
ಮೈಸೂರು : ಹುಣಸೂರು ಪಟ್ಟಣದ ಪಕ್ಕದಲ್ಲೇ ಇರುವ ಗೋವಿಂದನಹಳ್ಳಿ ಎಂಬ ಗ್ರಾಮಕ್ಕೆ ಬಂದಿದ್ದ ಇಬ್ಬರು ಕ್ರೈಸ್ತ ಪಾದ್ರಿಗಳು ಬಲವಂತ ಮತಾಂತರಕ್ಕೆ ಯತ್ನಿಸಿದ್ದು, ಗ್ರಾಮದ ಹಿಂದುಗಳೆಲ್ಲ ಒಗ್ಗಟ್ಟಾಗಿ ಅವರನ್ನ ಪೊಲೀಸರಿಗೆ ಒಪ್ಪಿಸಿ,ಹಿಂದೂ ಜಾಗರಣ ವೇದಿಕೆಗೆ ವಿಷಯ ತಿಳಿಸಿದ್ದಾರೆ.




ಈ ಬಗೆಗೆ ಇಡೀ ಗ್ರಾಮ ಹಾಗೂ ಜಾಗರಣ ವೇದಿಕೆಯ ಕಾರ್ಯಕರ್ತರು ಸೇರಿ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಗಿದೆ. ತದನಂತರ ಗ್ರಾಮಸ್ಥರ ಜೊತೆ ಸಭೆ ಸೇರಿ ಮುಂದಿನ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ.
ಹಿಂದು ಜಾಗರಣ ವೇದಿಕೆಯ ಪ್ರಾಂತ ಸಹಸಂಚಾಲಕರಾದ ಲೋಹಿತ್ ಅರಸ್ ಹಾಗೂ ಜಿಲ್ಲಾ ಸಂಚಾಲಕ ಲಕ್ಷ್ಮೀ ನಾರಾಯಣ್ ಉಪಸ್ಥಿತರಿದ್ದರು.