Bengaluru: Vanavasi Kalyana Karnataka held Press Conference recently related to their activities in next couple of months.
 
About VKK: RSS Inspired Organization for Tribal welfare, Akhil Bharateeya Vanvasi Kalyan Ashram (ABVKA) wasestablished in 1952 and is aiming at the overall/holistic development of the Vanavasis. Vanavasi Kalyana Karnataka (VKK), started in 1988, is rationally linked to ABVKA. It has a department working for the conservation and welfare of the Vanavasis by addressing the various problems faced by Vanavasis. In 2017-18, district level conferences are being organized across the country keeping in mind/address the problems of the Vanavasis.

The total population of India, which is equally unique to nationality, languages, food systems, costumes and occupations can be roughly identified in three categories as urbanites, villagers and Vanavasis(Tribes). Of these, 700 sects of Vanavasis (tribes) are spread over 11 crore population in all the states of India. There are about 50 lakh vanavasis of 57 sects in Karnataka alone.

Although they live in different situations according to their respective areas, most of the problems they are facing today are common, like the ones listed below:

1. Though being our neighbours, they still remain as a separate tribe.
2. Our urban population is not aware of their presence.
3. They are not having access to the basic infrastructure like proper houses, roads, hospitals, schools etc.
4. They are facing the problems like poverty, malnutrition, and illnesses.
5. In Today’s competitive world, they are not able to get any kind of government facilities.
6. Exploitation by vested interests.
7. Pandemic of conversion.

In 2017-18, district level conferences are being organized across the country keeping in mind/address the problems of the Vanavasis. From November 2017 – January 2018 VKK is organizing 15 district level conferences at 15 districts of Karnataka where it is working with Vanavasis.  These conferences are being organized to find solutions to the daily challenges faced by Vanavasis in the respective district. Apart from the hardships discussed above, education to girl child, healthcare, etc to name some are ones which need to be highlighted to the society as well as governments. The conferences arranged would be for two days. First day would be to carryout a massive procession, followed by a meeting of the volunteers and planning on the next day.

Topics of discussion chalked out:

  1. Including groups like Danaragouli, Kumbri Marathi, Kunabi, Halakki Okkal, kareokkaliga into Scheduled Tribe section.
  2. Land Rights – Legalising the illegal lands
  3. Education to children
  4. Forest committee and participation of the Vanavasis in them
  5. Permissions grant to Vanavasis to sell the forest produce
  6. Help rendering to Vanavasis with respect to basic needs like road, transport, potable water, health, electricity, and protection from wild animals etc.

VKK  requests to have full support from the media in addressing this issue and support them  in their initiatives.

____________________________________________________________________________________________

ರಾಷ್ಟ್ರೀಯತೆಯ ಏಕ ಸೂತ್ರದಲ್ಲಿ ಪೋಣಿಸಲ್ಪಟ್ಟಿರುವ ಭಾರತದ ವಿವಿಧ ಪ್ರಾಂತಗಳು, ಭಾಷೆಗಳು ಆಹಾರ ಪದ್ಧತಿಗಳು, ವೇಷ ಭೂಷಣಗಳು ಮತ್ತು ಜೀವನಕ್ರಮಗಳುಳ್ಳ ಒಟ್ಟಾರೆ ಜನಸಮೂದಾಯವನ್ನು ನಗರವಾಸಿಗಳು, ಗ್ರಾಮ ವಾಸಿಗಳು ಮತ್ತು ವನವಾಸಿಗಳು ಎಂದು ಸ್ಥೂಲವಾಗಿ ಮೂರು ಪ್ರಕಾರಗಳಲ್ಲಿ ಗುರುತಿಸಬಹುದು.

ಈ ಪೈಕಿ ವನವಾಸಿಗಳು 700 ಪಂಗಡಗಳಲ್ಲಿ 11 ಕೋಟಿ ಜನರು ದೇಶದ ಎಲ್ಲಾ ರಾಜ್ಯಗಳಲ್ಲಿ ಹರಡಿಕೊಂಡಿದ್ದಾರೆ. ನಮ್ಮ ಕರ್ನಾಟಕದಲ್ಲಿ 57 ಪಂಗಡಗಳ 50 ಲಕ್ಷ ಜನರಿದ್ದಾರೆ.

ಆಯಾ ಪ್ರದೇಶಕ್ಕನುಗುಣವಾಗಿ ಅವರು ವಿಭಿನ್ನ ಸನ್ನಿವೇಶಗಳಲ್ಲಿ ಬದುಕುತ್ತಿರುವುದಾದರೂ ಅವರೆದುರಿಸುತ್ತಿರುವ ಸಮಸ್ಯೆಗಳ ಪೈಕಿ ಹೆಚ್ಚಿನವು ಸಾಮಾನ್ಯವಾಗಿವೆ. ಅವನ್ನು ಹೀಗೆ ಪಟ್ಟಿ ಮಾಡಬಹುದು.

  1. ನಮ್ಮ ಅಕ್ಕಪಕ್ಕದಲ್ಲೇ ಇದ್ದರೂ ಪ್ರತ್ಯೇಕ ಪಂಗಡವಾಗಿ ಉಳಿದಿರುವುದು.
  2. ನಮ್ಮ ನಗರವಾಸಿಗಳಿಗೆ ಇವರ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದಿರುವುದು.
  3. ಮನೆ ರಸ್ತೆ, ಆಸ್ಪತ್ರೆ, ಶಾಲೆ ಇತ್ಯಾದಿ ಕನಿಷ್ಟ ಮೂಲಭೂತ ಸೌಲಭ್ಯಗಳಿಲ್ಲದಿರುವುದು.
  4. ಸದಾ ಕಿತ್ತು ತಿನ್ನುವ ಬಡತನ, ಅಪೌಷ್ಠಿಕತೆ ಮತ್ತು ಅನಾರೋಗ್ಯಗಳೆಂಬ ನಿತ್ಯ ಸಂಕಷ್ಟಗಳು
  5. ಇಂದಿನ ಸ್ಪರ್ಧಾಯುಗದಲ್ಲಿ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಆಗದಿರುವುದು.
  6. ಪಟ್ಟಭದ್ರ ಹಿತಾಸಕ್ತಿಗಳಿಂದ ಶೋಷಣೆ.
  7. ಮತಾಂತರದ ಪಿಡುಗು.

1952ರಲ್ಲಿ ಅಸ್ಥಿತ್ವಕ್ಕೆ ಬಂದ ಅಖಿಲ ಭಾರತೀಯ ಕಲ್ಯಾಣಾಶ್ರಮವು ವನವಾಸಿಗಳ ಸರ್ವಾಂಗೀಣ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು ಕೆಲಸ ಮಾಡುತ್ತಿದೆ. 1988ರಲ್ಲಿ ಜನ್ಮತಾಳಿದ ವನವಾಸಿ ಕಲ್ಯಾಣ ಕರ್ನಾಟಕ ಅಖಿಲಭಾರತೀಯ ಸಂಘಟನೆಗೆ ವೈಚಾರಿಕವಾಗಿ ಸಂಲಗ್ನಗೊಂಡಿದೆ. ಅದು ವನವಾಸಿಗಳ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಕೆಲಸ ಮಾಡಲೆಂದೇ “ಹಿತರಕ್ಷಣಾ ಆಯಾಮ” ಎಂಬ ವಿಭಾಗವನ್ನು ಹೊಂದಿದ್ದು, ಈ ವರ್ಷ  ವನವಾಸಿಗಳ ಸಮಸ್ಯೆಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ದೇಶದಾದ್ಯಂತ ಜಿಲ್ಲಾ ಮಟ್ಟದ ಸಮ್ಮೇಳನಗಳನ್ನು ಆಯೋಜಿಸುತ್ತಿದೆ. ಕರ್ನಾಟಕದ ೧೫ ಜಿಲ್ಲೆಗಳಲ್ಲಿ ವನವಾಸಿಗಳ ಕಲ್ಯಾಣ, ಹಾಗೂ ಅವರ ಸಮಸ್ಯೆಗಳನ್ನು ಆಲಿಸುವ ಬಗ್ಗೆ ೧೫ ಗೋಷ್ಠಿಗಳನ್ನು ಆಯೋಜಿಸಲಾಗಿದೆ.

ಮೇಲೆ ವಿವರಿಸಿದ ಸಮಸ್ಯೆಗಳಲ್ಲದೇ ಹೆಣ್ಣುಮಕ್ಕಳಿಗೆ ಶಿಕ್ಷಣ, ಆರೋಗ್ಯ, ಇತ್ಯಾದಿ ಆಯಾಜಿಲ್ಲೆಯ ಸಮಸ್ಯೆಗಳನ್ನು ಸರಕಾರ ಹಾಗೂ ಸಮಾಜದ ಗಮನಕ್ಕೆ ತರುವ ಪ್ರಯತ್ನ ಮಾಡಲಾಗುತ್ತದೆ.ಸಮ್ಮೇಳನದ ಸ್ವರೂಪ ೨ (ಎರಡು) ದಿನ ಇರುತ್ತದೆ. ಮೊದಲ ದಿನ ಸಾರ್ವಜನಿಕವಾಗಿ ಬೃಹತ್ ಮೆರವಣಿಗೆ ಶೋಭಾಯಾತ್ರೆ ಹಾಗೂ ಸಭೆ,ಎರಡನೇ ದಿನ ಕಾರ್ಯಕರ್ತರ ಬೈಠಕ್ (ಸಭೆ) ಅನುವರ್ತಿಕಾರ್ಯದ ಯೋಜನೆಯನ್ನು ಮಾಡಲಾಗುತ್ತದೆ.

ಈ ಕೆಲಕಂಡ ವಿಷಯಗಳ ಬಗ್ಗೆ ಸುದೀರ್ಗ ಯೋಜನೆಯನ್ನು ರೂಪಿಸಲಾಗುವುದು:

  1. ಅನುಸೂಚಿತ ಜನಜಾತಿ (ಶೆಡ್ಯೂಲ್ಡ್ ಟ್ರೈಬಲ್)ಗೆ ಸೆರ್ಪಡೆ ಉದಾ: ದನಗರಗೌಳಿ, ಕುಂಬ್ರಿ ಮರಾಠಿ, ಕುಣಬಿ, ಹಾಲಕ್ಕಿ ಒಕ್ಕಲ್, ಕರೆಒಕ್ಕಲಿಗ ಇತ್ಯಾದಿ ಪಂಗಡಗಳನ್ನು ಪಟ್ಟಿಗೆ ಸೇರಿಸುವ ಕುರಿತು.
  2. ಭೂಮಿ ಹಕ್ಕು, ಅಕ್ರಮ – ಸಕ್ರಮ,
  3. ಮಕ್ಕಳಿಗೆ ಜೀವನ ಶಿಕ್ಷಣ ನೀಡುವುದು.
  4. ಗ್ರಾಮ ಅರಣ್ಯ ಸಮಿತಿಯ ರಚನೆ, ಅದರಲ್ಲಿ ವನವಾಸಿಗಳ ಸೇರ್ಪಡೆ.
  5. ಅರಣ್ಯೋತ್ಪನ್ನಗಳನ್ನು ತೆಗೆದು ಮಾರಾಟವನ್ನು ಮಾಡಲು ಅನುಮತಿ.
  6. ಮೂಲಭೂತ ಸೌಕರ್ಯಗಳನ್ನು ಒದಗಿಸುವುದು. ಉದಾ: ರಸ್ತೆ, ಸಾರಿಗೆ, ಶುದ್ಧ ನೀರು,ಆರೋಗ್ಯ ಹಾಗೂ ಬೆಳಕು ಮತ್ತು ವನ್ಯಪ್ರಾಣಿಗಳಿಂದ ರಕ್ಷಣೆ.

       
ನಮ್ಮ ಶಿರಸಿ ಜಿಲ್ಲಾ ವನವಾಸಿಗಳ ಸಮ್ಮೇಳನವನ್ನು ಇದೇ ಅಕ್ಟೋಬರ್ 27ರಂದು ಯಲ್ಲಾಪುರದಲ್ಲಿ ಜರುಗಿಸಲಾಗುವುದು. ಸುಮಾರು 1000 ಜನ ವನವಾಸಿಗಳು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ನಮ್ಮ ಜಿಲ್ಲೆಯಲ್ಲಿಯೂ ವನವಾಸಿಗಳು ಹಲವಾರು ಕಠಿಣ ಸವಾಲುಗಳನ್ನು ಎದುರಿಸುತ್ತಿದ್ದು ಅವುಗಳಿಗೆ ಸಮರ್ಪಕ ಉತ್ತರ ಕಂಡುಹಿಡಿಯುವ ನಿಟ್ಟಿನಲ್ಲಿ ಗೋಷ್ಠಿಗಳನ್ನು ಆಯೋಜಿಸಲಾಗುತ್ತಿದೆ.

ಇದರಲ್ಲಿ ಹೆಚ್ಚಿನ ವನವಾಸಿಗಳು ಭಾಗವಹಿಸುರವ ನಿರೀಕ್ಷೆಯಿದೆ.  ವನವಾಸಿಗಳು ಹಲವಾರು ಕಠಿಣ ಸವಾಲುಗಳನ್ನು ಎದುರಿಸುತ್ತಿದ್ದು, ಅವುಗಳಿಗೆ ಸಮರ್ಪಕ ಉತ್ತರ ಕಂಡುಹಿಡಿಯುವ ನಿಟ್ಟಿನಲ್ಲಿ ಗೋಷ್ಠಿಗಳನ್ನು ಆಯೋಜಿಸಲಾಗುತ್ತಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.