ಮತಾಂತರದಿಂದ ದೇಶಾಂತರ ಇದು ಬರೀ ಎರಡು ಪದಗಳಲ್ಲ ಇದು ವಾಸ್ತವ ಕೂಡ. ಮತಾಂತರದ ಪಿಡುಗು ನಮ್ಮ ದೇಶಕ್ಕೆ ಸಾವಿರಾರು ವರ್ಷಗಳಿಂದ ಕಾಡುತ್ತಿರುವ ಒಂದು ದೊಡ್ಡ ಸವಾಲೆ ಸರಿ ಆದರೆ ಕಳೆದ ಹಲವು ವರ್ಷಗಳಿಂದ ನಮ್ಮ ದೇಶದ ಆಂತರಿಕ ಸುರಕ್ಷತೆಯನ್ನೇ ಪ್ರಶ್ನಿಸುವ ಹಂತಕ್ಕೆ ಈ ಮತಾಂತರವು ತಲುಪಿದ್ದು ಇದನ್ನು ಈಗ ಕಾನೂನಾತ್ಮಕವಾಗಿಯಾದರೂ ತಡೆಯಲೇಬೇಕಾದ ಪ್ರಮೇಯ ಬಂದಿರುವುದು ನಮ್ಮ ದೇಶದ ಧೌರ್ಭಾಗ್ಯವೆ ಸರಿ.

ನಮ್ಮ ಸರ್ಕಾರಗಳು ಈಗಷ್ಟೇ ಎಚ್ಚೆತ್ತು ಮತಾಂತರ ವಿರೋಧಿ ಕಾನೂನು ಆತುರದಲ್ಲಿ ತರಹೊರಟಿರುವುದು ಸ್ವಾಗತಾರ್ಹ ಕೂಡ. ಆದರೆ ಆ ಮತಾಂತರವಿರೋಧಿ ಕಾನೂನಿನಲ್ಲಿ ಎನಿರಬೇಕು ಎಂಬುದರ ಕಡೆ ಕೂಲಂಕುಶವಾಗಿ ಗಮನ ಹರಿಸಿ ಸರ್ಕಾರವೂ ಅದನ್ನು ಆ ಕಾನೂನಿನ ಪರಿಧಿಯೊಳಗೆ ಅಳವಡಿಸಲೇಬೇಕು ಎಂಬುದು ಇಡೀ ಹಿಂದು ಸಮಾಜದ ಹಾಗೂ ಈ ದೇಶದ ಎಲ್ಲಾ ರಾಷ್ಟ್ರವಾದಿಗಳ ಆಗ್ರಹ ಕೂಡ.

ನಿಜ ನಾನೂ ಒಪ್ಪುತ್ತೀನಿ ಹುಟ್ಟುವಾಗ ಯಾರೂ ಯಾವ ಜಾತಿ ಧರ್ಮಗಳನ್ನು ಬಯಸಿ ಈ ಭೂಮಿಗೆ ಬಂದಿರುವುದಿಲ್ಲ ಆದರೆ ಹುಟ್ಟಿದ ಮೇಲೆ ಅವರಿಗೆ ಬೇರೆ ಧರ್ಮ ಅಥವಾ ಬೇರೆ ಮತಗಳ ಬಗ್ಗೆ ನಂಬಿಕೆ ಆಸಕ್ತಿ ಹುಟ್ಟಿ ಅದನ್ನು ಅವರೇ ಸ್ವಯಿಚ್ಚೆಯಿಂದ ಅನುಸರಿಸಲು ನಮ್ಮ ದೇಶದ ಕಾನೂನು ಅವಕಾಶಮಾಡಿಕೊಡುತ್ತದೆ ನಿಜ ಆದರೆ ಬಲವಂತದಿಂದ ಆದ ಮತಾಂತರವನ್ನೂ ಸಹ ನಮ್ಮ ದೇಶದ ಕಾನೂನು ಒಪ್ಪಿಕೊಳ್ಳುವುದಿಲ್ಲ ಹಾಗು ಅವಕಾಶನೀಡುವುದಿಲ್ಲ.

ಮೊದಲಿಗೆ ಈ ಮತಾಂತರ ವಿರೋಧಿ ಕಾನೂನಿನಲ್ಲಿ ಎನಿರಲೇಬೇಕು ????

  1. ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಮತಾಂತರ ಮಾಡುವಂತಿಲ್ಲ. ( ಕಾನ್ವೆಂಟ್ ಶಾಲೆಗಳ ಸೋಗಿನಲ್ಲಿ )
  2. ನಮ್ಮ ಹಿಂದು ಸಂಸ್ಕಾರದ ಅಂಗಗಳಾದ ಶ್ಲೋಕಗಳು,ವಚನಗಳು,ಸ್ತೋತ್ರಗಳನ್ನು ಮತಾಂತರಕ್ಕೆ ಅನುಕೂಲವಾಗುವಂತೆ ಮಾರ್ಪಾಡುಮಾಡಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿ ಪರಿಗಣಿಸಲ್ಪಡಬೇಕು.
  3. ನಮ್ಮ ಹಿಂದು ಗ್ರಂಥಗಳನ್ನು ಅಪಭ್ರಂಶಿಸಿ ಯಾವುದೇ ಅನ್ಯ ಮತೀಯರು ಮುದ್ರಿಸಿ ಹಂಚುವಂತಿಲ್ಲ. ಒಮ್ಮೆ ಈತರಹ ತಿರುಚಿ  ಮುದ್ರಿಸಿ ಹಂಚಿದರೆ ಅಥವಾ ಹಂಚಿ ಸಿಕ್ಕಿಬಿದ್ದರೆ ಬರೀ ಹಂಚಿದವರಷ್ಟೇ ಅಲ್ಲ ಅದನ್ನು ಮುದ್ರಿಸಿದವರು ಹಾಗೂ ಮುದ್ರಿಸಲು ಎಲ್ಲ ರೀತಿಯಲ್ಲಿ ಸಹಕರಿಸಿದವರನ್ನೂ ಜಾಮೀನು ರಹಿತ ಕಾನೂನಿನ ಮೂಲಕ ಬಂಧಿಸಿ ಅವರನ್ನು ಆ ಕಾನೂನು ರೀತ್ಯ ಶಿಕ್ಷೆಗೆ ಒಳಪಡಿಸಬೇಕು.
  4. ಎಲ್ಲಾ ರೀತಿಯ ಪ್ರಲೋಭನೆ / ಪ್ರಚೋದನೆ ನೀಡಿ ಮತಾಂತರಿಸುವ ಸಂಸ್ಥೆಗಳನ್ನು ಶಾಶ್ವತವಾಗಿ ಮುಚ್ಚುವುದರೊಂದಿಗೆ ಆ ಸಂಸ್ಥೆಗಳ ಪ್ರಮುಖ ವ್ಯಕ್ತಿಗಳು ಹಾಗೂ ಅದರ ರುವಾರಿಗಳನ್ನು ದೇಶದ್ರೋಹಿ ಕಾನೂನಿನ ಅಡಿಯಲ್ಲೂ ಶಿಕ್ಷಿಸಬೇಕು. ಹೀಗೆ ಬಂಧಿತರಾದವರಿಗೆ ನಮ್ಮ ದೇಶದ ಯಾವುದೇ ಸೌಲಭ್ಯಗಳು ಹಾಗೂ ಸವಲತ್ತುಗಳು ಸಿಗಬಾರದು. ಈ ವ್ಯಕ್ತಿಗಳು ಚುನಾವಣೆಗಳಲ್ಲಿ ಮತ ಚಲಾಯಿಸುವ ಹಕ್ಕನ್ನು ಸಹ ಕಳೆದುಕೊಳ್ಳುವಂತಾಗಬೇಕು.
  5. ಒಮ್ಮೆ ಮತಾಂತರವಾದ ವ್ಯಕ್ತಿ ಕನಿಷ್ಟ 10 ವರ್ಷಗಳಷ್ಟು ಯಾವುದೇ ಚುನಾವಣೆಗೆ ನಿಲ್ಲುವುದು ಅಥವಾ ಮತಚಲಾಯಿಸುವ ಹಕ್ಕಿನಿಂದ ವಂಚಿತರಾಗಬೇಕು.
  6. ಮತಾಂತರವಾದ ವ್ಯಕ್ತಿ ತಾನು ಅನ್ಯ ಮತವನ್ನು ಪಾಲಿಸುತ್ತಿರುವುದನ್ನು ಮರೆಮಾಚಿ ಯಾವುದೇ ಸರ್ಕಾರಿ ಸೌಲಭಯಗಳನ್ನು ಪಡೆದುಕೊಳ್ಳುವುದು ಕಂಡುಬಂದಲ್ಲಿ ಆ ವ್ಯಕ್ತಿಯನ್ನು ಕೂಡಲೇ ಅವನ ಸರ್ಕಾರಿ ವೃತ್ತಿಯಿಂದಲೋ ಅಥವಾ ಅವನು ಬಳಸಿಕೊಳ್ಳುತ್ತಿರುವ ಸವಲತ್ತುಗಳನ್ನು ಹಿಂಪಡೆದು ಆ ವ್ಯಕ್ತಿಯನ್ನು ಎಲ್ಲಾ ಸರ್ಕಾರಿ ಜವಾಬ್ದಾರಿಗಳಿಂದ ಮುಕ್ತ ಗೊಳಿಸಲೇಬೇಕು .
  7. ಸ್ವಇಚ್ಛೆಯಿಂದ ಮತಾಂತರವಾದ ವ್ಯಕ್ತಿ ಮುಂದಿನ 60 ದಿನಗೊಳಗಾಗಿ ತಪ್ಪದೇ ತನ್ನ ಹೊಸ ಧರ್ಮ/ ಮತವನ್ನು ಸರ್ಕಾರಿ ಕಡತಗಳಲ್ಲಿ ಅಡಕ ಗೊಳಿಸದೇ ಇದ್ದದ್ದು ಕಂಡುಬಂದಲ್ಲಿ ಈ ವ್ಯಕ್ತಿಯನ್ನು ಮತಾಂತರ ವಿರೋಧಿ ಕಾನೂನಿನ ಕಬಂಧ ಭಾಹುಗಳಲ್ಲಿ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು.
  8. ಮತಾಂತರವಾದ ಯಾವುದೇ ವ್ಯಕ್ತಿಯು ಮರಳಿ ತನ್ನ ಮಾತೃಧರ್ಮಕ್ಕೆ ಕಾನೂನಾತ್ಮಕವಾಗಿಯೇ ಪರಾವರ್ತಿತಗೊಳ್ಳಬೇಕು.
  9. ಒತ್ತಡಕ್ಕೊಳಗಾಗಿ ಮತಾಂತರವಾದ ವ್ಯಕ್ತಿಯು ಪೊಲೀಸ್, ಸೇನೆ, ವಕೀಲಿ ವೃತ್ತಿಗಳನ್ನು ಮಾಡುವಂತಿಲ್ಲ ಹಾಗೂ ಆಯಾ ವೃತ್ತಿಗಳಲ್ಲಿದ್ದು ಮತಾಂತರವಾದರೆ ಕೂಡಲೇ ಆಯಾ ವೃತ್ತಿಗಳಿಂದ ಸರ್ಕಾರವು ವಿಮುಕ್ತಿಗೊಳಿಸಬೇಕು.

ಈ ಮೇಲೆ ತಿಳಿಸಲು ಪ್ರಯತ್ನಿಸಿದ ವಿಷಯಗಳು ನಮ್ಮ ಹಿಂದು ಸಮಾಜದ ಸಂರಕ್ಷಣೆಯ ದೃಷ್ಟಿಯಿಂದಲೇ ಮಂಡಿಸಿದ್ದೇನೆ ಏಕೆಂದರೆ ಯಾವ ದೇಶ ತನ್ನ ಮೂಲ ಧರ್ಮವನ್ನು ಕಡೆಗಣಿಸಿತೋ ಆ ದೇಶ ಈ ಭೂಮಿಯಮೇಲೆ ತನ್ನ ಆಸ್ತಿತ್ವವನ್ನೇ ಕಳೆದುಕೊಂಡ ಹಲವಾರು ಉದಾಹರಣೆಗಳು ಅಮೇರಿಕಾ ದಂತಹ ಅಮೇರಿಕದಿಂದಲೇ ನಮಗೆ ನೋಡಸಿಗುತ್ತದೆ .

ನಮಗೆಲ್ಲ ತಿಳಿದಿರುವಂತೆ ಅಮೇರಿಕಾದ ಮೂಲ ನಿವಾಸಿಗಳು ರೆಡ್ ಇಂಡಿಯನ್ಸ್ ಹಾಗು ಅವರ ಮೂಲ ಧರ್ಮ ಕ್ರಿಶ್ಚಿಯಾನಿಟಿ ಆಗಿರಲಿಲ್ಲ. ಆಫ್ರಿಕನ್ನರ ಮೂಲ ಧರ್ಮ ಕ್ರಿಶ್ಚಿಯಾನಿಟಿ ಅಥವಾ ಇಸ್ಲಾಂ ಆಗಿರಲಿಲ್ಲ. ನಮ್ಮ ದೇಶದ ನೈಜ ಇತಿಹಾಸವನ್ನು ಕೆದುಕಿ ಪರಾಮರ್ಶಿಸಿದಾಗ ನಮಗೆ ತಿಳಿಯುವುದು ನಮ್ಮ ದೇಶದ ಧರ್ಮ ಸೈದ್ಧಾಂತಿಕ ನೆಲಗಟ್ಟಿನಮೇಲೆ ರೂಪುಗೊಂಡದ್ದಲ್ಲ ಬದಲಿಗೆ ಅದೊಂದು ವಿಚಾರಧಾರೆಯಾಗಿಯೇ ಅಂದಿನಿಂದಲೂ ನಮ್ಮ ದೇಶದ ನದಿಗಳ ರೀತಿಯಲ್ಲಿ ನಿರಂತರವಾಗಿ ಹರಿಯುತ್ತಲೇ ಇದೇ . ಆದರೆ ಇಂದಿನ ಕಾಲಘಟ್ಟದಲ್ಲಿ ಈ ಉತ್ಕೃಷ್ಟ ಹಿಂದೂ ವಿಚಾರಧಾರೆಯನ್ನೇ ತನ್ನ ಜೀವಾಳವಾಗಿಸಿಕೊಂಡಿರುವ ನಮ್ಮ ಭಾರತದೇಶವನ್ನು ಹೇಗಾದರೂ ಪುನಃ ಗುಲಾಮಗಿರಿಗೆ ತಳ್ಳುವ ದುಷ್ಟ ಹುನ್ನಾರವಿಟ್ಟುಕೊಂಡಿರುವ ಕೆಲವೇ ಘಟಭದ್ಧ ದುಃಶಕ್ತಿಪೂರಿತ ದೇಶವಿರೋಧಿ ಮಾನಸಿಕತೆ ಹೊಂದಿರುವ ನಮ್ಮ ದೇಶದಲ್ಲೇ ಹುಟ್ಟಿ ನಮ್ಮ ದೇಶದ ಅನ್ನ ನೀರು ಕುಡಿದು ನಮ್ಮ ದೇಶದಮೇಲೆಯೆ ವಿಷಕಾರುತ್ತಿರುವ ದೇಶದ್ರೋಹಿ ರಾಜಕೀಯ ಕುಟುಂಬಗಳು ಈ ಮತಾಂತರದ ಮೂಲಕ ದೇಶಾಂತರವನ್ನು ಕಳೆದ ಎಪ್ಪತ್ತು ವರ್ಷಗಳಿಂದ ಪೋಷಿಸುತ್ತಲೇ ಬಂದಿದೆ.

ಇನ್ನಾದರೂ ನಮ್ಮ ದೇಶದ ಜನತೆ ಈ ದುಷ್ಟಶಕ್ತಿಗಳನ್ನು ಸಮರ್ಥವಾಗಿ ಕಾನೂನಾತ್ಮಕವಾಗಿಯೂ ತಡೆಗಟ್ಟಿ , ಈ ಮತಾಂತರವಿರೋಧಿ ಕಾನೂನಿನ ಸದ್ ಬಳಕೆಯ ಮೂಲಕ ನಮ್ಮ ದೇಶದ ಆಂತರಿಕ ಭದ್ರತೆಗೆ ಉಪಯುಕ್ತವಾಗಿ ರೂಪಗೊಂಡು ಅನುಷ್ಟಾನಕ್ಕೆ ಆದಷ್ಟು ಶೀಘ್ರವಾಗಿ ಬರಲಿ ಎಂಬ ಆಷಾಯದೊಂದಿಗೆ ಈ ಮೇಲಿನ ಅನಿಸಿಕೆಗಳಿಗೆ ತಾತ್ಕಾಲಿಕ ವಿರಾಮ ನೀಡುತಿದ್ದೇನೆ .

2 thoughts on “ಮತಾಂತರ ವಿರೋಧಿ ಕಾಯ್ದೆಯಲ್ಲಿ ಏನಿರಬೇಕೆಂದರೆ …

  1. What if a Hindu wants to convert to another religion because of the atrocities he/she has faced from fellow Hindus?? Call me on 9980027367 and i shall explain this problem to you.

  2. ಸಮಯೋಚಿತ ,ಅರ್ಥಪೂರ್ಣ ವಿಚಾರಧಾರೆ. ಇಂದಿನ ಸಮಾಜಕ್ಕೆ ಅತ್ಯವಶ್ಯಕವಾದ ಸಂದೇಶ ಅಡಕವಾಗಿದೆ. ರಾಜಕೀಯ ಬಿಟ್ಟು ಹಿಂದೂ ರಾಷ್ಟ್ರ ಕಟ್ಟುವಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳು ಇತ್ತಕಡೆ ಗಂಭೀರವಾಗಿ ಯೋಚಿಸಬೇಕಿದೆ.
    ಧನ್ಯವಾದಗಳು ಚಿಂತನೆಗೆ ಒಡ್ಡುವ ಲೇಖನದ ಮಂಡನೆಗೆ..

Leave a Reply

Your email address will not be published.

This site uses Akismet to reduce spam. Learn how your comment data is processed.