
ಬೆಂಗಳೂರು: ರಾಜ್ಯದ ಸುದ್ದಿ ಸಂವಹನ ಸಂಸ್ಥೆ ‘ವಿಶ್ವ ಸಂವಾದ ಕೇಂದ್ರ ಕರ್ನಾಟಕ’, ಇದರ ವತಿಯಿಂದ ನೀಡಲಾಗುವ ವಾರ್ಷಿಕ ವಿಎಸ್ಕೆ ಮಾಧ್ಯಮ ಪ್ರಶಸ್ತಿಯ ೨೦೨೩ನೇ ಸಾಲಿನ ಪುರಸ್ಕೃತರ ಹೆಸರನ್ನು ಪ್ರಕಟಿಸಲಾಗಿದೆ.
ಪ್ರಶಸ್ತಿ ಪುರಸ್ಕೃತರು
ತಿ.ತಾ. ಶರ್ಮ ಪತ್ರಿಕೋದ್ಯಮ ಪ್ರಶಸ್ತಿ:
ಶ್ರೀ ರವಿಪ್ರಕಾಶ್ ಎಸ್, ಪ್ರಜಾವಾಣಿ
ಶ್ರೀ ಜಯಪ್ರಕಾಶ್ ಶೆಟ್ಟಿ, ಸುವರ್ಣ ನ್ಯೂಸ್ ವಾರ್ತಾ ವಾಹಿನಿ
ಬೆ.ಸು.ನಾ. ಮಲ್ಯ ಪತ್ರಿಕೋದ್ಯಮ ಪ್ರಶಸ್ತಿ:
ಶ್ರೀ ಎಂ. ಶ್ರೀನಿವಾಸನ್, ಅಜೇಯ, ಶಿವಮೊಗ್ಗ
ಹೊ.ವೆ. ಶೇಷಾದ್ರಿ ಅಂಕಣಕಾರ ಪ್ರಶಸ್ತಿ:
ಶ್ರೀ ಹೆಬ್ರಿ ಬಾಲಕೃಷ್ಣ ಮಲ್ಯ, ಹೊಸದಿಗಂತ
ಶ್ರೀ ಕಾ. ರಮಾನಂದ ಆಚಾರ್ಯ, ವಿಕ್ರಮ ವಾರಪತ್ರಿಕೆ
ವಿ.ಎಸ್.ಕೆ. ಡಿಜಿಟಲ್ ಮಾಧ್ಯಮ ಪ್ರಶಸ್ತಿ:
ಶ್ರೀ ಎಂ. ಎಸ್. ರಾಘವೇಂದ್ರ, ಮೀಡಿಯಾ ಮಾಸ್ಟರ್ಸ್
ವಿಎಸ್ಕೆ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭವು ಜೂನ್ ೨೫, ೨೦೨೩, ಭಾನುವಾರ ಬೆಳಗ್ಗೆ ೧೦:೩೦ಕ್ಕೆ ಬೆಂಗಳೂರಿನ ಬಸವನಗುಡಿಯ ಬಿ.ಎಂ.ಎಸ್. ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ಡಾ. ನಿರಂಜನ ವಾನಳ್ಳಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ-ಮಧ್ಯ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ: 8197306857, 9945242996





