Must watch cinemas on Netaji Subhash chandra Bose

1.ಸಮಾಧಿ (1950)
ರಮೇಶ್ ಸೈಗಲ್ ಅವರ ನಿರ್ದೇಶನವಿರುವ ಈ ಚಲನಚಿತ್ರದಲ್ಲಿ ಸುಭಾಷ್ ಚಂದ್ರ ಬೋಸ್‌ರವರ ಸಿದ್ಧಾಂತಗಳು,ಅವರ ರಾಜಕೀಯ ನಿಲುವುಗಳನ್ನು ಮೂಡಿಸುತ್ತದೆ.ಈ ಚಿತ್ರವು ನೇರವಾಗಿ ಸುಭಾಷ್‌ರ ಜೀವನದ ಸುತ್ತ ನಡೆಯದಿದ್ದರೂ ಐಎನ್‌ಎಯ ಸೈನಿಕನ ಜೀವನದ ಕಥೆಯನ್ನು ಹೇಳುತ್ತ ಆ ಕಾಲಘಟ್ಟದ ಹೋರಾಟದ ಚಿತ್ರಣವನ್ನು ಕಟ್ಟಿಕೊಡುತ್ತದೆ.
https://youtu.be/hlyQFS9XAs8

2. ಸುಭಾಷ್ ಚಂದ್ರ (1966)

ಪಿಯೂಶ್ ಬೋಸ್‌ರವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಬಂಗಾಲಿ ಕ್ಲಾಸಿಕ್ ಚಲನಚಿತ್ರದಲ್ಲಿ ಸುಭಾಷ್ ಬೋಸರ ಬಾಲ್ಯ,ಯೌವ್ವನದ ದಿನಗಳು, ರಾಜಕೀಯ,ಮತ್ತು ಸ್ವಾತಂತ್ರ್ಯ ಹೋರಾಟಗಳನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.
https://youtu.be/gChnfBgZezA

3.ನೇತಾಜಿ ಸುಭಾಷ್ ಚಂದ್ರ ಬೋಸ್: ಫರ್ಗಾಟ್ಟನ್ ಹೀರೋ (2004)
2004ರಲ್ಲಿ ಬಿಡುಗಡೆಯಾದ ಈ ಸಿನೆಮಾದಲ್ಲಿ ಮಹಾತ್ಮ ಗಾಂಧೀಜಿಯವರು ಹಾಗೂ ಬೋಸರ ನಡುವೆ ನಡೆದ ವಿವಾದದ ಭೂಮಿಕೆಯಿಂದ ಆರಂಭಿಸಿ ಜರ್ಮನಿಗೆ ತಪ್ಪಿಸಿಕೊಳ್ಳುವ ಕಥಾ ಹಂದರವುಳ್ಳ ಐತಿಹಾಸಿಕ ಸಿನೆಮಾ. ಹಿರಿಯ ನಿರ್ದೇಶಕರಾದ ಶ್ಯಾಮ ಬೆನಗಲ್‌ರ ನಿರ್ದೇಶನ ಮಾಡಿದ್ದು, ಸಚಿನ್ ಖೇಡ್‌ಕರ್,ಜಿಷ್ಣು ಸೇನ್‌ಗುಪ್ತಾ,ಕುಲಭೂಷಣ್ ಖರಬಂಧ ಮುಂತಾದವರ ತಾರಾಗಣವಿದೆ.

4.. ಆಮಿ ಸುಭಾಷ್ ಬೋಲ್ಚಿ (2011)

ಈ ಸಿನೇಮಾದಲ್ಲಿ ಬಂಗಾಲದ ಸಾಮಾನ್ಯ ಮನುಷ್ಯನೊಬ್ಬನ ಜೀವನವು ಸುಭಾಷ್ ಚಂದ್ರ ಬೋಸರನ್ನು ಭೇಟಿ ಮಾಡಿದ ನಂತರ ವಿಚಿತ್ರ ತಿರುವು ಪಡೆದುಕೊಳ್ಳುತ್ತದೆ. ಮಹೇಶ್ ಮಂಜ್ರೇಕರ್  ಅವರ ನಿರ್ದೇಶನದ ಮಿಥುನ್ ಚಕ್ರವರ್ತಿ ಅಭಿನಯವು ತೆರೆಯ ಮೇಲೆ ಅತ್ಯಂತ ಆಪ್ತವಾಗಿ ಮೂಡಿಬಂದಿದೆ. ಇದು ಅಮೇಜಾನ್ ಪ್ರೈಮ್‌ನಲ್ಲಿ ಲಭ್ಯವಿದೆ.

5.ಬೋಸ್ : ಡೆಡ್/ಅಲೈವ್  (2017)

ಒಂಬತ್ತು ಸಂಚಿಕೆಗಳ ಈ ವೆಬ್ ಸೀರೀಸ್ ಸುಭಾಷ್ ಚಂದ್ರ ಬೋಸರು ನಿಗೂಢವಾಗಿ ಕಾಣೆಯಾದ ಮೇಲೆ ಸಾವಿನ ಸುತ್ತ ಇರುವ ಅನೇಕ ಹೊಸ ಆಯಾಮಗಳನ್ನು ತೆರೆದಿಡುತ್ತದೆ. ಈ ಸೀರೀಸ್‌ಅನ್ನು ಏಕ್ತಾ ಕಪೂರ್ ನಿರ್ದೇಶಿಸಿದ್ದು ರಾಜ್‌ಕುಮಾರ್ ರಾವ್ ಅವರು ಸುಭಾಷ್ ಚಂದ್ರ ಬೋಸ್‌ರ ಪಾತ್ರ ನಿರ್ವಹಿಸಿದ್ದಾರೆ‌ . ಇದು ಜಿಯೋ ಸಿನೇಮಾದಲ್ಲಿ ಲಭ್ಯವಿದೆ.

6.ರಾಗ್ ದೇಶ್ (2017)
ಎರಡನೆಯ ವಿಶ್ವಯುದ್ಧದ ನಂತರದ ಕಾಲಗಟ್ಟದ ಹಿನ್ನೆಲೆಯಲ್ಲಿ ಚಿತ್ರಿಸಲಾದ ಈ ಸಿನೇಮಾದಲ್ಲಿ ಸೇನೆಯು ಸುಭಾಷ್ ಚಂದ್ರ ಬೋಸರ ನೇತೃತ್ವದಲ್ಲಿ ಭಾರತಕ್ಕೆ ವಾಪಾಸಾಗಿ,ನಂತರದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಟಕ್ಕೆ ಸಜ್ಜಾಗುತ್ತದೆ.
ಡೈಲಿಮೋಷನ್ ವೆಬ್‌ಸೈಟ್‌ನಲ್ಲಿ ನೋಡಬಹುದು.

7. ಗುಮ್ನಾಮಿ (2019)
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ನಿಗೂಢವಾಗಿ ಕಾಣೆಯಾದ ನಂತರದಲ್ಲಿ ಗುಮ್ನಾಮಿ ಬಾಬಾ ಹೆಸರಿನಲ್ಲಿ ವಾಸಿಸುತ್ತಿದ್ದರೆಂದೂ ಪ್ರತೀತಿಯಿದೆ.ಆ ಕುರಿತಾದಂತೆ ಬೆಳಕು ಚೆಲ್ಲುವ ಸುಂದರ ಸಿನೇಮಾ.
ಇದು ಅಮೇಜಾನ್ ಪ್ರೈಮ್ ಮತ್ತು ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ.

8. ನೇತಾಜಿ (2019)
ನೇತಾಜಿ ಸುಭಾಷ್ ಚಂದ್ರಬೋಸರ ಪೂರ್ಣ ಜೀವನವನ್ನು ಚಿತ್ರಿಸುವ ಇತ್ತೀಚೆಗೆ ಜೀ ಬಂಗಾಲಿಯಲ್ಲಿ ಪ್ರಸಾರವಾಗುತ್ತಿರುವ ಸೀರಿಯಲ್ ನೇತಾಜಿ.ಇದನ್ನು ಕೋವಿಡ್‌ನ ನಂತರ ಇತರ ಭಾಷೆಗಳಲ್ಲೂ ಡಬ್ ಮಾಡಲಾಗಿದೆ.

9.ದಿ ಫರ್ಗಾಟ್ಟನ್ ಆರ್ಮಿ (2020)

ಸುಭಾಷ್‌ಚಂದ್ರ ಬೋಸರ ಐಎನ್‌ಎಯ ಕುರಿತಾದ ವೆಬ್‌ಸೀರೀಸ್ ಇದಾಗಿದ್ದು 2020ರ ಜನವರಿಯಲ್ಲಿ ಒಟಿಟಿ ಪ್ಲಾಟ್‌ಫಾರಮ್ಮಿನಲ್ಲಿಯೇ ಬಿಡುಗಡೆಗೊಂಡಿತು.ಕಭೀರ್ ಖಾನ್ ನಿರ್ದೇಶನದ ಆರು ಎಪಿಸೋಡುಗಳ ಈ ಸೀರೀಸ್‌ನಲ್ಲಿ ಐಎನ್‌ಎಯ ಬಗೆಗೆ ಅಪರಿಚಿತ ವಿಚಾರಗಳನ್ನು ಹೇಳುತ್ತಾ ಭಾವನಾತ್ಮಕವಾಗಿ ಮೂಡಿಬಂದಿದೆ‌.ಇದನ್ನು ಅಮೇಜಾನ್ ಪ್ರೈಮ್‌ನಲ್ಲಿ ನೋಡಬಹುದು.

Leave a Reply

Your email address will not be published.

This site uses Akismet to reduce spam. Learn how your comment data is processed.