Guru Nanak Dev Maharaj, Photo source: Internet

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಕಡೆಯ ದಿನದಂದು ಆರೆಸ್ಸೆಸ್ ನ ಸರಕಾರ್ಯವಾಹರಾದ ಸುರೇಶ್ (ಭಯ್ಯಾಜಿ) ಜೋಶಿಯವರು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆ.

Guru Nanak Dev Maharaj, Photo source: Internet

ಶ್ರೀ ಗುರು ನಾನಕ ದೇವ ಜೀ ಅವರ ೫೫೦ನೇ ಪ್ರಕಾಶ ಪರ್ವ.

ಸಂವತ್ ೧೫೨೬ರಲ್ಲಿ ಅಂದರೆ ೫೫೦ ವರ್ಷಗಳ ಹಿಂದೆ ರಾಯ್ ಭೋಯ್ ಕಿ ತಲ್ವಂಡಿಯಲ್ಲಿ ಶ್ರೀ ಗುರು ನಾನಕ ದೇವ ಜೀ ಅವರು ಶ್ರೀ ಮೆಹತಾ ಕಲ್ಯಾಣ ದಾಸ್ ಜೀ ಹಾಗೂ ಮಾತಾ ತೃಪ್ತಾರಿಗೆ ಜನಿಸಿದರು
ಅದಾಗಲೇ ವಿದೇಶೀ ಆಕ್ರಮಣಕಾರರು ಸಮಾಜದಲ್ಲಿದ್ದ ನ್ಯೂನತೆ, ಸಣ್ಣಪುಟ್ಟ ವೈಮನಸ್ಸುಗಳನ್ನು ಆಧರಿಸಿ ದೇಶದ ಧಾರ್ಮಿಕ, ಸಾಂಸ್ಕೃತಿಕ ಅಸ್ಮಿತೆಯನ್ನು ಭಂಜನ ಮಾಡುವಲ್ಲಿ ನಿರತರಾಗಿದ್ದರು. ಶ್ರೀ ಗುರು ನಾನಕ ಮಹಾರಾಜರು ಸತ್ಯ, ಜ್ಞಾನ, ಭಕ್ತಿ, ಕರ್ಮದ ಮಾರ್ಗದಲ್ಲಿ ಅಧ್ಯಾತ್ಮದ ಆಚರಣೆಯಿಂದ ಸಮಾಜದ ಹಾಗೂ ಸ್ವಯಂ ಉನ್ನತಿಗೆ ಮಾರ್ಗದರ್ಶಕರಾದರು. ಗೊಂದಲದಲ್ಲಿದ್ದ ಜನರಲ್ಲಿ ಈ ಮಾರ್ಗದ ಜ್ಞಾನದಿಂದಾಗಿ ರಾಷ್ಟ್ರೀಯ ಏಕತೆಯ ಪ್ರಜ್ಞೆ ಜಾಗೃತವಾಗತೊಡಗಿತು.
ಸಂವಾದದ ಮೂಲಕ ಶ್ರೀ ಗುರು ನಾನಕ ದೇವ್ ಮಹಾರಾಜರು ಸಮಾಜಕ್ಕೆ ಮಾರ್ಗದರ್ಶನ ಮಾಡತೊಡಗಿದರು. ಭಾರತದ ಉದ್ದಗಲವನ್ನು, ಇತರೆ ದೇಶಗಳನ್ನೂ ಗುರು ನಾನಕರು ಪ್ರವಾಸಮಾಡತೊಡಗಿದರು. ಈ ಪ್ರವಾಸಗಳನ್ನು ಉದಾಸಿ ಎಂದು ಕರೆಯಲಾಗುತ್ತಿತ್ತು. ಮುಲ್ತಾನದಿಂದ ಶ್ರೀಲಂಕಾದವರೆಗೆ, ಗುಜರಾತಿನ ಲಖಪತ್‌ನಿಂದ ಕಾಮರೂಪ, ಧಾಕಾದವರೆಗೆ ಮೂರು ಉದಾಸಿಗಳಾದರೆ, ನಾಲ್ಕನೆಯ ಉದಾಸಿ ಭಾಗ್ದಾದ್, ಇರಾನ್, ಕಾಂದಾಹಾರ್, ದಮಾಸ್ಕಸ್, ಮಿಸ್ರ್, ಮೆಕ್ಕ,ಮದೀನಾಗಳಿಗೆ ಪ್ರವಾಸಗೈದರು. ತಮ್ಮ ಸಮಕಾಲೀನ ಸಂತರು, ಸಿದ್ಧರು, ಯೋಗಿಗಳು, ಸೂಫಿ, ಫಕೀರರು, ಜೈನ್ ಹಾಗೂ ಬೌದ್ಧ ಸಂತರುಗಳ ಜೊತೆ ಸಂವಾದ ನಡೆಸುತ್ತಾ ಅಧ್ಯಾತ್ಮ, ತರ್ಕಗಳ ಆದಾರದಲ್ಲಿ ಧರ್ಮ/ಜಾತಿಯೊಳಗಿನ ಮೂಢನಂಬಿಕೆಗಳನ್ನು ಪ್ರಶ್ನಿಸತೊಡಗಿದರು.

ಮತಾಂಧ ಮೊಗಲ್ ದೊರೆ ಬಾಬರನ ಆಕ್ರಮಣವನ್ನು ಎದುರಿಸಲು ದೇಶಕ್ಕೆ ಕರೆ ನಿಡಿದವರು ಗುರುನಾನಕ ದೇವರು. ಆತ್ಮಗೌರವದಿಂದ ಜೀವಿಸಲು ಭಾರತೀಯರಿಗೆ ಪ್ರೇರಣೆ ಒದಗಿಸಿದ ಹಾಗೂ ತ್ಯಾಗದ ಪರಂಪರೆಯನ್ನು ಭಾರತೀಯರಿಗೆ ಬೋಧಿಸಿ ಆಕ್ರಮಣಕಾರರಿಗೆ ಸಿಂಹಸ್ವಪ್ನವಾಗಿದ್ದರು. ಅವರು ’ಕಿರತಕರ ನಾಮ ಜಪ ವಂದ ಚಕ್ ’ (ಕಷ್ಟಪಟ್ಟು ದುಡಿದು ದೇವರನ್ನು ನೆನೆದು ಜನರ ಜೊತೆ ಸಹಬಾಳ್ವೆಯಿಂದ ಬಾಳುವುದನ್ನು) ಬೋಧಿಸಿದವರಾಗಿದ್ದರು.

ಶ್ರೀ ಗುರು ನಾನಕರ ಸಂದೇಶವನ್ನು ಎಲ್ಲ ಜನರಿಗೆ ತಲುಪಿಸುವ ಜವಾಬ್ದಾರಿ ನಮ್ಮದಾಗಿದೆ. ಸಮಾಜದಲ್ಲಿನ ಎಲ್ಲರ ಸಹಕಾರ, ಸಹಯೋಗದೊಂದಿಗೆ ಶ್ರೀ ಗುರು ನಾನಕರ ೫೫೦ ನೇ ಪ್ರಕಾಶ ಪರ್ವವನ್ನು ವಿಜೃಂಭಣೆಯಿಂದ ಸ್ವಯಂಸೇವಕರೆಲ್ಲರೂ ಆಚರಿಸಬೇಕಿದೆ.

– ಸುರೇಶ್ (ಭಯ್ಯಾಜಿ) ಜೋಶಿ
ಸರಕಾರ್ಯವಾಹ, ಆರೆಸ್ಸೆಸ್

Suresh (Bhayyaji) Joshi, Sarkaryavah, RSS

 

Leave a Reply

Your email address will not be published.

This site uses Akismet to reduce spam. Learn how your comment data is processed.