





ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರದಲ್ಲಿ ಹೊಸದಾಗಿ ನಿರ್ಮಿಸಲಾದ ಸ್ವಾಮಿ ವಿವೇಕಾನಂದ ಸಭಾ ಗೃಹಂ ಹಾಗು ಅನ್ನಪೂರ್ಣ ಭವನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂಜನೀಯ ಸರಸಂಘಚಾಲಕರಾದ ಶ್ರೀ ಮೋಹನ್ಭಾಗವತ್ರವರು ಜನವರಿ 20ರಂದು ಉದ್ಘಾಟನೆ ಮಾಡಿದರು.
ಇದೇ ಸಂದರ್ಭದಲ್ಲಿ ಪದ್ಮಶ್ರೀ ನಿವೇದಿತಾ ಭಿಡೆಯವರು ಬರೆದಿರುವ on the Mission of Human Evolution – Indian culture challenges & Potentialities ಪುಸ್ತಕವನ್ನು ತಮಿಳುನಾಡಿನ ಘನತೆವೆತ್ತ ರಾಜ್ಯಪಾಲರಾದ ಶ್ರೀ ಆರ್.ಎನ್.ರವಿಯವರು ಬಿಡುಗಡೆ ಮಾಡಿ ಮಾತನಾಡಿದರು.
ಇದೇ ವೇಳೆ ವಿವೇಕಾನಂದ ಕೇಂದ್ರದ ಅಧ್ಯಕ್ಷರಾದ ಬಾಲಕೃಷ್ಣನ್,ಕೇಂದ್ರದ ಪ್ರಧಾನ ಕಾರ್ಯದರ್ಶಿಗಳಾದ ಬಾನು ದಾಸ್ ಹಾಗು ವೆಲ್ಲಿ ಮಲೈ ಸ್ವಾಮಿ ಪೂಜ್ಯ ಚೈತನ್ಯಾನಂದ ಮಹಾರಾಜ್ಜೀಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.