Nagpur: Rashtra Sevika Samiti, women wing of RSS has lost its former Pramukha Sanchalika Ushatai Chati. She passed away yesterday, 17 Aug 2017 in Nagpur. She was 91. Being a member in Rashtra Sevika Samiti from her childhood days, she was entrusted upon with many responsibilities in the organization and she was the Pramukha Sanchalaki (Top most responsibility) of the organization from 1994 till 2006.


The funeral procession will start from Devi Ahilya Mandir, Dhantoli, at 10.30 am on Friday.
Born on Aug 31, 1927 , Ganesha Chaturthi in Bhandara, Vidarbha, she completed her primary education there. After marriage with Gunawant Chati, also an RSS Swayamsevak, she settled in Nagpur and  taught in Hindu Mulinchi Shala. She founded the Vagmita Vikas Samiti and held the post of its president for 30 years. It used to organize cultural programs for students. Ushatai was jailed during the days of Emergency in 1975

She was gifted with a sweet melodious voice and was also hosting the music programs and rendering her voice for songs which were aired in Nagpur Akashvani for quite some time. As this clashed with her work for the Samiti, she chose to serve in Samiti and gave up her musical career.

Ushatai was awarded Rashtriya Ekatmata Puraskar By the Joshi Foundation, Vivekananda Puraskar By the Dombivali Swami Vivekananda Educational Trust and Ojaswini award from Bhopal.

 Aug 31 1927 : Birth at Bhandara, Vidarbha
1948: Married to Sri Gunawant Chati
1970 : Akhil Bharatiya Geet Pramukh
1977 : Samiti Incharge of UttarPradesh
1984: SahPramukh Sanchalika
1991: Central Trustee, VHP
1994- 2006 – Pramukha Sanchalika
Funeral procession at Nagpur :
RSS Sarakaryavah Suresh Bhaiyyaji Joshi, Rashtra Sevika Samiti’s Pramukh Sanchalika V Shantha Kumari, Former Pramukh Sanchalika Pramila Tayi Medhe, hundreds of Sevikas paid rich tributes to Usha Tayi Chati at Nagpur.

ರಾಷ್ಟ್ರ‍ೀಯ ಸ್ವಯಂಸೇವಕ ಸಂಘದ ಮಹಿಳಾ ಘಟಕವೇ ರಾಷ್ಟ್ರ ಸೇವಿಕಾ ಸಮಿತಿ. ಸಮಿತಿಯ ಮೂರನೆಯ ಪ್ರಮುಖ ಸಂಚಾಲಿಕಾ (ಅತ್ಯುನ್ನತ ಹುದ್ದೆ) ಆಗಿದ್ದ ಉಷಾತಾಯಿ ಚಾಟಿಯವರು ಆಗಸ್ಟ್ ೧೭ ೨೦೧೭ರಂದು ನಾಗಪುರದಲ್ಲಿ ಕೊನೆಯುಸಿರೆಳೆದರು. ಅವರಿಗೆ ೯೧ ವರ್ಷವಯಸ್ಸಾಗಿತ್ತು. ಉಷಾತಾಯಿಜೀ ೧೯೯೪ರಿಂದ ೨೦೦೬ರವರೆಗೆ ಸಮಿತಿಯ ಅತ್ಯುನ್ನದ ಹುದ್ದೆಯನ್ನು ನಿರ್ವಹಿಸಿ ಮಾರ್ಗದರ್ಶನ ಮಾಡಿದ್ದರು. ವಿದರ್ಭದ ಭಂಡಾರ ಎಂಬಲ್ಲಿ ಗಣೇಶ ಚತುರ್ಥಿಯ ದಿನ ಜನಿಸಿದ ಉಷಾತಾಯಿ ತಮ್ಮ ವಿದ್ಯಾಭ್ಯಾಸವನ್ನು ವಿದರ್ಭದಲ್ಲಿ ಮುಗಿಸಿದರು. ವಿದ್ಯಾಭ್ಯಾಸದ ನಂತರ ಅಲ್ಲಿಯ ಒಂದು ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ವಿವಾಹಾನಂತರ ನಾಗಪುರಕ್ಕೆ ಬಂದು ನೆಲೆಸಿದ ಉಷಾತಾಯಿ ನಗರದ ಶಾಲೆಯಲ್ಲಿ ಪಾಠಮಾಡುತ್ತಿದ್ದರು. ಇವರನ್ನು ವರಿಸಿದವರು ಶ್ರೀ ಗುಣವಂತ ಚಾಟಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು.

ಚಿಕ್ಕ ವಯಸ್ಸಿನಿಂದಲೂ ಸಮಿಯ ಚಟುವಟಿಕೆಯಲ್ಲಿ ತೊಡಗಿದ್ದ ಇವರು ಸಮಿತಿಯ ಅನೇಕ ಉನ್ನತ ಹುದ್ದೆಗಳಲ್ಲಿ ಕೆಲಸಮಾಡಿದ ಅನುಭವಿ. ೧೯೭೫ರಲ್ಲಿ ತುರ್ತುಪರಿಸ್ಥಿತಿಯ ಸಮಯದಲ್ಲಿ ಉಷಾತಾಯಿಯವರು ಸಕ್ರಿಯ ರಾಷ್ಟ್ರೀಯವಾದಿಯಾಗಿದ್ದರಿಂದ ಅವರನ್ನು ಬಂಧಿಸಲಾಗಿತ್ತು.

ಉಷಾತಾಯಿಯ ಮಧುರ ಕಂಠಸಿರಿ ಹೊಂದಿದ್ದರು. ನಾಗಪುರದ ಆಕಾಶವಾಣಿಯಲ್ಲಿ ಇವರ ಹಾಡುಗಳು ಪ್ರಸಾರಗೊಳ್ಳುತ್ತಿದ್ದವು. ಸಮಿತಿಯ ಕೆಲಸಕ್ಕೆ ಅಡ್ಡ ಬರುತ್ತಿದ್ದ ಆಕಾಶವಾಣಿಯ ಹಾಡುಗಾರಿಕೆಯನ್ನು ತೊರೆದು ಉಷಾತಾಯಿ ಸಂಪೂರ್ಣವಾಗಿ ಆಕಾಶವಾಣಿ ಹಾಡುಗಾರಿಕೆಯನ್ನು ನಿಲ್ಲಿಸಿಯೇಬಿಟ್ಟರು. ತಮ್ಮ ಸರ್ವಸ್ವವನ್ನೂ ಸಮಿತಿಯ ಕೆಲಸಗಳಿಗೆ ಮುಡಿಪಾಗಿಟ್ಟರು. ವಾಗ್ಮಿತಾ ವಿಕಾಸ ಸಮಿತಿ ಎಂಬ ಸಂಘಟನೆಯನ್ನೂ ಹುಟ್ಟುಹಾಕಿ ೩೦ ವರ್ಷಗಳ ಕಾಲ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಮಕ್ಕಳಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಈ ಸಂಘಟನೆ ಉತ್ತಮ ಕೊಡುಗೆ ನೀಡಿದೆ. ಜೋಷಿ ಪ್ರತಿಷ್ಠಾನ ಕೊಡಮಾಡುವ ರಾಷ್ಟ್ರೀಯ ಏಕಾತ್ಮತಾ ಪುರಸ್ಕಾರ, ದೋಂಬಿವಲಿ ಸ್ವಾಮಿ ವಿವೇಕಾನಂದ ಸಂಸ್ಥೆ ನೀಡುವ ವಿವೇಕಾನಂದ ಪುರಸ್ಕಾರ, ಭೋಪಾಲದ ಪ್ರತಿಷ್ಠಿತ ಓಜಸ್ವಿನಿ ಪುರಸ್ಕಾರಕ್ಕೆ ಇವರು ಭಾಜನರಾಗಿದ್ದರು.

ನಾಗಪುರದಲ್ಲಿ ನಡೆದ ಅಂತಿಮ ಸಂಸ್ಕಾರದಲ್ಲಿ ಅರ್‌ಎಸ್‍ಎಸ್ ನ ಸರಕಾರ್ಯವಾಹರಾದ ಸುರೇಶ್ ಭಯ್ಯಾಜಿ ಜೋಷಿ, ಸಮಿತಿಯ ಪ್ರಮುಖ ಸಂಚಾಲಿಕಾ ವಿ ಶಾಂತಕುಮಾರಿ, ನಿಕಟಪೂರ್ವ ಪ್ರಮುಖ ಸಂಚಾಲಿಕಾ ಪ್ರಮಿಳಾ ತಾಯಿ ಮೇಢೇ ಹಾಗೂ ನೂರಾರು ಸೇವಿಕಾ ಸದಸ್ಯರು ಪಾಲ್ಗೊಂಡರು.

ಸಂಘದ ಸರಸಂಘಚಾಲಕರಾದ ಮೋಹನ್ ಜೀ ಭಾಗವತ್ ಉಷಾತಾಯಿಜೀಯವರನ್ನು ‘ಆತ್ಮವಿಲೋಪಿ ವ್ಯಕ್ತಿತ್ವ’ ಎಂದು ಬಣ್ಣಿಸಿದ್ದಾರೆ. ಪ್ರವಾಸದಲ್ಲಿರುವ ಅವರು ಹುಬ್ಬಳ್ಳಿಯ ಮಾತೃ ಮಂದಿರದಲ್ಲಿ ಉಷಾತಾಯಿಯ ನೆನಪಿನಲ್ಲಿ ಗಿಡವೊಂದನ್ನು ನೆಡುವಮೂಲಕ ಶ್ರದ್ಧಂಜಲಿ ಅರ್ಪಿಸಿದ್ದಾರೆ.

ಉಷಾತಾಯಿ ಜೀಯವರ ಜೀವನದ ಪ್ರಮುಖ ಘಟನಾವಳಿಗಳು

 

1927 ಜನನ
1948 ಗುಣವಂತ ಚಾಟಿಯವರೊಂದಿಗೆ ವಿವಾಹ
1970 ಅಖಿಲ ಭಾರತೀಯ ಗೀತ್ ಪ್ರಮುಖ
1977 ಸಮಿತಿಯ ಉತ್ತರ ಪ್ರದೇಶದ ಉಸ್ತುವಾರಿ
1984 ಸಹ ಪ್ರಮುಖ ಸಂಚಾಲಿಕಾ
1991 ಕೇಂದ್ರೀಯ ವಿಶ್ವಸ್ಥರು, ವಿಶ್ವ ಹಿಂದೂ ಪರಿಷತ್
1994 -2006 ಪ್ರಮುಖ ಸಂಚಾಲಿಕಾ

 

Leave a Reply

Your email address will not be published.

This site uses Akismet to reduce spam. Learn how your comment data is processed.