ಸಕ್ಷಮ ಕರ್ನಾಟಕ ದಕ್ಷಿಣ ಪ್ರಾಂತ ಇದರ ಪ್ರಾಂತ ಕಾರ್ಯಕಾರಿಣಿ ಸಭೆ ಹಾಗು ದಿವ್ಯಾಂಗ ಸೇವಾ ಕೇಂದ್ರ ಅಭ್ಯಾಸವರ್ಗ ಎರಡು ದಿನಗಳ ಕಾರ್ಯಕ್ರಮವು ಜೂನ್ ೧೬ ಹಾಗೂ ಜೂನ್ ೧೭ರಂದು ಮಂಗಳೂರಿನ ಸಂಘನಿಕೇತನದಲ್ಲಿ ನಡೆಯಿತು.
ಒಂದು ದಿನದ ದಿವ್ಯಾಂಗ ಸೇವಾ ಕೇಂದ್ರ ಅಭ್ಯಾಸವರ್ಗ ಮಂಗಳೂರಿನ ಸಂಘನಿಕೇತನದಲ್ಲಿ ದಿನಾಂಕ ೧೭-೦೨೦೧೯ ರ ಸೋಮವಾರದಂದು ನಡೆಯಿತು .
ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ
ಶ್ರೀ ಸುಂದರ ಪೂಜಾರಿ, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ದಕ್ಷಿಣ ಕನ್ನಡ ಇವರು ಉದ್ಘಾಟಿಸಿದರು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಶಿಬಿರಾರ್ಥಿಗಳಿಗೆ ತಿಳಿಸಿದರು .
ಪ್ರಾಸ್ತಾವಿಕ ನುಡಿಯನ್ನು ಶ್ರೀ ಜಯರಾಮ ಬೊಳ್ಳಾಜೆ, ಸಕ್ಷಮ, ದಕ್ಷಿಣ ಕರ್ನಾಟಕ ಸಂಘಟನಾ ಕಾರ್ಯದರ್ಶಿ ಇವರು ಮಾತನಾಡಿ ಸಂಘಟನೆಯ ರೂಪುರೇಷೆಗಳ ಬಗ್ಗೆ, ಭಾರತದ ಆದರ್ಶ ತ್ಯಾಗ ಮತ್ತು ಸೇವೆಗಳ ಬಗ್ಗೆ ಮಾಹಿತಿಯನ್ನು ನೀಡಿದರು .
ಕಾರ್ಯ ಮತ್ತು ಕಾರ್ಯಕರ್ತರ ಕಾರ್ಯ ಚಟುವಟಿಕೆಗಳ ಬಗ್ಗೆ ಬಂದಂತಹ ಶಿಬಿರಾರ್ಥಿಗಳಿಗೆ ಡಾ।।ವಾಮನ ಶೆಣೈ, ಸಹ ಸಂಘ ಚಾಲಕರು, ರಾಷ್ಟ್ರೀಯ ಸ್ವಯಂಸೇವಕ ಸಂಘ ಕರ್ನಾಟಕ ದಕ್ಷಿಣ ಪ್ರಾಂತ ಇವರು ಮಾಹಿತಿಯನ್ನು ನೀಡಿದರು .
ಕಾರ್ಯಕ್ರಮವು ಒಟ್ಟು ನಾಲ್ಕು ಅವಧಿಯಾಗಿದ್ದು ಮೊದಲನೇ ಅವಧಿಯಲ್ಲಿ ದಿವ್ಯಾಂಗ ಸೇವಾ ಕೇಂದ್ರದ ಪರಿಕಲ್ಪನೆಯ ಬಗ್ಗೆ ಡಾ।। ಮುರಳೀಧರ ನಾಯಕ್, ಸಕ್ಷಮ, ಮಂಗಳೂರು ಜಿಲ್ಲಾ ಅಧ್ಯಕ್ಷರು ಮಾಹಿತಿಯನ್ನು ನೀಡಿದರು.
ಮಂಗಳೂರು ದಿವ್ಯಾಂಗ ಸೇವಾ ಕೇಂದ್ರದ ಅಧ್ಯಕ್ಷರಾದ ಶ್ರೀ ಗುಣಪಾಲರವರು ಮಾತನಾಡಿ ಈ ಕ್ಷೇತ್ರದ ಸಮಸ್ಯೆಗಳು ಮತ್ತು ಪರಿಹಾರದ ಬಗ್ಗೆ ಮಾಹಿತಿಯನ್ನು ನೀಡಿದರು .
ಅವಧಿ ಎರಡರಲ್ಲಿ ಶ್ರೀಮತಿ ಯಮುನಾ, ವಿಶೇಷಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಇವರು ಮಾತನಾಡಿ ಸರ್ಕಾರದಿಂದ ದಿವ್ಯಾಂಗ ಕ್ಷೇತ್ರಕ್ಕೆ ಲಭ್ಯವಿರುವ ವಿವಿಧ ಸವಲತ್ತುಗಳ ಬಗ್ಗೆ ಮತ್ತು ಅವುಗಳನ್ನು ಪಡೆದುಕೊಳ್ಳುವ ಬಗ್ಗೆ ಮಾಹಿತಿಯನ್ನು ನೀಡಿದರು .
ಅವಧಿ ಮೂರರಲ್ಲಿ ದಿವ್ಯಾಂಗ ಸೇವಾ ಕೇಂದ್ರದ ಚಟುವಟಿಕೆಗಳು ಸೇವಾ ಕಾರ್ಯಗಳು ಮತ್ತು ಸರ್ಕಾರಿ ಸವಲತ್ತುಗಳನ್ನು ಪಡೆಯುವ ಹಾಗೂ ಅರ್ಜಿಯನ್ನು ಸಲ್ಲಿಸುವ ಬಗ್ಗೆ ಮಾಹಿತಿಯನ್ನು ಡಾ।। ಮುರಳಿಧರನಾಯಕ್ ರವರು ನೀಡಿದರು .ಸಕ್ಷಮ ದಿವ್ಯಾಂಗ ಸೇವಾ ಕೇಂದ್ರದ ಮುಂದಿನ ಗುರಿ ಹಾಗೂ ಯೋಜನೆಗಳ ಬಗ್ಗೆ ಕೆ.ವಿ ರಾಜಣ್ಣ, ಮಾಜಿ ರಾಜ್ಯ ಆಯುಕ್ತರು, ಅಂಗವಿಕಲ ವ್ಯಕ್ತಿಗಳ ಕಾಯ್ದೆ ಕರ್ನಾಟಕ, ಇವರು ಮಾಹಿತಿಯನ್ನು ನೀಡುವುದರೊಂದಿಗೆ ಒಂದು ದಿನದ ಈ ವಿಶೇಷ ಕ್ಷೇತ್ರ ದಿವ್ಯಾಂಗ ಸೇವಾ ಕೇಂದ್ರ ಅಭ್ಯಾಸ ವರ್ಗವು ಸಮಾಪ್ತಿಯಾಯಿತು .
ಕಾರ್ಯಕ್ರಮದ ನಿರೂಪಣೆಯನ್ನು ಹರಿಕೃಷ್ಣ ರೈ, ಸಕ್ಷಮ, ದಕ್ಷಿಣ ಕರ್ನಾಟಕ ಪ್ರಾಂತ್ಯ ಸಹ ಕಾರ್ಯದರ್ಶಿಗಳು ನೆರವೇರಿಸಿದ್ದು , ಜಗದೀಶ್ ಅವರು ಪ್ರಾರ್ಥನೆಯನ್ನು ನೆರವೇರಿಸಿದರು . ಶ್ರೀ ಜನಾರ್ದನ ಉಡುಪಿ ಜಿಲ್ಲಾ ಉಪಾಧ್ಯಕ್ಷರು ವಂದನಾರ್ಪಣೆ ಸಲ್ಲಿಸಿದರು.