ದೆಹಲಿ ಗುಣಮಟ್ಟದ ತರಬೇತಿಯನ್ನು ಹುಬ್ಬಳ್ಳಿಯಲ್ಲಿ ಸೃಷ್ಟಿಸುತ್ತಿರುವ ಸಮುತ್ಕಷ೯: ಡಾ.ವಿಜಯ ಸ೦ಕೇಶ್ವರ
ದೆಹಲಿ ಗುಣಮಟ್ಟದ ತರಬೇತಿಯನ್ನು ಹುಬ್ಬಳ್ಳಿಯಲ್ಲಿ ಸೃಷ್ಟಿಸುವ ಮೂಲಕ ಮುಖ್ಯವಾಗಿ ಉತ್ತರಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ‘ಸಮುತ್ಕರ್ಷ’ ಸಂಸ್ಥೆ ಆಶಾಕಿರಣವಾಗಿ ಮಾರ್ಪಾಡಗುತ್ತಿದೆ. ಅಲ್ಲದೇ ಕಳೆದ ವರ್ಷಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಮುತ್ಕರ್ಷದಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳು ತೇರ್ಗಡೆಯಾಗಿರುವುದು ಸಮುತ್ಕರ್ಷದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ವಿ.ಆರ್.ಎಲ್.ಸಮೂಹ ಸಂಸ್ಥೆಗಳ ಅಧ್ಯಕ್ಷ ವಿಜಯ ಸಂಕೇಶ್ವರ ಹೇಳಿದರು.
ಅವರು ಹುಬ್ಬಳ್ಳಿಯಲ್ಲಿ ನಡೆದ ಸಮುತ್ಕರ್ಷ ಐ.ಎ.ಎಸ್. ಅಕಾಡೆಮಿಯ ಎರಡನೇ ಬ್ಯಾಚ್ ನ ಪರೀಕ್ಷಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ನಾಗರೀಕ ಸೇವೆಯಲ್ಲಿನ ಅಧಿಕಾರಗಳು ಸಾಮಾನ್ಯರಲ್ಲಿ ಆಸೆಯನ್ನು ಹುಟ್ಟುಹಾಕುವುದು ಸಹಜ. ವಿಧ್ಯಾರ್ಥಿಗಳು ಈ ಆಸೆಯ ಗುಂಗಿಗೆ ಬೀಳದೇ ಸಮಾಜಮುಖಿಯಾಗಿ ಕೆಲಸಮಾಡುವಂತಾಗಬೇಕು. ಋಣಾತ್ಮಕ ಶಕ್ತಿಗಳಿಗೆ ಬಲಿಯಾಗಬಾರದು. ಸತತ ಪರಿಶ್ರಮ. ಶ್ರದ್ಧೆ ಹಾಗೂ ಸಶಕ್ತವಾದ ಮನೋಬಲ ಇಚ್ಛಾಶಕ್ತಿ ಇದ್ದರೆ ಯಾವುದೇ ಕಷ್ಟಗಳನ್ನಾದರೂ ಮೆಟ್ಟಿನಿಲ್ಲಬಹುದು.ಪರಿಕ್ಷಾರ್ಥಿ ಗಳು ಈ ನಿಟ್ಟಿನಲ್ಲಿ ಸಮಾಜದಕ್ಕಿ ಬದಲಾವಣೆ ತರುವಂಥ ಭವಿಷ್ಯದ ಅಧಿಕಾರ ವರ್ಗ ಸೃಷ್ಟಿಸುವತ್ತ ಗಮನ ಹರಿಸಬೇಕು ಎಂದು ಅಭಿಪ್ರಾಯಪಟ್ಟರು.
ಅತಿಥಿಗಳಾಗಿ ಆಗಮಿಸಿದ್ದ ರಾ.ಸ್ವ.ಸಂಘದ ಕರ್ನಾಟಕ ಉತ್ತರ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ ಮಾತನಾಡಿ ದೇಶದ ಎಲ್ಲ ಅಭಿವೃದ್ಧಿ ಕಾರ್ಯಗಳೂ ಕಾರ್ಯಾಂಗದ ಸಕ್ರಿಯತೆಯ ಮೇಲೆಯೇ ಅವಲಂಬಿತವಾಗಿರುತ್ತದೆ.ಹಾಗಾಗಿ ದೇಶನಿರ್ಮಾಣಕಾರ್ಯದಲ್ಲಿ ಕಾರ್ಯಾಂಗದ ಪಾತ್ರ ಮುಖ್ಯವಾದದ್ದು. ಪರೀಕ್ಷಾರ್ಥಿ ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಸಾಧನೆಯ ಹಾದಿಯಲ್ಲಿ ಸಾಗಬೇಕಿದೆ ಎಂದು ಹೇಳಿದರು. ಈ ರೀತಿ ಸಮಾಜಮುಖಿ ಅಧಿಕಾರಿ ವರ್ಗವನ್ನು ಸೃಷ್ಟಿಸುವ ಘನ ಉದ್ದೇಶದೊಂದಿಗೆ ಸಮುತ್ಕರ್ಷ ಸಂಸ್ಥೆ ಕಾರ್ಯನಿರತವಾಗಿದೆ. ಕೇವಲ ಪರೀಕ್ಷಾ ದೃಷ್ಟಿಯಿಂದ ಮಾತ್ರವಲ್ಲದೇ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ ಸಮುತ್ಕರ್ಷದ ಉದ್ದೇಶ. ಪ್ರಸ್ತುತ ಎರಡನೇ ಬ್ಯಾಚ್ ನ ವಿಧ್ಯಾರ್ಥಿಗಳು ಸಾಗಬೇಕಿರುವ ಹಾದಿ ಕಠಿಣವಾಗಿದೆ. ನಿರಂತರ ಪರಿಶ್ರಮ ಇದ್ದರೆ ಯಶಸ್ಸು ಸಿಗುತ್ತದೆ. ಸಮಾಜಕ್ಕೆ ಉಪಯೋಗವಾಗುವಂತ ಕಾರ್ಯಗಳ ಮೂಲಕ ಪರೀಕ್ಷಾರ್ಥಿಗಳು ದೇಶಸೇವೆಯಲ್ಲಿ ತೊಡಗಬೇಕು ಎಂದು ಹೇಳಿದರು.
ಅಧ್ಯಕ್ಷರಾದ ಅಚ್ಯುತ್ ಲಿಮಯೆ, ಕಾಯ೯ದಶಿ೯ಗಳಾದ ನಾರಾಯಣ ಶಾನಭಾಗ, ಜಿತೇ೦ದ್ರ ನಾಯಕ, ಶಿವಾನ೦ದ ಆವಟಿ, ಸುಧಾಕರ, ಸ೦ತೋಷ ಕೆಲೊಜಿ, ಮಕ್ಕಳು ಮತ್ತು ಪಾಲಕರು ಉಪಸ್ಥಿತರಿದ್ದರು.