ವಿಶ್ವ ಹಿಂದೂ ಪರಿಷತ್ ಕರ್ನಾಟಕ

ಹುಬ್ಬಳ್ಳಿ 19 ಜುಲೈ 2019: ಹಂಪಿ – ಹೊಸಪೇಟೆ ಆನೆಗುಂದಿ ಸಮೀಪದ ನವಬೃಂದಾವನ ಗಡ್ಡೆಯಲ್ಲಿರುವ ವ್ಯಾಸರಾಜರ ಮೂಲ ಬೃಂದಾವನವನ್ನು ದಿನಾಂಕ ಜುಲೈ 17ರ ರಾತ್ರಿ ದುಷ್ಕರ್ಮಿಗಳು ಧ್ವಂಸಗೊಳಿಸಿರುವ ಘಟನೆ ಆಘಾತಕಾರಿಯಾಗಿದೆ. ವಿಶ್ವ ಹಿಂದೂ ಪರಿಷತ್ ಈ ಕೃತ್ಯವನ್ನು ಉಗ್ರವಾಗಿ ಖಂಡಿಸುತ್ತದೆ.
ನವಬೃಂದಾವನ ಗಡ್ಡೆಯು ಹಂಪಿ ಪ್ರಾಧಿಕಾರದ ಕ್ಷೇತ್ರವ್ಯಾಪ್ತಿಯಲ್ಲಿದ್ದು ಪುರಾತತ್ತ್ವ ಇಲಾಖೆಯ ಸಂರಕ್ಷಿತ ಸ್ಮಾರಕಗಳಲ್ಲಿ ಒಂದಾಗಿದೆ. ಹಿಂದೂ ಸಮಾಜದ ಶ್ರದ್ಧಾ ಕೇಂದ್ರಗಳಾಗಿರುವ ಈ ಪುಣ್ಯ ಸ್ಮಾರಕವನ್ನು ಸಂರಕ್ಷಿಸುವುದು ಸರ್ಕಾರದ ಹಾಗೂ ಹಂಪಿ ಪ್ರಾಧಿಕಾರದ ಆದ್ಯ ಕರ್ತವ್ಯವಾಗಿದೆ.
ಇಂತಹ ಪವಿತ್ರ ಸ್ಮಾರಕಗಳು ಕಿಡಗೇಡಿಗಳಿಂದ ಧ್ವಂಸಗೊಳ್ಳಲು ಇಲಾಖೆಗಳ ನಿರ್ಲಕ್ಷ್ಯವೇ ಕಾರಣವೇಂಬುವುದರಲ್ಲಿ ಸಂದೇಹವಿಲ್ಲ.
ಸರ್ಕಾರ, ಆಡಳಿತ ಹಾಗೂ ಸಂಬಂಧಿತ ಇಲಾಖೆಗಳು ಮುಂದೆ ಇಂತಹ ಕೃತ್ಯ ನಡೆಯದಂತೆ ವಿಶೇಷ ರಕ್ಷಣೆ ನೀಡಬೇಕೆಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸುತ್ತದೆ. ದುಷ್ಕೃತ್ಯವೆಸಗಿದವರನ್ನು ಪತ್ತೆಹಚ್ಚಿ ಶಿಕ್ಷೆಗೆ ಗುರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದೂ ಹಾಗು ಬೃಂದಾವನವನ್ನು ಪುನರ್ ನಿರ್ಮಿಸಿ ಅದರ ಶ್ರದ್ದೆ, ಪಾವಿತ್ರ್ಯತೆಯನ್ನು ಕಾಪಾಡಬೇಕೆಂದು ಈ ಮೂಲಕ ವಿಶ್ವ ಹಿಂದೂ ಪರಿಷತ್ ಆಗ್ರಹಿಸುತ್ತದೆ.

ಕೇಶವ ಹೆಗಡೆ
ಕ್ಷೇತ್ರ ಸಂಘಟನಾ ಕಾರ್ಯದರ್ಶಿ,

ವಿಶ್ವ ಹಿಂದೂ ಪರಿಷತ್.

Picture of the Brindavana descreted by miscreants on 18th July (picture from the internet)

Leave a Reply

Your email address will not be published.

This site uses Akismet to reduce spam. Learn how your comment data is processed.