Sri Arun Kumar speaks at SDM College Mangalore on Wednesday evening

Mangalore Oct 3: ‘Voice of Nationalist forces in Jammu & Kashmir should be strengthened by all citizens pf the country. The problem of Jammu and Kashmir lies at originated and nurtured at Delhi  not in Jammu and Kashmir’ said  Arun Kumar, Director of Jammu and Kashmir Study Centre New Delhi at Mangalore this evening.

Arun Kumar was addressing a gathering of select intellectuals at Mangalore’s SDM College Auditorium in a programme jointly organised by ‘Manthana’- a forum for intellectual debate and Citizens Council Mangalore.

Sri Arun Kumar speaks at SDM College Mangalore on Wednesday evening
Sri Arun Kumar speaks at SDM College Mangalore on Wednesday evening

sdm sdm3

ಕಾಶ್ಮೀರ ಸಮಸ್ಯೆ ಪರಿಹರಿಸಲು ದೆಹಲಿಯಲ್ಲಿ ಚರ್ಚೆಯಾಗಲಿ: ಅರುಣ್ ಕುಮಾರ್
ಎಸ್‌ಡಿಎಂ ಕಾಲೇಜಿನಲ್ಲಿ ವಿಚಾರ ಸಂಕಿರಣ
ಮಂಗಳೂರು: ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ದೆಹಲಿಯಲ್ಲಿ ಚರ್ಚೆಯಾಗಬೇಕು. ಸರಕಾರ ಇಚ್ಛಾಶಕ್ತಿಯಿಂದ ಅಲ್ಲಿನ ಪರಿಹರಿಸುವ ನಿಟ್ಟಿನಲ್ಲಿ ಸರಕಾರ ಕಾರ್ಯೋನ್ಮುಖವಾಗಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಅಧ್ಯಯನ ಕೇಂದ್ರ ನವದೆಹಲಿ ಇದರ ನಿರ್ದೇಶಕ ಅರುಣ್ ಕುಮಾರ್ ಹೇಳಿದರು.
ಮಂಥನ ಮಂಗಳೂರು ಮತ್ತು ಸಿಟಿಜನ್ ಕೌನ್ಸಿಲ್ ಆಶ್ರಯದಲ್ಲಿ ಬುಧವಾರ ನಗರದ ಎಸ್‌ಡಿಎಂ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ `ಜಮ್ಮು ಮತ್ತು ಕಾಶ್ಮೀರದ ಸವಾಲುಗಳು ಮತ್ತು ಪರಿಹಾರ’ ಕುರಿತ ವಿಷಯದ ಕುರಿತಂತೆ ಅವರು ತಮ್ಮ ವಿಚಾರ ಮಂಡಿಸಿದರು.
ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಗಳನ್ನು ಪಟ್ಟಿ ಮಾಡುತ್ತ ಕುಳಿತರೆ ಪ್ರಯೋಜನವಾಗದು. ಸರಕಾರ ದಿಟ್ಟ ನಿಲುವನ್ನು ಪ್ರದರ್ಶಿಸಿದರೆ ಸಮಸ್ಯೆಗೆ ಪರಿಹಾರ ದೊರಕಲು ಸಾಧ್ಯ. ಈ ದೇಶದ ಜನತೆಗೆ ಜಮ್ಮು ಮತ್ತು ಕಾಶ್ಮೀರದ ಜನತೆಯ ಸಮಸ್ಯೆಗಳೇನು ಎಂಬುದರ ಬಗ್ಗೆ ಆಳವಾದ ಅರಿವಿಲ್ಲ. ಕೇಂದ್ರ ಸರಕಾರ ಎಚ್ಚೆತ್ತುಕೊಂಡು ಅಲ್ಲಿನ ಜನತೆ ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಿಸಬೇಕು ಎಂದರು.
ನಿತ್ಯ ಭಯೋತ್ಪಾದನೆಯ ಭಯದಲ್ಲೆ ಬದುಕುವ ಅಲ್ಲಿನ ಜಮ್ಮು ಮತ್ತು ಕಾಶ್ಮೀರದಲ್ಲಿದೆ. ಅಲ್ಲಿನ ರಾಷ್ಟ್ರವಾದದ ಶಕ್ತಿಗಳ ಜೊತೆಗೆ ಇಡೀ ದೇಶದ ಜನತೆ ಜಾಗೃತರಾಗಿ ಕೈಜೋಡಿಸಬೇಕು. ಜನತೆಗೆ ಧೈರ್ಯ ತುಂಬುವ ಮೂಲಕ ದುಷ್ಟ ಶಕ್ತಿಗಳ ದಮನಕ್ಕೆ ಇಡೀ ರಾಷ್ಟ್ರ ಸಜ್ಜಾಗಬೇಕು. ಹೆಚ್ಚಾಗಿ ಜಮ್ಮು ಮತ್ತು ಕಾಶ್ಮೀರ ನಮ್ಮದೇ ಎಂಬ ಪ್ರೀತಿ ಬೆಳೆಯಬೇಕು ಎಂದು ಅರುಣ್ ಕುಮಾರ್ ಹೇಳಿದರು.
ಎಸ್‌ಡಿಎಂ ಕಾಲೇಜಿನ ನಿರ್ದೇಶಕ ಡಾ.ಕೆ.ದೇವರಾಜ್, ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.