಪ್ರಮುಖ್‌  ಚಂದ್ರಶೇಖರ ಭಂಡಾರಿ, ವಕ್‌‌ಫ ಬೋರ್ಡ್‌ನ ಬುಡಾನ್‌ ಬಾಷಾ, ಹಿರಿಯರಾದ ಎಂ. ಸೋಮಶೇಖರ್‌ ಭಟ್‌, ಜಿಲ್ಲಾ ಸಂಘಚಾಲಕ್‌ ಶಂಭುಸೆಟ್ಟಿ, ನಗರ ಸಂಘಚಾಲಕ್‌ ಡಾ. ನಾರಾಯಣ ಶೆಣೈ, ವಿಹಿಂಪ ಅಧ್ಯಕ್ಷ ಸುಪ್ರಸಾದ್‌ ಶೆಟ್ಟಿ, ಶಾಸಕರಾದ ರಘುಪತಿ ಭಟ್‌, ಲಾಲಾಜಿ ಆರ್‌. ಮೆಂಡನ್‌, ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ಸತ್ಯಸಾಯಿ ವೇದಿಕೆಯ ದಿವಾಕರ ಶೆಟ್ಟಿ, ಜನಸೇವಾ ವಿದಾ್ಯಕೇಂದ್ರದ ನಿರ್ಮಲ ಕುಮಾರ್‌, ಬಜರಂಗದ ದಳದ ಗಿರೀಶ್‌, ಸಂಘದ ಕಾರ್ಯಕರ್ತ ಕೇಶವರಾಯ ಪ್ರಭು, ಹಿಂದೂ ಜೀವನದಿ ಪ್ರಮುಖ ಸುದರ್ಶನ ಶೆಟ್ಟಿ, ವಿಭಾಗ ಪ್ರಚಾರಕ ಸುಧಾಕರ, ಕರಾಮತ್‌ ಆಲಿ, ಮಣಿಕಂಠ, ಪಾಂಡುರಂಗ ಮಲ್ಪೆ, ಜಯಂತಿ ಪ್ರಭು ಮಣಿಪಾಲ, ದೇವೇಂದ್ರ ಪ್ರಭು, ಉಸಾ್ಮನ್‌ ಕೊಯಾಲಿ ಮೊದಲಾದವರು  ಪಾಲ್ಗೊಂಡರು.

Leave a Reply

Your email address will not be published.

This site uses Akismet to reduce spam. Learn how your comment data is processed.