ಡಾ|| ಬಾಬಾಸಾಹೇಬ ಅಂಬೇಡ್ಕರ್ ಅವರ 125ನೇ ವರ್ಷಾಚರಣೆ ನಿಮಿತ್ತ ಉತ್ಥಾನ ಮಾಸಪತ್ರಿಕೆಯ ವಿಶೇಷಾಂಕವೊಂದನ್ನು ಹೊರತಂದಿದ್ದು, ಇದರ  ಲೋಕಾರ್ಪಣೆ ಕಾರ್ಯಕ್ರಮ ಇಂದು April 09, 2016 ಮಾದಾರ ಚೆನ್ನಯ್ಯ ಗುರುಪೀಠದಲ್ಲಿ ನಡೆಯಿತು.

April 02, 2016: RSS inspired Kannada Monthly UTTHAANA’s special issue on Dr BR Ambedkar was released by Madara Chennayya Swamiji at Chitradurga, Karnataka. RSS Prant Prachar Pramukh Vadiraj, Rashtrotthana Parishat’s General Secretary Dinesh Hegde, others were present.

AMBEDKAR SPECIAL ISSUE_UTTHANA

ಬೆಂಗಳೂರು: ಚಿತ್ರದುರ್ಗದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಶನಿವಾರ ಸಂಜೆ (ಏಪ್ರಿಲ್ 9ರಂದು) ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಶಾಂತವೀರ ಸ್ವಾಮೀಜಿಯವರು ಹಾಗೂ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಉತ್ಥಾನ ಮಾಸಪತ್ರಿಕೆ ಹೊರತಂದಿರುವ ‘ಡಾ|| ಬಾಬಾಸಾಹೇಬ ಅಂಬೇಡ್ಕರ್ 125’ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಸಾಮರಸ್ಯ ವೇದಿಕೆಯ ರಾಜ್ಯ ಸಂಚಾಲಕ ವಾದಿರಾಜ್ ಹಾಗೂ ಉತ್ಥಾನ ಮಾಸಪತ್ರಿಕೆಯ ವ್ಯವಸ್ಥಾಪಕ-ಸಂಪಾದಕ ನಾ. ದಿನೇಶ್ ಹೆಗ್ಡೆ ಅವರು ಉಪಸ್ಥಿತರಿದ್ದರು.
ಡಾ|| ಅಂಬೇಡ್ಕರ್ ಅವರ ಬದುಕು-ಬರಹ-ಚಿಂತನೆ ಹಾಗೂ ಅವರ ಪ್ರೇರಣೆಯಿಂದ ನಡೆದ ವಿವಿಧ ಮುಖಗಳ ಚಟುವಟಿಕೆಗಳು, ವಿವಿಧ ‘ವಾದ’ಗಳೊಂದಿಗೆ ಅಂಬೇಡ್ಕರ್ ಚಿಂತನೆಯ ಮುಖಾಮುಖಿ, ದಲಿತ ಸಮಾಜದ ನೋವು-ವಾಸ್ತವ ಹಾಗೂ ಮೀಸಲಾತಿಯ ಕುರಿತು ಉತ್ಥಾನ ಮಾಸಪತ್ರಿಕೆ ನಡೆಸಿರುವ ಸಮೀಕ್ಷೆ ಸೇರಿದಂತೆ ಡಾ|| ಬಾಬಾಸಾಹೇಬ ಅಂಬೇಡ್ಕರ್ ಅವರ ಕುರಿತ ಜೀವನದೃಷ್ಟಿಯ ವಿವಿಧ ಮುಖಗಳನ್ನು ಪರಿಚಯಿಸುವ ಸಮಗ್ರ ಬರಹಗಳನ್ನು ಈ ವಿಶೇಷ ಸಂಚಿಕೆಯಲ್ಲಿದೆ.
ಬೆಲೆ: ರೂ. ೫೦.೦೦
ಪ್ರತಿಗಳಿಗಾಗಿ ಸಂಪರ್ಕಿಸಿ: 
‘ಉತ್ಥಾನ’ ಮಾಸಪತ್ರಿಕೆ, ಕೆಂಪೇಗೌಡ ನಗರ, ಬೆಂಗಳೂರು – ೫೬೦ ೦೧೯, ದೂ: ೯೮೮೬೫೧೫೬೪೮

Leave a Reply

Your email address will not be published.

This site uses Akismet to reduce spam. Learn how your comment data is processed.