ಭೋಪಾಲ್ :  ವಿಶ್ವದ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸಾಗರೋತ್ತರ ಭಾರತೀಯ ಸ್ವಯಂಸೇವಕರ 21 ದಿನಗಳ ಅನಿವಾಸಿ ವರ್ಗದ ಕಾರ್ಯಕ್ರಮವು ಜುಲೈ 17 ರ ಭಾನುವಾರದಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ಶ್ರೀ ದತ್ತಾತ್ರೇಯ ಹೊಸಬಾಳೆ ಅವರು ದೀಪ ಬೆಳಗಿಸುವುದರೊಂದಿಗೆ ಪ್ರಾರಂಭವಾಯಿತು. ‘ಶ್ರೀ ವಿಶ್ವ ನಿಕೇತನ’ದ ಆಶ್ರಯದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವು ಭೋಪಾಲ್‌ನ ಬನ್ಸಾಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಆಗಸ್ಟ್ 7 ರವರೆಗೆ ನಡೆಯಲಿದೆ.  ಈ ವರ್ಗಕ್ಕೆ ಭೋಪಾಲ್ ಮೂಲದ ಉತ್ತಮ್‌ಚಂದ್ ಇಸ್ರಾನಿ ಟ್ರಸ್ಟ್‌ನ ಸಹಯೋಗವಿದೆ.

ಉದ್ಘಾಟನಾ ಸಮಾರಂಭದಲ್ಲಿ ಸರಕಾರ್ಯವಾಹ ಶ್ರೀ ದತ್ತಾತ್ರೇಯ ಹೊಸಬಾಳೆ  ಅವರು ಮಾತನಾಡುತ್ತಾ ವಿವಿಧ ದೇಶಗಳ ಕಾರ್ಯಕರ್ತರನ್ನು ಸ್ವಾಗತಿಸಿ, ಎಲ್ಲಾ ಸ್ವಯಂಸೇವಕರು ವರ್ಗದ ಪ್ರಶಿಕ್ಷಣದಲ್ಲಿ ಶ್ರದ್ಧೆಯಿಂದ ಭಾಗವಹಿಸಿ ವಿವಿಧ ವಿಷಯಗಳಲ್ಲಿ ನಿಪುಣತೆಯನ್ನು  ಗಳಿಸಬೇಕೆಂದು ಸಲಹೆ ನೀಡಿದರು. ಇಂತಹ ವರ್ಗಗಳ ಸುದೀರ್ಘ ಇತಿಹಾಸವನ್ನು ಸ್ಮರಿಸಿದ ಅವರು, ಪರಸ್ಪರ ಒಟ್ಟಿಗೆ ಬದುಕುವ, ಅರ್ಥ ಮಾಡಿಕೊಳ್ಳುವ, ಸಾಮೂಹಿಕ ಚಿಂತನೆ ರೂಪಿಸುವ ಪ್ರಯತ್ನ ಈ ರೀತಿಯ ವರ್ಗಗಳಲ್ಲಿ ಒಡಮೂಡುತ್ತದೆ ಎಂದರು.  ಇಂತಹ ವರ್ಗವು ಭಗವದ್ಗೀತೆಯ ಸಂಕ್ಷಿಪ್ತ ಸಾರ ರೂಪವನ್ನು ಪರಿಗಣಿಸುತ್ತಾ, ಅದರ ಸಾರವನ್ನು ಶ್ರದ್ಧೆಯಿಂದ ತೆಗೆದುಕೊಳ್ಳುವಂತೆ ಕರೆ ನೀಡಿದರು.

  ಈ ಕಾರ್ಯಕ್ರಮದಲ್ಲಿ ಮಧ್ಯಭಾರತ ಪ್ರಾಂತದ ಸಂಘಚಾಲಕರಾದ ಶ್ರೀ ಅಶೋಕ್ ಪಾಂಡೆ, ಭೋಪಾಲ್ ವಿಭಾಗ ಸಂಘಚಾಲಕ ಡಾ.ರಾಜೇಶ್ ಸೇಠಿ, ಮುಂಬೈನ ವರ್ಗ ಕಾರ್ಯನಿರ್ವಾಹಕ ಡಾ.ಸತೀಶ್ ಮಾಡ್, ವಿಶ್ವ ವಿಭಾಗದ ಸಂಚಾಲಕ ಸೌಮಿತ್ರಾ ಗೋಖಲೆ, ಕ್ಷೇತ್ರ ಪ್ರಚಾರಕ ದೀಪಕ್ ವಿಸ್ಪುಟೆ ಮೊದಲಾದವರು ಉಪಸ್ಥಿತರಿದ್ದರು.

ಹಿಂದೂ ಸ್ವಯಂಸೇವಕ ಸಂಘ, ಸೇವಾ ಇಂಟರ್‌ನ್ಯಾಶನಲ್, ಫ್ರೆಂಡ್ಸ್ ಆಫ್ ಇಂಡಿಯಾ, ಹಿಂದೂ ಯುವ ಸಂಸ್ಕೃತಿಯ ಪ್ರಚಾರ ಕಾರ್ಯಕ್ಕೆ ಸಂಬಂಧಿಸಿದ ವಿವಿಧ ದೇಶಗಳಲ್ಲಿ ಕೆಲಸ ಮಾಡುತ್ತಿರುವ 13 ದೇಶಗಳ 53 ಕಾರ್ಯಕರ್ತರು ಇದರಲ್ಲಿ ಭಾಗವಹಿಸುತ್ತಿದ್ದು, ಇವರಲ್ಲಿ ಕೆನಡಾ, USA, UK ಮತ್ತು ಥೈಲ್ಯಾಂಡ್‌ನಂತಹ ದೇಶಗಳ ಸ್ವಯಂಸೇವಕರು ಸೇರಿದ್ದಾರೆ. ಈ ಶಿಬಿರದಲ್ಲಿ ಕಾರ್ಯಕರ್ತರು ಯೋಗ ಮತ್ತು ಭಾರತೀಯ ಕ್ರೀಡೆಗಳು, ಭಾರತದ ಭವ್ಯ ಇತಿಹಾಸ, ಭಾರತೀಯ ತತ್ತ್ವಶಾಸ್ತ್ರದ ಪರಿಚಯ, ವಿದೇಶದಲ್ಲಿ ವಾಸಿಸುತ್ತಿರುವಾಗ ಹೊಸ ಪೀಳಿಗೆಗೆ ಸವಾಲುಗಳು ಮತ್ತು ಮಧ್ಯಪ್ರದೇಶದ ಸಾಂಸ್ಕೃತಿಕ ಪರಿಚಯದ ಬಗ್ಗೆ ಚರ್ಚಿಸಲು ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ವರ್ಗದಲ್ಲಿ  ಸಾಂಸ್ಕೃತಿಕ ಪ್ರದರ್ಶನ, ಗ್ರಾಮ ದರ್ಶನ, ಮಾತೃ ಹಸ್ತೇ ಭೋಜನದಂತಹ ವಿಶೇಷ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.
 
ವರ್ಗದ ಸಮಾರೋಪ ಸಮಾರಂಭವು ಆಗಸ್ಟ್ 6 ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ.ಮೋಹನ್ ಭಾಗವತ್ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ.  ಇದೇ ರೀತಿಯ ಮಹಿಳಾ ಸ್ವಯಂಸೇವಕರ ವರ್ಗವು ಜುಲೈ 21 ರಿಂದ ‘ಸಮಾಜ ಸೇವಾ ನ್ಯಾಸ್’ ಭೋಪಾಲ್‌ನಲ್ಲಿ ಪ್ರಾರಂಭವಾಗಲಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.